ಕ್ರಮಕ್ಕೆ ಮನವಿ
ಚಾಮರಾಜನಗರ: ತಾಲೂಕಿನ ವೀರನಪುರ ಗ್ರಾಮದ ೩೦ ಮೀಟರ್ ಅಂತರದಲ್ಲಿ ಸರ್ವೇ ನಂ. ೨೯೮ ರಲ್ಲಿ ೨.೩೦ (ಎರಡು ಎಕರೆ ಮೂವತ್ತು ಗುಂಟೆ) ಸರ್ಕಾರಿ ಖರಾಬು ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಕೇಳಲು ಹೋದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಿಂಗಣಾಪುರ ಗುರುಸ್ವಾಮಿ ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸರ್ವೇ ನಂ. ೬೦/೨, ೬೨/೨, ರೂಪೇಶ್ ಕುಮಾರ್ ರೆಡ್ಡಿ ಇವರ ಹೆಸರಿನಲ್ಲಿ ಗಣಿಗಾರಿಕೆ ನಡೆಸಲು ಪರ್‍ಮಿಟ್ ಇದೆ. ಇವರು ಬೇರೆಯವರಿಗೆ ಸಬ್ ಲೀಸ್ ಆದಿಶೇಷ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರು ಗೋಪಾಲರೆಡ್ಡಿ ಬಿನ್ ಬೂಸಿರೆಡ್ಡಿ ಮತ್ತು ಭಾಸ್ಕರ್ ರೆಡ್ಡಿ ಇವರಿಗೆ ಕೊಟ್ಟಿರುತ್ತಾರೆ. ಈ ಸರ್ವೇ ನಂಬರ್‌ನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಈ ಸರ್ವೇ ನಂ. ಊರಿನಿಂದ ಸುಮಾರು ೩೦೦ ಮೀಟರ್ ಅಂತರದಲ್ಲಿ ಎಂದು ಹೇಳಿದರು.ಈ ಸರ್ವೆ ನಂಬರ್ ಪಕ್ಕದಲ್ಲೇ ಸರ್ವೇ ನಂ. ೨೯೮ ರಲ್ಲಿ ೨.೩೦ (ಎರಡು ಎಕರೆ ಮೂವತ್ತು ಗುಂಟೆ) ಸರ್ಕಾರಿ ಖರಾಬು ಜಮೀನಿದ್ದು ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಈಗಾಗಲೇ ಸುಮಾರು ೫,೦೦೦ ಕ್ಯೂಬಿಕ್ ಮೀಟರ್‌ನಷ್ಟು ಕಪ್ಪು ಶಿಲೆ ದಿಮ್ಮಿಗಳನ್ನು ತೆಗೆದು ಅಕ್ರಮವಾಗಿ ರವಾನೆ ಮಾಡಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರೂ ಏನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ವೀರನಪುರ ಗ್ರಾಮದ ಚಿನ್ನಪ್ಪ, ಕೆಂಪಣ್ಣ, ಗುರುಸ್ವಾಮಿ ಇದ್ದರು.