ಪತ್ರಕರ್ತ ನಿರಂತರ ಅಧ್ಯಯನಶೀಲನಾಗಬೇಕು

KannadaprabhaNewsNetwork |  
Published : Feb 15, 2025, 12:30 AM IST
೧೪ಕೆಎಲ್‌ಆರ್-೩ಕೋಲಾರದ ಪತ್ರಕರ್ತರ ಭವನದಲ್ಲಿ ಕೋಲಾರ ಪತ್ರಿಕೆ  ಸುವರ್ಣ ಸಂಭ್ರಮದ ಅಂಗವಾಗಿ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಇಂದು-ಮುಂದು ತರಬೇತಿ ಕಾರ್ಯಾಗಾರ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಪತ್ರಿಕೋದ್ಯಮ ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದೆ. ಮುದ್ರಣ ಮಾಧ್ಯಮಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದ ಹೊರತಾಗಿಯೂ, ವಿಶ್ವಾಸಾರ್ಹ ಸುದ್ಧಿಗಳನ್ನು ನೀಡುವಲ್ಲಿ ಹಾಗೂ ಓದುಗರ ಮನಗೆಲ್ಲುವಲ್ಲಿ ಮೇಲುಗೈ ಸಾಧಿಸಿವೆ. ಸುದ್ದಿ ಮಾಡುವ ಮುನ್ನ ಮರುಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಪತ್ರಕರ್ತನಾದವನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಹಾಗೂ ವಿಷಯದಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಪರಾಮರ್ಶೆ ಮಾಡುತ್ತಿರಬೇಕು ಎಂದು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ಮಾಧ್ಯಮ ಅಕಾಡೆಮಿ, ಕೋಲಾರ ಪತ್ರಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು ಉತ್ತರ ವಿವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋಲಾರ ಪತ್ರಿಕೆ ಸುವರ್ಣ ಸಂಭ್ರಮದ ಅಂಗವಾಗಿ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಇಂದು-ಮುಂದು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸುದ್ದಿ ವಿಶ್ವಾಸಾರ್ಹವಾಗಿರಬೇಕು

ಕೊರೋನಾ ನಂತರದಲ್ಲಿ ಪತ್ರಿಕೋದ್ಯಮ ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದೆ. ಮುದ್ರಣ ಮಾಧ್ಯಮಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದ ಹೊರತಾಗಿಯೂ, ವಿಶ್ವಾಸಾರ್ಹ ಸುದ್ಧಿಗಳನ್ನು ನೀಡುವಲ್ಲಿ ಹಾಗೂ ಓದುಗರ ಮನಗೆಲ್ಲುವಲ್ಲಿ ಮೇಲುಗೈ ಸಾಧಿಸಿವೆ. ಸುದ್ದಿ ಮಾಡುವ ಮುನ್ನ ಮರುಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಒಬ್ಬರನ್ನು ಪ್ರಶ್ನಿಸುವ ಮುನ್ನ, ಆ ವಿಷಯದ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಂಡಿರಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಹಿಂದಿನ ಕಾಲದಲ್ಲಿ ಯಾವುದೇ ಕೆಲಸ ಸಿಗದಿದ್ದರೆ ಒಂದು ಶಿಕ್ಷಕರಾಗಿ ಇಲ್ಲವೇ ಪತ್ರಕರ್ತರಾಗಿ ಅನ್ನುವ ಕಾಲವಿತ್ತು. ಆದರೆ ಪ್ರಸ್ತುತ ಶಿಕ್ಷಕರಿಗೆ ಮತ್ತು ಪತ್ರಕರ್ತರಿಗೆ ಯಾವುದೇ ಧಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಪತ್ರಕರ್ತರಿಗೆ ಕಲಿಯುವ ಆಸಕ್ತಿ ಇಲ್ಲ ಬೆಳೆಯುವ ಆಸಕ್ತಿ ಇದೆ ಪತ್ರಕರ್ತನ ಕಲಿಯುವ ವಿಚಾರ ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ.

ಅಪೂರ್ವ ಸಂಗಮ:

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಕರ್ತರ ಹಳೆಯ, ಹೊಸ ಹಾಗೂ ಮುಂಬರುವ ತಲೆಮಾರುಗಳ ಅಪೂರ್ವ ಸಂಗಮ ಇದಾಗಿದೆ. ಎಂದರು.

ಸುಳ್ಳು ಸುದ್ದಿ ತಡೆಗೆ ಕಾರ್ಯಾಗಾರ

ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳು ಇಂದು ಮತ್ತು ಮುಂದಿನ ಪತ್ರಿಕೋದ್ಯಮದ ಅಧ್ಯಯನವನ್ನು ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ಧಿಯ ಪ್ರಚಾರ ಭರಾಟೆ ಜೋರಾಗಿದ್ದು, ಅಕಾಡೆಮಿಯು ಸುಳ್ಳು ಸುದ್ಧಿಗಳನ್ನು ತಡೆಯಲು ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪ್ರಕಾಶಕಿ ವಾಣಿ ಪ್ರಹ್ಲಾದರಾವ್, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ.ಎಂ, ಪ್ರಜಾವಾಣಿ ಪತ್ರಿಕೆ ಸಂಪಾದಕ ರವೀಂದ್ರ ಭಟ್ ಐನಕೈ, ಪತ್ರಕರ್ತರಾದ ಬಿ.ಎಂ.ಹನೀಫ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗಿರೀಶ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯರಾದ ಮುನಿರಾಜು.ವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ತ್ಯಾಗರಾಜ್, ಪತ್ರಕರ್ತ ಸುಹಾಸ್ ಪ್ರಹ್ಲಾದರಾವ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ