ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮ ಮೈನಿಂಗ್

KannadaprabhaNewsNetwork | Published : Nov 18, 2024 12:01 AM

ಸಾರಾಂಶ

ಕನಕಪುರ: ತಾಲೂಕಿನ ಪ್ರಾಕೃತಿಕ ಸಂಪತ್ತನ್ನು ಅಧಿಕಾರಗಳ ಅಲಕ್ಷ್ಯ ಹಾಗೂ ಕುಮ್ಮಕ್ಕಿನಿಂದ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಲೂಟಿಯಲ್ಲಿ ತೊಡಗಿಸಿಕೊಂಡಿವೆ ಎಂದು ತಾಲೂಕು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕನಕಪುರ: ತಾಲೂಕಿನ ಪ್ರಾಕೃತಿಕ ಸಂಪತ್ತನ್ನು ಅಧಿಕಾರಗಳ ಅಲಕ್ಷ್ಯ ಹಾಗೂ ಕುಮ್ಮಕ್ಕಿನಿಂದ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಲೂಟಿಯಲ್ಲಿ ತೊಡಗಿಸಿಕೊಂಡಿವೆ ಎಂದು ತಾಲೂಕು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಪ್ರದೇಶದ ನೈಸರ್ಗಿಕ ಸಂಪತ್ತು ಅ ಪ್ರದೇಶದ ಪ್ರಾಕೃತಿಕ ಸೊಬಗನ್ನು ಹೆಚ್ಚಿಸುವುದೆ. ಇಂತಹ ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕಾದವರೇ ಕಳ್ಳರ ಜೊತೆ ಸೇರಿ ಭಕ್ಷಕರಾಗಿರುವ ಪರಿಣಾಮ ಲೂಟಿಯಾಗುತ್ತಿದೆ ಎಂದು ವಿಷಾದಿಸಿದರು.

ಇಂತಹ ಕರಾಳ ಇತಿಹಾಸವನ್ನು ಒಳಗೊಂಡ ತಾಲೂಕಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಕನಕಪುರ ತಾಲೂಕಿನ ಕಸಬಾ ಹೋಬಳಿ, ತುಂಗಣಿ ಗ್ರಾಪಂ ವ್ಯಾಪ್ತಿಯ ರಾಯಸಂದ್ರ ಸರ್ವೇ ನಂ. 196ರಲ್ಲಿ. ಅಪಾರ ಪ್ರಮಾಣದ ಬೆಲೆ ಬಾಳುವ ಕಪ್ಪು ಗ್ರಾನೈಟ್ ಕಲ್ಲು ಹಾಗೂ ಮಣ್ಣನ್ನು ಕಳೆದ ವಾರ ಅಪರಿಚಿತರುಸಾಗಿಸುತ್ತಿದ್ದರು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ ಪಡೆದು ಸ್ಥಳಕ್ಕೆ ಬಂದು ಕಳ್ಳಸಾಗಣೆ ನಡೆಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಬದಲು ಆಮಿಷಕ್ಕೆ ಒಳಗಾಗಿ ವಾಪಸ್ ತೆರಳಿದ್ದಾರೆ ಎಂದು ಆರೋಪಿಸಿದರು.

ಲೂಟಿಕೋರರು ಅಂದು ರಾತ್ರಿಯೇ ಎಲ್ಲಾ ವಾಹನಗಳ ಸಮೇತ ಮತ್ತಷ್ಟು ಕಲ್ಲು, ಮಣ್ಣನ್ನು ದೋಚಿ ಪರಾರಿಯಾಗಿದ್ದು ಇದರಿಂದ ಕಪ್ಪು ಗ್ರಾನೈಟ್ ಕಲ್ಲು ಹಾಗೂ ಮಣ್ಣಿನ ನಿಕ್ಷೇಪ ಕಾಣೆಯಾಗಿದೆ. ಅಲ್ಲದೇ ಅಲ್ಲಿನ ರಸ್ತೆ ಕೂಡ ಹಾಳಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಕಳ್ಳರ ಜೊತೆ ಸಹಕರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮಾಧಿಕಾರಿ ಹಾಗೂ ಸ್ಥಳೀಯ ಗ್ರಾಪಂ ಪಿಡಿಒಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಕಾನೂನಿನನ್ವಯ ಶಿಕ್ಷೆಗೆ ಗುರಿಪಡಿಸಬೇಕೆಂದು ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೆ ಕೆ ಪಿ ಸುದ್ದಿ 02(1):

ಕನಕಪುರ ತಾಲೂಕಿನ ರಾಯಸಂದ್ರ ಬಳಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವುದು.

Share this article