ಡೇರಿಗಳಲ್ಲಿ ಕಾಮನ್ ಸಾಪ್ಟ್ ವೇರ್ ಅಳವಡಿಕೆ ಕಡ್ಡಾಯ: ರಾಮಚಂದ್ರು

KannadaprabhaNewsNetwork |  
Published : Sep 05, 2024, 12:32 AM IST
3ಕೆಎಂಎನ್ ಡಿ12 | Kannada Prabha

ಸಾರಾಂಶ

ರಾಜ್ಯ ಸರಕಾರದ ಸಹಕಾರ ಇಲಾಖೆ ಎಲ್ಲಾ ಡೇರಿಗಳಲ್ಲೂ ಕಡ್ಡಾಯವಾಗಿ ಕಾಮನ್ ಸಾಪ್ಟವೇರ್ ಅಳವಡಿಸಿ ಆನ್‌ಲೈನ್ ಮೂಲಕವೇ ಹಾಲು ಖರೀದಿಸಬೇಕು ಎಂಬುದಾಗಿ ಸುತ್ತೋಲೆ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಡೇರಿಗಳಲ್ಲಿ ಕಡ್ಡಾಯವಾಗಿ ಕಾಮನ್ ಸಾಪ್ಟವೇರ್ ಅಳವಡಿಸಿ ಹಾಲಿನ ಜಿಡ್ಡಿನ(ಫ್ಯಾಟ್) ಮೇಲೆ ದರ ನಿಗದಿಪಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಪಟ್ಟಣದ ಮನ್ಮುಲ್ ಉಪ ಕಚೇರಿಯಲ್ಲಿ ನಡೆದ ಕಾಮನ್ ಸಾಪ್ಟವೇರ್ ಅಳವಡಿಕೆಗೆ ಕಂಪ್ಯೂಟರ್, ವಿವಿಧ ಯೋಜನೆಯಡಿ ಚೆಕ್ ವಿತರಿಸಿ ಮಾತನಾಡಿದರು.

ರಾಜ್ಯ ಸರಕಾರದ ಸಹಕಾರ ಇಲಾಖೆ ಎಲ್ಲಾ ಡೇರಿಗಳಲ್ಲೂ ಕಡ್ಡಾಯವಾಗಿ ಕಾಮನ್ ಸಾಪ್ಟವೇರ್ ಅಳವಡಿಸಿ ಆನ್‌ಲೈನ್ ಮೂಲಕವೇ ಹಾಲು ಖರೀದಿಸಬೇಕು ಎಂಬುದಾಗಿ ಸುತ್ತೋಲೆ ಹೊರಡಿಸಿದೆ. ಅದರಂತೆ ಜಿಲ್ಲೆಯ ಎಲ್ಲಾ ಡೇರಿಗಳಲ್ಲೂ ಆನ್ ಲೈನ್ ಅಳವಡಿಕೆ ಮಾಡಿ ಹಾಲು ಖರೀದಿಸಲಾಗುತ್ತಿದೆ. ಇದರಿಂದ ಡೇರಿಗೆ ಬರುವ ಕಳಪೆ ಗುಣಮಟ್ಟದ ಹಾಲು ತಡೆಗಟ್ಟಬಹುದು. ಜತೆಗೆ ಜಡ್ಡಿನ ಮೇಲೆ ಹಾಲಿನ ದರ ನೀಡಲು ಅನುಕೂಲವಾಗಲಿದೆ ಎಂದರು.

ಕಾಮನ್ ಸಾಪ್ಟವೇರ್ ಯಂತ್ರೋಪಕರಣಗಳ ಬೆಲೆ 1.88 ಲಕ್ಷ ರು. ಆಗಲಿದ್ದು, ಶೇ.50ರಷ್ಟು ಹಣವನ್ನು ಒಕ್ಕೂಟ ಭರಿಸಲಿದೆ. ಉಳಿದ ಹಣವನ್ನು ಡೇರಿ ಆಡಳಿತ ಮಂಡಳಿ ನೀಡಬೇಕು. ಈಗಾಗಲೇ ಹಲವು ಸಂಘಗಳಲ್ಲಿ ಕಾಮನ್ ಸಾಪ್ಟವೇರ್ ಅಳವಡಿಸಲಾಗಿದೆ. ಇದೀಗ ಹೊಸದಾಗಿ 26 ಸಂಘಗಳಿಗೆ ಕಂಪ್ಯೂಟರ್ ವಿತರಿಸಲಾಗುತ್ತಿದೆ. ಕಾರ್ಯದರ್ಶಿಗಳು ಆನ್ ಲೈನ್ ಅಳವಡಿಕೆ ಮಾಡಿಕೊಂಡರೆ ನಿಮ್ಮ ಮೇಲಿನ ಕಳಂಕವು ಕಡಿಮೆ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ 148 ಡೇರಿಗಳಿವೆ. ಬಿಎಂಸಿ ಕೇಂದ್ರ ಇರುವ ಡೇರಿಗಳ ಜತೆಗೆ ಹಲವು ಡೇರಿಗಳಲ್ಲಿ ಕಾಮನ್ ಸಾಪ್ಟವೇರ್ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

ವಿಮೆ ಯೋಜನೆ ಹಾಗೂ ರೈತ ಕಲ್ಯಾಣ ಟ್ರಸ್ಟ್ ನಿಂದ 4.05 ಲಕ್ಷ ರು.ಪರಿಹಾರದ ಚೆಕ್ ವಿತರಿಸಲಾಯಿತು.

ಸಮಾರಂಭದಲ್ಲಿ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರ್ಣಾಧಿಕಾರಿ ನಾಗೇಂದ್ರ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?