ಪುತ್ತೂರು: ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ನಡೆಸಿದ 2026 ರ ನೀಟ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಮಂಗಳಾಮೃತ ಕೆ. ಆರ್. (ಸುಳ್ಯ ತಾಲೂಕಿನ ಜಾಲ್ಸೂರಿನ ರವಿರಾಜ್ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಗಳ ಪುತ್ರಿ) 533 ಅಂಕಗಳೊಂದಿಗೆ 97.35 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ. ಅದಿತಿ ಯು. 531 ಅಂಕಗಳೊಂದಿಗೆ 97. 25 ಪರ್ಸೆಂಟೈಲ್, ಧನ್ವಿ ಆರ್. ಬಿ. 519 ಅಂಕಗಳೊಂದಿಗೆ 96.61 ಪರ್ಸೆಂಟೈಲ್, ಮಾನ್ಯತಾ 510 ಅಂಕಗಳೊಂದಿಗೆ 96.09 ಪರ್ಸೆಂಟೈಲ್, ನಿಶಾಂತ್ ಕೆ. ವಿ. 460 ಅಂಕಗಳೊಂದಿಗೆ 92.46 ಪರ್ಸೆಂಟೈಲ್, ಅಜೇಯರಾಮ್ 457 ಅಂಕಗಳೊಂದಿಗೆ 92.21 ಪರ್ಸೆಂಟೈಲ್, ತನ್ಮಯಿ ವಾಗ್ಲೆ ಪಿ. 446 ಅಂಕಗಳೊಂದಿಗೆ 91.22 ಪರ್ಸೆಂಟೈಲ್, ಸಪ್ತಮಿ ವೈ. ಪಿ. 432 ಅಂಕಗಳೊಂದಿಗೆ 89.86 ಪರ್ಸೆಂಟೈಲ್, ವಿದ್ಯಾಲಕ್ಷ್ಮೀ ಎಸ್. ಜಿ. 432 ಅಂಕಗಳೊಂದಿಗೆ 89.86 ಪರ್ಸೆಂಟೈಲ್, ಹೆಚ್. ಕೆ. ತರುಣೇಶ್ 428 ಅಂಕಗಳೊಂದಿಗೆ 89.45 ಪರ್ಸೆಂಟೈಲ್, ಸಮನ್ವಿತಾ ಎಮ್. ಎಸ್. 421 ಅಂಕಗಳೊಂದಿಗೆ 88.72 ಪರ್ಸೆಂಟೈಲ್, ಹಿತೈಷಿ ಆಳ್ವ 418 ಅಂಕಗಳು, ಟೀನಾ ಬಿ. ಎಮ್. 418 ಅಂಕಗಳನ್ನು ಪಡೆದಿದ್ದಾರೆ. ಅವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದರು.