ಹುಬ್ಬಳ್ಳಿ:
ಇಲ್ಲಿನ ಭೈರಿದೇವರಕೊಪ್ಪದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಭಗವದ್ಗೀತಾ ಜ್ಞಾನಲೋಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ 5162ನೇ ಗೀತಾ ಜಯಂತಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಒಂದೇ ಉದ್ದೇಶ ಇಟ್ಟುಕೊಳ್ಳದೆ ಏಕಾಗ್ರತೆ, ಧೈರ್ಯ, ಸಾಹಸ, ಪುರುಷಾರ್ಥಗಳಿಂದ ಭವಿಷ್ಯ ಜೀವನಕ್ಕೆ ಆದರ್ಶ ಪಡೆಯಿರಿ ಎಂದು ಕರೆ ನೀಡಿದರು.
ಪ್ರಾಂಶುಪಾಲ ಸಂಜಯ ಪೀಠಾಪುರ, ಡಾ. ಬಸವರಾಜ ರಾಜಋಷಿಗಳು ಮಾತನಾಡಿದರು. ಚಿನ್ಮಯಾ ಪಿ.ಯು. ಕಾಲೇಜು, ಮಹೇಶ ಪಿ.ಯು. ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಿನ್ಸಿಪಾಲ್‌ರಾದ ಸಂಜಯ್ ಪೀಠಾಪುರ, ಶ್ರುತಿ ಬುಲಬುಲೆ, ವಾಣಿ ಕೆ, ಉಪನ್ಯಾಸಕರಾದ ಶೋಭಾ ಸಿಂಧೆ, ಚಂದ್ರಶೇಖರ, ಪ್ರಸನ್ನ ಡಿ.ಎಲ್, ಅಶ್ವಿನಿ ಕೆ. ಮತ್ತು ಸುನೀಲ್, ಅಶ್ವಿನಿ ಕುಕನೂರ ಉಪಸ್ಥಿತರಿದ್ದರು.