ಧಾರವಾಡ:
ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಪರಿಷ್ಕೃತ ವೇತನ ಜಾರಿಗೆ ರಾಜ್ಯದಲ್ಲೇ ಮೊದಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ನೆಪ ಹೇಳುತ್ತಿದ್ದಾರೆ. ಆದರೆ, ಅವರ ಮಾತಿಗೆ ವ್ಯತಿರಿಕ್ತವಾಗುವಂತೆ ಕಲಬುರ್ಗಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪರಿಷ್ಕೃತ ವೇತನ ನೀಡಲು ಆದೇಶ ಹೊರಡಿಸಿದ್ದಲ್ಲದೇ ಹೊಸ ವೇತನ ಕೂಡ ಕಾರ್ಮಿಕರ ಖಾತೆಗೆ ಸಂದಾಯವಾಗಿದೆ. ಹಾಗಾದರೆ, ಧಾರವಾಡ ಜಿಲ್ಲೆಯಲ್ಲಿ ಮಾತ್ರ ಏಕೆ ತಡೆ ಹಿಡಿಯಲಾಗಿದೆ ಎಂದು ಪ್ರಶ್ನಿಸಿದರು.
ಬಿಸಿಎಂ ಇಲಾಖೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಕೇಂದ್ರದಲ್ಲಿ ಪರಿಷ್ಕೃತ ವೇತನವನ್ನು ಕಾರ್ಮಿಕರ ಖಾತೆಗಳಿಗೆ ಹಾಕಿದರೂ ಕುಂದಗೋಳ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಇನ್ನೂ ಪರಿಷ್ಕೃತ ವೇತನ ಕಾರ್ಮಿಕರ ಖಾತೆಗಳಿಗೆ ಬಂದಿಲ್ಲ. ಅಲ್ಲಿನ ಅಧಿಕಾರಿಗಳು ಹೇಳಿದಂತೆ ಹಾಕಿದ ಬಿಲ್ಲನ್ನು ವಾಪಸ್ ಪಡೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಆದೇಶ ಮಾಡಿಯೂ ಜೂನ್ ತಿಂಗಳ ವೇತನ ಬಾಕಿ ಇದ್ದು ಪರಿಷ್ಕೃತ ವೇತನವನ್ನು ಇನ್ನೂ ಕಾರ್ಮಿಕರ ಖಾತೆಗಳಿಗೆ ಹಾಕಿಲ್ಲ. ಈ ಅವಧಿಯು ಶೈಕ್ಷಣಿಕ ಆರಂಭದ ಹಿನ್ನೆಲೆಯಲ್ಲಿ ಈ ಕಾರ್ಮಿಕರ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲದ ಮೊರೆ ಹೋಗಬೇಕಾಗಿದೆ ಎಂದು ಖೇದ ವ್ಯಕ್ತಪಡಿಸಿದರು.ಜಿಲ್ಲಾ ಉಪಾಧ್ಯಕ್ಷೆ ಭುವನಾ ಬಳ್ಳಾರಿ ಮಾತನಾಡಿ, ಕಾರ್ಮಿಕರನ್ನು ಇಡೀ ಅವಧಿಗೆ ತೆಗೆದುಕೊಂಡರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಾಗ ಮಾತ್ರ ಕೆಲಸ ನೀಡಲಾಗುವುದು ಎಂಬ ಅಘೋಷಿತ ನಿಯಮ ಜಿಲ್ಲಾದ್ಯಂತ ಚಾಲ್ತಿಯಲ್ಲಿದೆ. ಇದು ಇಲಾಖೆಗಳಲ್ಲಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ತಡೆಯಲು ಜಿಪಂ ಸಿಇಒ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.