ಚುನಾವಣಾಧಿಕಾರಿಯಾಗಿ ರಂಗಧಾಮಯ್ಯ, ಸಹ ಚುನಾವಣಾಧಿಕಾರಿ ಜಯಣ್ಣ ಬೆಳಗೆರೆ ಮತ್ತು ಅಶೋಕ್ ಕುಣಿಗಲ್ ಕಾರ್ಯನಿರ್ವಹಿಸಿದರು. ಆಯ್ಕೆಗೊಂಡ ಎಲ್ಲರಿಗೂ ಜಿಲ್ಲಾಧ್ಯಕ್ಷ ಯೋಗೇಶ್ ರವರು ಚುನಾಯಿತ ಘೋಷಣಾ ಪತ್ರವನ್ನು ನೀಡಿದರು.

ಚಿಕ್ಕನಾಯಕನಹಳ್ಳಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಚೇತನ್ ಪ್ರಸಾದ್ ಅವಿರೋಧವಾಗಿ ಆಯ್ಕೆಗೊಂಡರು.

ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾಲೂಕು ಘಟಕದ ಪದಾಧಿಕಾರಿ/ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆದು ಉಳಿದಂತೆ ಎಲ್ಲಾ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಚೇತನ್ ಪ್ರಸಾದ್ ಹಾಗೂ ಸಿ.ಎಚ್. ಚಿದಾನಂದ ನಾಮಪತ್ರ ಸಲ್ಲಿಸಿದ್ದು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿ.ಎಚ್. ಚಿದಾನಂದ್ ಹಾಗೂ ಸಿ. ಮಲ್ಲಿಕಾರ್ಜುನಸ್ವಾಮಿ ನಾಮಪತ್ರಗಳನ್ನು ಸಲ್ಲಿಸಿದ್ದರು. ಕೊನೆಗಳಿಗೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಾಕಿದ್ದ ಅರ್ಜಿಯನ್ನು ಚಿದಾನಂದ್ ಹಿಂಪಡೆದ ಕಾರಣಕ್ಕೆ ಅಧ್ಯಕ್ಷರಾಗಿ ಚೇತನ್ ಪ್ರಸಾದ್ ಅವಿರೋಧವಾಗಿ ಆಯ್ಕೆಗೊಂಡರು.

ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್ ಕುಮಾರ್ ಎಂ.ಬಿ., ಕಾರ್ಯದರ್ಶಿ ಎಚ್.ಎಸ್. ದೇವರಾಜು, ಖಜಾಂಚಿ ಸ್ಥಾನಕ್ಕೆ ಸಿ.ಡಿ. ರವಿ, ನಿರ್ದೇಶಕ ಸ್ಥಾನಕ್ಕೆ ಜೆ. ಪಾಂಡುರಂಗ, ಸರ್ವಣ್ಣ, ಸುರೇಶ್ ಕುಮಾರ್ ಎಂ. ಚಂದ್ರಶೇಖರಯ್ಯ ಚಿಕ್ಕರಾಂಪುರ ಹಾಗೂ ಸಿ.ಬಿ. ಲೋಕೇಶ್ ರವರಿಂದ ಒಂದೊಂದೇ ಅರ್ಜಿ ಸಲ್ಲಿಕೆಯಾಗಿದ್ದ ಕಾರಣ ಎಲ್ಲರೂ ಅವಿರೋಧವಾಗಿ ಆಯ್ಕೆಗೊಂಡರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 24 ಸದಸ್ಯರಲ್ಲಿ 21 ಸದಸ್ಯರು ಹಾಜರಿದ್ದು, ಮತ ಚಲಾಯಿಸಿದರು. ಸಿ.ಎಚ್. ಚಿದಾನಂದ್ ರಿಗೆ 12 ಮತಗಳು ಹಾಗೂ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ. ಮಲ್ಲಿಕಾರ್ಜುನಸ್ವಾಮಿಗೆ 9 ಮತಗಳು ಬಂದು ಮೂರು ಮತಗಳ ಅಂತರದಿಂದ ಸಿ..ಎಚ್. ಚಿದಾನಂದ್ ರವರು ಆಯ್ಕೆಗೊಂಡರು.

ಚುನಾವಣಾಧಿಕಾರಿಯಾಗಿ ರಂಗಧಾಮಯ್ಯ, ಸಹ ಚುನಾವಣಾಧಿಕಾರಿ ಜಯಣ್ಣ ಬೆಳಗೆರೆ ಮತ್ತು ಅಶೋಕ್ ಕುಣಿಗಲ್ ಕಾರ್ಯನಿರ್ವಹಿಸಿದರು. ಆಯ್ಕೆಗೊಂಡ ಎಲ್ಲರಿಗೂ ಜಿಲ್ಲಾಧ್ಯಕ್ಷ ಯೋಗೇಶ್ ರವರು ಚುನಾಯಿತ ಘೋಷಣಾ ಪತ್ರವನ್ನು ನೀಡಿದರು.

ವಿಜೇತರಿಗೆ ರಾಜ್ಯ ಪತ್ರಕರ್ತರ ಸಂಘದ ಚುನಾಯಿತ ಪ್ರತಿನಿಧಿ ಚಿ.ನಿ.ಪುರುಷೋತ್ತಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಸೇವಾದಳದ ಕೆ.ಜೆ. ಕೃಷ್ಣೇಗೌಡರವರು ಹಾಗೂ ಜಿಲ್ಲಾ ಪತ್ರಕರ್ತರು ಅಭಿನಂದಿಸಿದರು.