ಪ್ರವಾಸಿಗರ ಬೆದರಿಸಿ ಅಕ್ರಮ ಶುಲ್ಕ ಸಂಗ್ರಹ: ಆರೋಪ

KannadaprabhaNewsNetwork |  
Published : Nov 04, 2024, 12:31 AM IST
ಚಿತ್ರ :  3ಎಂಡಿಕೆ8 : ಸ್ಥಳೀಯರೊಂದಿಗೆ ವಾಗ್ವಾದ ಮಾಡುತ್ತಿರುವ ತೋಟದ ಮಾಲೀಕ.  | Kannada Prabha

ಸಾರಾಂಶ

ಇತ್ತೀಚೆಗೆ ಜನಪ್ರಿಯಗೊಂಡಿರುವ ಹಾಲೇರಿ ಜಲಪಾತದಲ್ಲಿ ತೋಟದ ಮಾಲೀಕರೊಬ್ಬರು ಪ್ರವಾಸಿಗರನ್ನು ಬೆದರಿಸಿ ಅಕ್ರಮವಾಗಿ ಶುಲ್ಕ ಸಂಗ್ರಹಿಸಿದ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತ್ತೀಚೆಗೆ ಜನಪ್ರಿಯಗೊಂಡಿರುವ ಹಾಲೇರಿ ಜಲಪಾತದಲ್ಲಿ ತೋಟದ ಮಾಲಕರೊಬ್ಬರು ಪ್ರವಾಸಿಗರನ್ನು ಬೆದರಿಸಿ ಅಕ್ರಮವಾಗಿ ಶುಲ್ಕ ಸಂಗ್ರಹಿಸಿದ ಆರೋಪ ಕೇಳಿಬಂದಿದೆ.

ಮಡಿಕೇರಿ- ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯ ಹಾಲೇರಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ವ್ಯಕ್ತಿಗಳು ಹಾಗೂ ಶುಲ್ಕ ಸಂಗ್ರಹಿಸುತ್ತಿದ್ದ ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ.

ಫಾಲ್ಸ್ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಮಚ್ಚು ತೋರಿಸಿ ಅಕ್ರಮವಾಗಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರವಾಸಿಗರನ್ನು ಬೆದರಿಸಿ ಏಕೆ ಹಣ ಸಂಗ್ರಹಿಸುತ್ತಿದ್ದೀರೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಲ್ಲದೆ

ಪ್ರವಾಸಿಗರಿಂದ ಹಣ ಸಂಗ್ರಹಿಸುತ್ತಿರುವುದನ್ನು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಪ್ರವಾಸಿಗರ ಬೆದರಿಸಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

------------------------------------

ತೆಲಂಗಾಣ: ಮಹಜರು ವೇಳೆ ಕೊಡಗು ಪೊಲೀಸ್‌ ವಶದಿಂದ ಕೊಲೆ ಆರೋಪಿ ಪರಾರಿ!ಕನ್ನಡಪ್ರಭ ವಾರ್ತೆ ಮಡಿಕೇರಿಕೋಟ್ಯಂತರ ಮೌಲ್ಯದ ಆಸ್ತಿಗಾಗಿ ಪ್ರಿಯತಮರೊಂದಿಗೆ ಸೇರಿ ತನ್ನ ಪತಿಯನ್ನು ಕೊಂದ ಆರೋಪಿ ಅಂಕುರ್ ಠಾಕೂರ್ ಎಂಬಾತನನ್ನು ಕೊಡಗು ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದಾಗ ಪರಾರಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.ಸುಂಟಿಕೊಪ್ಪದ ಕಾಫಿ ತೋಟದಲ್ಲಿ ನಿಗೂಢವಾಗಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಿ, ಸುಟ್ಟು ಹಾಕಲಾಗಿತ್ತು. ಅ.8ರಂದು ಮೃತದೇಹ ಪತ್ತೆಯಾಗಿತ್ತು. ವ್ಯಕ್ತಿಯ ಬಹುತೇಕ ಭಾಗಗಳು ಸುಟ್ಟು ಕರಕಲಾಗಿ ಕಾಲುಗಳು ಮಾತ್ರ ಹಾಗೇ ಉಳಿದಿತ್ತು. ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿ ಅಂಕುರ್ ಠಾಕೂರ್‌ನನ್ನು ಕೊಡಗು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತೆಲಂಗಾಣಕ್ಕೆ ಕರೆದೊಯ್ದಿದ್ದರು. ಉಪ್ಪಳ್‌ ಎಂಬಲ್ಲಿ ಲಾಡ್ಜ್ ಒಂದರಲ್ಲಿ ಆರೋಪಿಯೊಂದಿಗೆ ಪೊಲೀಸರು ತಂಗಿದ್ದರು. ರಾತ್ರಿ ಆರೋಪಿ ತಪ್ಪಿಸಿಕೊಂಡು ಲಾಡ್ಜ್‌ನಿಂದ ಪರಾರಿಯಾಗಿದ್ದಾನೆ. ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ಹರಿದ್ವಾರ, ದೆಹಲಿಯತ್ತ ಪೊಲೀಸ್ ತಂಡ ದೌಡಾಯಿಸಿದೆ. ಪೊಲೀಸರು ದೆಹಲಿ ಮುಂತಾದೆಡೆ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ನ್ಯಾಯಾಂಗ ಬಂಧನದಿಂದ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದರು. ಅ.24ರಂದು ಹರಿದ್ವಾರದಲ್ಲಿದ್ದ ಅಂಕುರ್‌ನನ್ನು ಬಂಧಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ