ಚಿರತೆ ಉಗುರು, ಹಲ್ಲು ಅಕ್ರಮ ಸಾಗಾಣಿಕೆ : ಓರ್ವನ ಬಂಧನ

KannadaprabhaNewsNetwork |  
Published : Nov 06, 2024, 12:38 AM IST
ಫೋಟೋ 5 ಎ, ಎನ್, ಪಿ 1 ಆನಂದಪುರದ ದಾಸಕೊಪ್ಪ ಸರ್ಕಲ್ ನ ಪೆಟ್ರೋಲ್ ಬಂಕ್ ಸಮೀಪ ಚಿರತೆಯ ಉಗುರು ಹಾಗೂ ಹಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲೋಕೇಶ್ ನನ್ನು  ಮಾಲು ಸಮೇತ ಬಂಧಿಸಲಾಯಿತು. | Kannada Prabha

ಸಾರಾಂಶ

ಆನಂದಪುರ: ಕಾನೂನು ಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತದ್ದ ವ್ಯಕ್ತಿಯನ್ನು ಮಾಲು ಸಮೇತ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ನಡೆದಿದೆ.

ಆನಂದಪುರ: ಕಾನೂನು ಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತದ್ದ ವ್ಯಕ್ತಿಯನ್ನು ಮಾಲು ಸಮೇತ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ನಡೆದಿದೆ.

ಶಿಕಾರಿಪುರ ತಾಲೂಕಿನ ಹಾರೋಗೊಪ್ಪದ ಲೋಕೇಶ್ ಬಂಧಿನ ಆರೋಪಿ. ಬಂಧಿತನಿಂದ ಚಿರತೆಯ 16 ಉಗುರು, 3 ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಉಗುರು ಹಲ್ಲು ಹಾಗೂ ಚರ್ಮವನ್ನು ಅಕ್ರಮವಾಗಿ ಮಾರಾಟ ಮಾಡುವ ಜಾಲದ ಮೇಲೆ ಪೊಲೀಸ್, ಅರಣ್ಯ ಸಂಚಾರಿ ದಳ ಸಂಚು ನಡೆಸುತ್ತಿತ್ತು. ಮಡಿಕೇರಿಯ ಎಸ್‌ಪಿ, ಎಸ್‌.ಎಸ್.ಕಾಶಿ ಸಿಐಡಿ ಅರಣ್ಯ ಘಟಕ ಇವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯೊಂದಿಗೆ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್‌ಇನ್ಸ್‌ಪೆಕ್ಟರ್ ಕೆ.ವಿನಾಯಕ ಇವರ ನೇತೃತ್ವದಲ್ಲಿ ಆನಂದಪುರ ಸಮೀಪದ ದಾಸಕೊಪ್ಪ ಸರ್ಕಲ್‌ನ ಪೆಟ್ರೋಲ್ ಬಂಕ್ ಸಮೀಪ ಚಿರತೆ ಉಗುರು ಮತ್ತು ಹಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲೋಕೇಶ್ ಎಂಬಾತನನ್ನು ಪೊಲೀಸ್ ಅರಣ್ಯ ಸಂಚಾರದಳ ಬಂಧಿಸಿದ್ದು, ಈತನ ಬಳಿ ಇದ್ದ ಚಿರತೆಯ 16 ಉಗುರು, 3 ಹಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಗಣೇಶ್, ವಿಶ್ವನಾಥ್, ಆಂಜನೇಯ, ದಿನೇಶ್, ಪ್ರಮೋದ್ ಕುಮಾರಿ, ಈ ದಾಳಿಯಲ್ಲಿ ಭಾಗವಹಿಸಿದ್ದರು. ಬಂಧಿತ ಆರೋಪಿಯ ವಿರುದ್ಧ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳ ಪ್ರಕರಣವನ್ನು ದಾಖಲಿಸಿದ್ದು, ಆರೋಪಿ ಲೋಕೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ