ಕನ್ನಡಪ್ರಭ ವಾರ್ತೆ ಸಾವಳಗಿ
ಗೋಣಿ ಹಾಗೂ ಪ್ಲಾಸ್ಟಿಕ್ ಗೊಬ್ಬರ ಚೀಲಗಳಗಳಲ್ಲಿ ಬಾಯಿ ಕಟ್ಟಿಟ್ಟ ಸರ್ಕಾರದ ವಿವಿಧ ಯೋಜನೆಯಡಿ ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಪೌಷ್ಟಿಕ ಸಾರ ವರ್ಧಕ ಅಕ್ಕಿಯನ್ನು ಯಾವುದೇ ದಾಖಲಾತಿ ಇಲ್ಲದೆ ಅನಧಿಕೃತವಾಗಿ ಅಕ್ಕಿ ಕಡಿಮೆ ಬೆಲೆಗೆ ಸಂಗ್ರಹಿಸಿ, ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಅಕ್ಕಿ ಸಂಗ್ರಹಿಸುತ್ತಿದ್ದರು.
4 ಗೋಣಿ ಚೀಲಗಳು ಹಾಗೂ 21 ಪ್ಲಾಸ್ಟಿಕ್ (ಗೋಬ್ಬರ) ಚೀಲ ಸೇರಿ ಒಟ್ಟು 25 ಚೀಲಗಳು ಇದ್ದವು. ಒಟ್ಟು 1,200 ಕೆ.ಜಿ ಯ ಅಕ್ಕಿ ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಕೆ.ಜಿ ಗೆ ₹34. 60 ಪೈಸೆ ಇದ್ದು. ಈ ಪ್ರಕಾರ ಅಕ್ಕಿ ಕಿಮ್ಮತ್ತ 1,200 ಕೆ.ಜಿ ತೂಕದ ₹ 41,520 ಮೌಲ್ಯ ಆಗುತ್ತದೆ. ಅನಧಿಕೃತವಾಗಿ ಸಂಗ್ರಹಿಸಿಟ್ಟ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಆಹಾರ ಇಲಾಖೆ ಶಿರಸ್ತೇದಾರ ಬಸವರಾಜ ತಾಳಿಕೋಟಿ ನೇತೃತ್ವದ ತಂಡ ಹಾಗೂ ಸಾವಳಗಿ ಪೊಲೀಸರ ಕಾರ್ಯಾಚರಣೆಯಲ್ಲಿ ಇದ್ದರು. ಈ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.