ಬಂಜಾರ ಸಮುದಾಯಕ್ಕೆ ವಲಸೆ ಶಾಪ

KannadaprabhaNewsNetwork |  
Published : Feb 17, 2026, 03:00 AM IST
ದೇವರಹಿಪ್ಪರಗಿ | Kannada Prabha

ಸಾರಾಂಶ

ಬಂಜಾರ ಸಮುದಾಯಕ್ಕೆ ವಲಸೆ ಶಾಪವಾಗಿ ಪರಿಣಮಿಸಿದ್ದು, ಇದನ್ನು ತಪ್ಪಿಸಲು ಶಿಕ್ಷಣವೊಂದೇ ಮಾರ್ಗವಾಗಿದೆ. ಅಂತಹ ಶಿಕ್ಷಣ ದೊರೆಯುತ್ತಿಲ್ಲ ಎಂದು ಬಂಜಾರ ಸಮಾಜದ ಹಿರಿಯ ಚಿಂತಕ ಹಾಗೂ ತಾಲೂಕು ಉಪಾಧ್ಯಕ್ಷ ಸುರೇಶ ಚವ್ಹಾಣ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬಂಜಾರ ಸಮುದಾಯಕ್ಕೆ ವಲಸೆ ಶಾಪವಾಗಿ ಪರಿಣಮಿಸಿದ್ದು, ಇದನ್ನು ತಪ್ಪಿಸಲು ಶಿಕ್ಷಣವೊಂದೇ ಮಾರ್ಗವಾಗಿದೆ. ಅಂತಹ ಶಿಕ್ಷಣ ದೊರೆಯುತ್ತಿಲ್ಲ ಎಂದು ಬಂಜಾರ ಸಮಾಜದ ಹಿರಿಯ ಚಿಂತಕ ಹಾಗೂ ತಾಲೂಕು ಉಪಾಧ್ಯಕ್ಷ ಸುರೇಶ ಚವ್ಹಾಣ ಹೇಳಿದರು.

ತಾಲೂಕಿನ ಮುಳಸಾವಳಗಿ ತಾಂಡಾ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಸರ್ಕಾರ ತಾಂಡಾ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ವಸತಿ ಶಾಲೆ, ಮೊರಾರ್ಜಿ ಶಾಲೆಗಳನ್ನು ತೆರೆಯಬೇಕು. ಶಿಕ್ಷಣದ ಕುರಿತು ಸಮಾಜದವರಿಗೆ ಮನವರಿಕೆ ಮಾಡಿಸಿದಾಗ ವಲಸೆ ತಡೆಗಟ್ಟಲು ಸಾಧ್ಯ. ಇನ್ನಾದರೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ವಲಸೆಯಿಂದ ಮುಕ್ತರಾಗಬೇಕು ಎಂದು ಸಲಹೆ ನೀಡಿದರು.ನಾಯಕ ಕಾರ್ಬಾರಿ ರಾಮಜೀ ಈಶ್ವರ ಚವ್ಹಾಣ, ಮಾಜಿ ತಾಪಂ ಸದಸ್ಯ ಪ್ರಕಾಶ ಚವ್ಹಾಣ, ಮುಖಂಡರಾದ ಅರವಿಂದ ಚವ್ಹಾಣ, ದಯಾನಂದ ರಾಠೋಡ, ಪ್ರವೀಣ ರಾಠೋಡ, ತಾರಾಸಿಂಗ ಪವ್ಹಾರ, ಬಾಬು ಚವ್ಹಾಣ, ತಾರು ರಾಠೋಡ, ಶಿವು ರಾಠೋಡ, ವೀಜು ರಾಠೋಡ, ಗೋಪಾಲ ಚವ್ಹಾಣ, ರತ್ನಾ ಪೂಜಾರಿ, ಸಹದೇವ ರಾಠೋಡ, ಬಾಬು ಚವ್ಹಾಣ, ಭೀಮು ಚವ್ಹಾಣ, ಬೀರು ಚವ್ಹಾಣ, ರಮೇಶ ಅಂಗಡಿ, ಹೀರು ರಾಠೋಡ, ವಾಲು ಚವ್ಹಾಣ, ಧನಸಿಂಗ ಚವ್ಹಾಣ, ನೀತು ಪವಾರ, ಪ್ರದೀಪ ಚವ್ಹಾಣ, ಅನೀಲ ರಾಠೋಡ, ಅಶೋಕ ರಾಠೋಡ, ಲೋಕು, ಕಿರಣ, ನಾಗೇಶ ರಾಠೋಡ, ಬಸ್ಸು, ಲಕ್ಷ್ಮಣ ಚವ್ಹಾಣ, ಬಾಬು ಜಾಧವ್, ಪಿಂಟೊ ಜಾದವ್, ಸುಮೀತ, ಗೌತಮ್, ವಿಜಯ, ಸೀತಾರಾಮ್, ಮಂಜುನಾಥ, ಕಿರಣ್, ದಶರತ್ ಚವ್ಹಾಣ, ನಾಗೇಶ, ರೇಖು, ಬಸ್ಸು ಪವಾರ, ಶಶಿಕಾಂತ, ವಿಜಯ ರಾಠೋಡ, ರಾಹುಲ್, ಚಂದ್ರಮ, ಸಚಿನ್, ಠೇವು, ವಿಜಯ ಮಿತುನ ಚವ್ಹಾಣ, ವಾಲು ಚವ್ಹಾಣ ಸೇರಿದಂತೆ ಸಮುದಾಯದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.ಯಾವುದೇ ಪಕ್ಷ, ಸಿದ್ಧಾಂತಗಳಿಗೆ ಬದ್ಧರಾಗಿದ್ದರೂ ಸಮಾಜಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ. ಸಂತ ಸೇವಾಲಾಲರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬೆಳವಣಿಗೆ ಕಾಣಲು ಸಾಧ್ಯ.

-ಸುರೇಶ ಚವ್ಹಾಣ, ಬಂಜಾರ ಸಮಾಜದ ತಾಲೂಕು ಉಪಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಎಲ್‌ಡಿಇ ಸಂಸ್ಥೆಯಿಂದಲೇ ಅಂಗಾಂಗ ದಾನದ ಜಾಗೃತಿ ಅಭಿಯಾನ
ಸಂಭ್ರಮದ ಶಿವಯೋಗಮಂದಿರದ ಮಹಾರಥೋತ್ಸವ