ಹಿಟ್ನಾಳ ಗ್ರಾಮದಲ್ಲಿ ಗುರುತಿಸಲಾದ ಸ್ಥಳ ವೀಕ್ಷಣೆ ಮಾಡಿದ ಜಿಪಂ ಸಿಇಒಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಗುರುತಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿದರು. ಬೂದು ನೀರು ನಿರ್ವಹಣಾ ಕಾಮಗಾರಿಯನ್ನು ಅನುಷ್ಠಾನಿಸಲು ಪ್ರತಿ ತಾಲೂಕಿಗೆ 2 ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನಿಸುವಂತೆ ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ನಿರ್ದೇಶನ ನೀಡಿರುವ ಪ್ರಯುಕ್ತ ತಾಲೂಕಿನ ಹಿಟ್ನಾಳ, ಹಾಲರ್ವತಿ ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿದ್ದು, ವೈಜ್ಞಾನಿಕವಾಗಿ ಬೂದು ನೀರನ್ನು ಸಂಸ್ಕರಿಸಿ ಕಾಲುವೆ, ಕೆರೆ, ನಾಲಾಗಳಿಗೆ ಹರಿಸುವಂತೆ ಕ್ರಮವಹಿಸಲು ಸೂಚನೆ ನೀಡಿದರು.
ಬೂದು ನೀರು ಹೊರಗಡೆ ಹೋಗಲು ಗುರುತಿಸಲಾದ ಗುರುತು ವೀಕ್ಷಿಸಿದರು. ಗ್ರಾಮದಲ್ಲಿ ಬೂದು ನೀರು ಬರುವಂತಹ ಸ್ಥಳದಲ್ಲಿ ಚರಂಡಿ ಕಾಮಗಾರಿ ಅನುಷ್ಠಾನಿಸತಕ್ಕದ್ದು. ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ವಿವಿಧ ಯೋಜನೆಗಳಾದ 15ನೇ ಹಣಕಾಸು, ಸ್ವಚ್ಛ ಭಾರತ ಮಿಷನ್, ನರೇಗಾ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳುವಂತೆ ತಿಳಿಸಿದರು.ಗ್ರಾಮದಲ್ಲಿ ಅವಶ್ಯವಿದ್ದಲ್ಲಿ ವೈಯಕ್ತಿಕ ಮತ್ತು ಸಮುದಾಯ ಇಂಗು ಗುಂಡಿ ನಿರ್ಮಿಸಲು ಸ್ಥಳದ ಲಭ್ಯತೆ ನೋಡಿಕೊಂಡು ಕ್ರಮಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರತಕ್ಕದ್ದು. ಕಾಮಗಾರಿಯಿಂದ ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು.
ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳ ಮಾಹಿತಿ, ಆಸ್ತಿಗಳಿಗೆ ಇಲ್ಲಿಯವರೆಗೆ ವಿತರಿಸಲಾದ ಫಾರಂ ನಂ.9&11 ಕುರಿತು ರಿಜಿಸ್ಟರ್ ಪರಿಶೀಲಿಸಿದರು. ನಂತರ ಮುನಿರಾಬಾದ ಡ್ಯಾಂ ಮೂನ್ ಲೈಟ್ ಡಾಬಾದ ಹತ್ತಿರ ಇರುವ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ತಪಾಸಣಾ ತಂಡದ ಕಾರ್ಯ ವೈಖರಿ ಪರಿಶೀಲಿಸಿದರು.