ಹೋರಾಟಗಾರರ ಬದುಕು ಅರ್ಥೈಸಿಕೊಳ್ಳಿ: ಬಾಲಾಜಿ ಬಳಿಗಾರ

KannadaprabhaNewsNetwork |  
Published : Mar 29, 2024, 12:47 AM IST
ಪೋಟೊ27ಕೆಎಸಟಿ4: ಕುಷ್ಟಗಿ ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ವತಿಯಿಂದ ನಡೆದ ಹೋರಾಟಗಾರ ದಿ, ಸೋಮಪ್ಪ ಫಕೀರಪ್ಪ ಚಳಗೇರಿ ಸ್ಮರಣಾರ್ಥವಾಗಿ ದತ್ತಿ ಉಪನ್ಯಾಸ  ಕಾರ್ಯಕ್ರಮ ನಡೆಯಿತುಪೋಟೊ27ಕೆಎಸಟಿ4.1: ಕುಷ್ಟಗಿ ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ವತಿಯಿಂದ ನಡೆದ ಹೋರಾಟಗಾರ ದಿ, ಸೋಮಪ್ಪ ಫಕೀರಪ್ಪ ಚಳಗೇರಿ ಸ್ಮರಣಾರ್ಥವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ  ನೂತನವಾಗಿ ಕರ್ನಾಟಕ ಜಾನಪದ ಅಕಾಡೇಮಿಯ ಸದಸ್ಯರಾಗಿ ಆಯ್ಕೆಯಾದ ಡಾ.ಜೀವನಸಾಬ ಬಿನ್ನಾಳ ಅವರಿಗೆ ಕಸಾಪದಿಂದ ಗೌರವ ಸನ್ಮಾನವನ್ನು ಮಾಡಲಾಯಿತು. | Kannada Prabha

ಸಾರಾಂಶ

ಹೋರಾಟಗಾರರ ಬದುಕನ್ನು ಅರ್ಥೈಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಹೋರಾಟಗಾರರ ಬದುಕನ್ನು ಅರ್ಥೈಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ ಹೇಳಿದರು.

ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ನಡೆದ ಹೋರಾಟಗಾರ ದಿ. ಸೋಮಪ್ಪ ಫಕೀರಪ್ಪ ಚಳಗೇರಿ ಸ್ಮರಣಾರ್ಥವಾಗಿ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟ ವಿಷಯದ ಕುರಿತು ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಜಲ, ನುಡಿ, ರಾಜ್ಯ ಹಾಗೂ ದೇಶಕ್ಕಾಗಿ ನಾವು ಹೋರಾಟ ಮಾಡಬೇಕು. ನಮಗೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅನೇಕರು ಹೋರಾಟ ಮಾಡಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಮೃತರಾಜ ಜ್ಞಾನಮೋಟೆ, ಇಂದಿನ ವಿದ್ಯಾರ್ಥಿಗಳು ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದರು.

ನಿವೃತ್ತ ಪೊಲೀಸ್‌ ಇಲಾಖೆಯ ಅಧಿಕಾರಿ ಸಿದ್ರಾಮಪ್ಪ ವಂದಾಲಿ ಮಾತನಾಡಿ, ಹೋರಾಟಗಾರ ಸೋಮಪ್ಪರು 1924ರಲ್ಲಿ ಜನನವಾಗಿದ್ದು, ಸರ್ಕಾರ ನೀಡಿರುವ ನೌಕರಿಯನ್ನು ತ್ಯಜಿಸಿ ಸಂಘಟನೆ ಮಾಡಿಕೊಂಡು ಹೋರಾಟಕ್ಕೆ ಅಣಿಯಾದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಇದೇ ವೇಳೆ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಡಾ. ಜೀವನಸಾಬ ಬಿನ್ನಾಳ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.

ದತ್ತಿದಾನಿ ಫಕೀರಪ್ಪ ಚಳಗೇರಿ, ಡಾ. ಜೀವನಸಾಬ ಬಿನ್ನಾಳ ಸೇರಿದಂತೆ ಇತರರು ಮಾತನಾಡಿದರು. ಈ ಸಂದರ್ಭ ಕಸಾಪ ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ, ನ್ಯಾಯವಾದಿ ಮಹಾಂತೇಶ ಬಾದಾಮಿ, ಪ್ರಾಚಾರ್ಯ ಡಾ. ಶರಣಬಸಪ್ಪ ತಿಪ್ಪಾಶೆಟ್ಟಿ, ಕಾರ್ಯದರ್ಶಿ ಮಹೇಶ ಹಡಪದ, ನಿಕಟಪೂರ್ವ ಅಧ್ಯಕ್ಷ ನಟರಾಜ ಸೋನಾರ. ಉಮೇಶ ಹಿರೇಮಠ. ಶರಣಪ್ಪ ಲೈನದ್, ಪರಶಿವಮೂರ್ತಿ ಮಾಟಲದಿನ್ನಿ, ರಹಿಮಾನಸಾಬ ದೋಟಿಹಾಳ, ಶ್ರೀನಿವಾಸ ಕಂಟ್ಲಿ, ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿ ಶಿವಕುಮಾರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು