ಮರಳು, ಎಂ-ಸ್ಯಾಂಡ್ ಅಕ್ರಮ ದಂಧೆ: ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jan 15, 2026, 03:00 AM IST
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಜಿಲ್ಲೆಯಲ್ಲಿ ಹಳ್ಳ ಹಾಗೂ ನದಿ ದಡಗಳಲ್ಲಿ ಅನಧಿಕೃತವಾಗಿ ಬೋಟ್‌ಗಳ ಮೂಲಕ ಫಿಲ್ಟರ್‌ ಮಾಡಿ ಮರಳು ತೆಗೆಯುವ ಹಾಗೂ ಪರವಾನಗಿ ಇಲ್ಲದೆ ಎಂ-ಸ್ಯಾಂಡ್ ಕ್ರಷರ್‌ಗಳನ್ನು ನಡೆಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಂ-ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಜಿಲ್ಲೆಯಲ್ಲಿ ಹಳ್ಳ ಹಾಗೂ ನದಿ ದಡಗಳಲ್ಲಿ ಅನಧಿಕೃತವಾಗಿ ಬೋಟ್‌ಗಳ ಮೂಲಕ ಫಿಲ್ಟರ್‌ ಮಾಡಿ ಮರಳು ತೆಗೆಯುವ ಹಾಗೂ ಪರವಾನಗಿ ಇಲ್ಲದೆ ಎಂ-ಸ್ಯಾಂಡ್ ಕ್ರಷರ್‌ಗಳನ್ನು ನಡೆಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಂ-ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಗೋಕಾಕ ತಾಲೂಕಿನ ದುಂಡಾನಟ್ಟಿ ಹಾಗೂ ಬೆಣಚಿನಮರಡಿ ಗ್ರಾಮದ ಸವಳ ಹಳ್ಳದಲ್ಲಿ ಅಕ್ರಮವಾಗಿ ಬೋಟ್‌ಗಳನ್ನು ಬಳಸಿ ಮರಳು ಸಾಗಾಣಿಕೆ ನಡೆಯುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ಯಮಕನಮರಡಿ ಸಮೀಪದ ಅರಳಿಕಟ್ಟಿ ಹಾಗೂ ಚಿಲಭಾವಿ ಡ್ಯಾಂ ನೀರಿನ ದಡದಲ್ಲಿ, ಸವದತ್ತಿ ತಾಲೂಕಿನ ತೆಗ್ಗಿಹಾಳ, ಮುನವಳ್ಳಿ, ಅರಳಿಕಟ್ಟಿ, ಜಕಬಾಳ, ಬುಡಾರಹಳ್ಳಿ ಹಾಗೂ ರಾಮದುರ್ಗ ತಾಲೂಕಿನ ಸುರೇಬಾನ ಮತ್ತು ಮುಳ್ಳೂರ ಗ್ರಾಮಗಳಲ್ಲಿ ಅನಧಿಕೃತವಾಗಿ ಬೋಟ್‌ಗಳು ಮತ್ತು ಹಿಟಾಚಿಗಳ ಮೂಲಕ ಫಿಲ್ಟರ್‌ ಮಾಡಿದ ಮರಳನ್ನು ಸಾಗಿಸಲಾಗುತ್ತಿದೆ ಎಂದು ದೂರಿದ್ದಾರೆ.ಈ ಅಕ್ರಮ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತಹಸೀಲ್ದಾರ್‌ರು, ಪೊಲೀಸ್‌ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯರಗಟ್ಟಿ ತಾಲೂಕಿನ ಯರಗಣವಿ ಗ್ರಾಮದ ಶ್ರೀದೇವಿ ಕ್ರಷರ್‌ ಹಾಗೂ ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ವಿ.ಎಸ್.ವಾಲಿ ಎಂಬುವವರ ಕ್ರಷರ್‌ಗಳಿಗೆ ಕ್ವಾರಿ ಇಲ್ಲದಿದ್ದರೂ ಎಂ-ಸ್ಯಾಂಡ್ ಉತ್ಪಾದನೆ ನಡೆಸಲಾಗುತ್ತಿದೆ. ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಯಲ್ಲಮ್ಮದೇವಿ ಕ್ರಷರ್‌ ಪರವಾನಗಿ ಪಡೆಯದೇ ಕಡಿಮೆ ದರದಲ್ಲಿ ಎಂ-ಸ್ಯಾಂಡ್ ಮಾರಾಟ ಮಾಡುತ್ತಿದ್ದು, ಇತರರ ಜಮೀನಿನಲ್ಲಿ ಕಲ್ಲುನ್ನು ಅಗೆದು ನಿತ್ಯ ನೂರಾರು ಟನ್‌ ಅಕ್ರಮವಾಗಿ ಮರಳನ್ನು ತಯಾರಿಸಲಾಗುತ್ತಿದೆ ಆರೋಪಿಸಿದ್ದಾರೆ.ಈ ಅಕ್ರಮಗಳಿಂದಾಗಿ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಕ್ರಷರ್‌ಗಳಿಗೆ ತೀವ್ರ ನಷ್ಟವಾಗುತ್ತಿದೆ. ಸರ್ಕಾರಕ್ಕೂ ಆದಾಯ ನಷ್ಟ ಉಂಟಾಗುತ್ತಿದೆ. ಕೂಡಲೇ ಅಕ್ರಮ ಮರಳು ಹಾಗೂ ಎಂ-ಸ್ಯಾಂಡ್ ದಂಧೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಎಂ-ಸ್ಯಾಂಡ್‌ ಮಾಲೀಕರ ಸಭೆ ಕರೆದು ಜಿಲ್ಲಾ ಎಂ-ಸ್ಯಾಂಡ್‌ ಸಂಘದಿಂದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2259.56 ಕೋಟಿ ಅನುದಾನ ಮಂಜೂರು
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ: ಬಿಪಿನ್ ಚಂದ್ರ ಪಾಲ್‌