ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಓದುಬಸಪ್ಪನದೊಡ್ಡಿ ಗ್ರಾಮದ ನಂದೀಶ್, ಕಿರುಗಾವಲು ಹೋಬಳಿ ದೇವಿಪುರ ಗ್ರಾಮದ ಮಧು ಬಂಧಿತ ಆರೋಪಿಗಳು. ಬುಯ್ಯನದೊಡ್ಡಿ ಗ್ರಾಮದ ಅಭಿಷೇಕ್, ಹೊಸದೊಡ್ಡಿ ಗ್ರಾಮದ ಸಿದ್ದರಾಜು ಪರಾರಿಯಾಗಿದ್ದಾರೆ.
ಫೆ.13 ರಂದು ಗುರುವಾರ ರಾತ್ರಿ 11:30 ರ ಸಮಯದಲ್ಲಿ ಧನಗೂರು ಗಸ್ತು ಅರಣ್ಯ ಪಾಲಕರು ದಬ್ಬಹಳ್ಳಿ ಅರಣ್ಯ ಪ್ರದೇಶದ ಡಿ- ಲೈನ್ ಗಡಿ ಬಳಿ ಆನೆ ಕಾವಲು ನಡೆಸುತ್ತಿರುವ ವೇಳೆ ಶಿಂಷಾ ಕಡೆಯಿಂದ ದಬ್ಬಹಳ್ಳಿ ಕಡೆಗೆ ಮೋಟಾರ್ ಬೈಕ್ ನಲ್ಲಿ ಬಂದ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ನೋಡಿ ಪರಾರಿ ಆಗಲು ಯತ್ನಿಸಿದ್ದಾರೆ.ಆದರೆ. ಸಿಬ್ಬಂದಿ ಪುನೀತ್ ಮತ್ತು ಮಲ್ಲಿಜಾರ್ಜುನ ಕುಂಬಾರ ಬೆನ್ನತ್ತಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಅಭಿಷೇಕ್ ಕತ್ತಲಿನಲ್ಲಿ ಓಡಿ ಹೋಗಿದ್ದು, ತಲೆ ಮರೆಸಿಕೊಂಡಿದ್ದಾನೆ.
ಆರೋಪಿಗಳ ಸನಿಹದಲ್ಲಿ ಬಿದ್ದಿದ್ದ ಚೀಲವನ್ನು ತೆರೆದು ನೋಡಿದಾಗ ಮುಳ್ಳು ಹಂದಿ ಮೃತದೇಹ ಪತ್ತೆಯಾಗಿದೆ. ಬಂಧಿತ ಆರೋಪಿಗಳಿಂದ ಮೋಟಾರ್ ಬೈಕ್ ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಎಂ.ಸಿ.ಸುರೇಂದ್ರ, ಸಹಾಯಕ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ನಾಗೇಂದ್ರ ಪ್ರಸಾದ್, ಹಲಗೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದಾರೆ. ಶಿಂಷಾ ಉಪ ವಲಯ ಅರಣ್ಯ ಅಧಿಕಾರಿ ಸಾಜು ಪ್ರಾನ್ಸಿಸ್, ಮೋಹನ್ ಕುಮಾರ್, ಗಸ್ತು ಅರಣ್ಯ ಪಾಲಕ ಪುನೀತ್, ಮಲ್ಲಿಕಾರ್ಜುನ ಕುಂಬಾರ, ಸಿದ್ದರಾಮ ಪೂಜಾರಿ, ಸಿಬ್ಬಂದಿ ಪ್ರದೀಪ್, ಲೋಕೇಶ್ ಸೇರಿ ಹಲವರು ಭಾಗವಹಿಸಿದ್ದರು.
-----------14ಕೆಎಂಎನ್ ಡಿ21
ಚಿಪ್ಪು ಹಂದಿ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು.