ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಜನೆಯ ಮಾರ್ಗಸೂಚಿ ನಿಯಮಾನುಸಾರ ಕಾಮಗಾರಿಗಳನ್ನು ವಿಳಂಬ ಮಾಡದೇ ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಿ ಎಂದು ತಿಳಿಸಿದ ಅವರು, ಪ್ರತ್ಯೇಕವಾಗಿ ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿಗಳು ಹಾಗೂ ಕಡತಗಳನ್ನು ಸರಿಯಾಗಿ ನಿರ್ವಹಿಸುವುದು, ಕಾಮಗಾರಿ ಸ್ಥಳದಲ್ಲಿ ಮಾಹಿತಿ ಫಲಕ ಕಡ್ಡಾಯವಾಗಿ ಅಳವಡಿಸುವುದು ಮತ್ತು ನರೇಗಾ ಯೋಜನೆಯ ಏಕೀಕೃತ ಸಹಾಯವಾಣಿ 8277506000 ಗೆ ದೂರು ಅಥವಾ ಕೆಲಸದ ಬೇಡಿಕೆಗಾಗಿ ಕರೆ ಮಾಡಬಹುದು. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚುರಪಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಗ್ರಾಪಂ ಮಟ್ಟದಲ್ಲಿ ಹಾಗೂ ಅನುಷ್ಠಾನ ಇಲಾಖೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳ ಕಡತಗಳಲ್ಲಿ 21 ಅಂಶಗಳನ್ನು ಒಳಗೊಂಡ ಕಾಮಗಾರಿ ಕಡತಗಳನ್ನು ನಿರ್ವಹಿಸಬೇಕು. ಕಾಮಗಾರಿಗಳಲ್ಲಿ ಪ್ರತಿದಿನ 7 ವಹಿಗಳು(ಸೆವೆನ್ ರೆಜಿಸ್ಟರ್) ಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳು ಭೇಟಿ ನೀಡಿದ ವೇಳೆ ವಹಿಗಳನ್ನು ಪ್ರಸ್ತುತಪಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಂಟಿ ನಿರ್ದೇಶಕ (ತೋಟಗಾರಿಕೆ) ಇಲಾಖೆ ಶ್ರೀಶೈಲ್ ದಿಡ್ಡಿಮನಿ, ಉಪ ಕಾರ್ಯದರ್ಶಿಗಳು ಜಿಪಂ ಕೊಪ್ಪಳ ಮಲ್ಲಿಕಾರ್ಜುನ್ ತೊದಲಬಾಗಿ, ಸಹಾಯಕ ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ್, ಸಹಾಯಕ ನಿರ್ದೇಶಕ ತ್ಯಾಗರಾಜ್, ತಾಂತ್ರಿಕ ಎಂಜಿನಿಯರ್ ಯಶವಂತ್ ಹಾಗೂ ಪಿಡಿಒಗಳು, ಎಡಿಪಿಸಿ ಮಹಾಂತಸ್ವಾಮಿ, ಡಿಐಇಸಿ ಶ್ರೀನಿವಾಸ್ ಚಿತ್ರಗಾರ್ ತಾಲೂಕು ಮಟ್ಟದ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಜರಿದ್ದರು.