ಕೊಳ್ಳೇಗಾಲ:
ಪಟ್ಟಣದ ನಾಯಕರ ಬೀದಿ ವಾಸಿ ಈಶ್ವರ್ (46) ಎಂಬಾತ ಬಂಧಿತ ಆರೋಪಿ. ಈತ ಕಡಿಮೆ ಬೆಲೆ ನೀಡಿ ಕೊಳ್ಳೇಗಾಲದ ಹಲವೆಡೆ ಪಡಿತರೆ ಅಕ್ಕಿಯನ್ನು ಮಳವಳ್ಳಿ ಕಡೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಆಧರಿಸಿ ನರೀಪುರ ಕ್ರಾಸ್ ಬಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್, ಆಹಾರ ಇಲಾಖೆಯ ಪ್ರಸಾದ್, ಪೊಲೀಸ್ ಸಿಬ್ಬಂದಿಗಳಾದ ಪೂಜಾರಿ, ವಿಜಯ ಕುಮಾರ್, ಪುಂಡರಿಕ ಚೌಹಣ್ ಇನ್ನಿತರರು ಬಂಧಿಸಿ 14 ಮೂಟೆಯ 762 ಕೆಜಿ ತೂಕದ ಅಕ್ಕಿಯನ್ನು ಮತ್ತು ಸಾಗಣಿಕೆಗೆ ಬಳಸಲಾಗಿದ್ದ ಅಪೇ ಆಟೋ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
------9ಕೆಜಿಎಲ್ 7
ಕೊಳ್ಳೇಗಾಲ ತಾಲೂಕಿನ ನರೀಪುರ ಕ್ರಾಸ್ ಬಳಿ ಅಕ್ರಮ ಪಡಿತರೆ ಸಾಗಣೆ ಮಾಡುತ್ತಿದ್ದ ಆರೋಪಿ ಸಮೇತ ಆಟೋ ಹಾಗೂ 762 ಕೆಜಿ ಅಕ್ಕಿ ವಶಕ್ಕೆ ಪಡೆದಿರುವುದು.----