ಇಲಾಖೆಗಳ ಅನುದಾನ ಕಡಿತಗೊಳಿಸದೇ ಪಂಚಗ್ಯಾರಂಟಿ ಅನುಷ್ಠಾನ: ಡಾ.ಎಂ.ಸಿ. ಸುಧಾಕರ

KannadaprabhaNewsNetwork |  
Published : Dec 04, 2024, 12:32 AM IST
ಬೈಲಹೊಂಗಲದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ನೂತನ ಕಟ್ಟಡ ಅಡಿಗಲ್ಲು ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಉದ್ಘಾಟಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಶೋಭಾ ಜಿ., ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಎಚ್, ಹೊಸಮನಿ ಇತರರು ಇದ್ದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನವನ್ನು ತಲುಪಿಸಿ ಮಿಕ್ಕಿದ ಹೆಚ್ಚುವರಿ ಸಂಪನ್ಮೂಲ ಬಳಸಿಕೊಂಡು ನಾಡಿನ ಜನತೆಗೆ ನೀಡಿದ ವಚನದಂತೆ ಪಂಚಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ರಾಜ್ಯದ ಕೆಳವರ್ಗದ ಜನತೆಯನ್ನು ಮೇಲೆತ್ತುವ ಕಾರ್ಯ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನವನ್ನು ತಲುಪಿಸಿ ಮಿಕ್ಕಿದ ಹೆಚ್ಚುವರಿ ಸಂಪನ್ಮೂಲ ಬಳಸಿಕೊಂಡು ನಾಡಿನ ಜನತೆಗೆ ನೀಡಿದ ವಚನದಂತೆ ಪಂಚಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ರಾಜ್ಯದ ಕೆಳವರ್ಗದ ಜನತೆಯನ್ನು ಮೇಲೆತ್ತುವ ಕಾರ್ಯ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಹೇಳಿದರು.

ಪಟ್ಟಣದ ಹೊಸೂರು ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ನೂತನ ಕಟ್ಟಡ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿಯೂ ನೂತನ ಪ್ರಯೋಗ ನಡೆಸಿದ್ದು, ಪ್ರಸ್ತುತ ಸಾಲಿನಲ್ಲಿ ಪದವಿ ಕೋರ್ಸ್ ನಲ್ಲಿ ಹೊಸದಾದ ಎಇಡಿಪಿ ಕೋರ್ಸ್ ಪ್ರಾರಂಭಿಸಲಾಗಿದೆ. ಇದರಿಂದಾಗಿ ಶಾಪಿಂಗ್ ಮಾಲ್ ಗಳಲ್ಲಿ, ಸೇಲ್ಸ್ ವೃತ್ತಿ ರಂಗದಲ್ಲಿ ಕಾರ್ಯ ನಿರ್ವಹಿಸಲು ಯುವತಿಯರಿಗೆ ಅನುಕೂಲವಾಗಲಿದೆ. ಇ ಕಾಮರ್ಸ್,ಲಾಜಿಸ್ಟಿಕ್ ಹಾಗೂ ಬಿ.ಕಾಂ ಮಾಡಿದ ವಿದ್ಯಾರ್ಥಿಗಳಿಗೆ ಬಿಎಫ್ಎಸ್ಐ ಹೀಗೆ ನಾಲ್ಕು ವಿಭಾಗಗಳಲ್ಲಿ ಕೌಶಲ್ಯಕ್ಕೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಪ್ರತ್ಯೇಕ ಪದವಿ ಕೋರ್ಸ್ ಗಳನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾರ್ಗದರ್ಶನದಲ್ಲಿ ಜಾರಿಗೆ ತರಲಾಗಿದ್ದು, ಸುಮಾರು 45 ಕಾಲೇಜುಗಳಲ್ಲಿ 1400 ದಾಖಲಾಗಿದ್ದಾರೆ. ಈ ಕೋರ್ಸ್‌ಗಳು ವಿಶೇಷ ಪಠ್ಯ ಹೊಂದಿದ್ದು, ವಿಷಯ ಬೋಧನೆಗೆ ತಲಾ ಇಬ್ಬರು ಪ್ರಾಧ್ಯಾಪಕರನ್ನು ಸೂಕ್ತ ತರಬೇತಿ ನೀಡಿ ನೇಮಿಸಲಾಗಿದೆ ಎಂದು ಹೇಳಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಚಿವರು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ಕಾಲೇಜಿನ ಅಭಿವೃದ್ಧಿಗೆ ಅನುದಾನ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಜಿ., ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಪ್ರಕಾಶ ಎಚ್, ಹೊಸಮನಿ, ಪ್ರಾಶುಪಾಲ ಪ್ರೊ.ಬಿ.ಕೆ. ಮಧುವಾಲ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.ಕಾಲೇಜು ಅಭಿವೃದ್ಧಿಗಾಗಿ ಮಹಾಂತೇಶ ಕೌಜಲಗಿ ಪ್ರಯತ್ನದ ಫಲವಾಗಿ ₹4 ಕೋಟಿ ಅನುದಾನ ಒದಗಿಸಿದ್ದೇವೆ. ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ. ಬಿಸಿಎ, ಬಿಎಸ್‌ಸಿ 59, ಬಿಬಿಎ 112, ಎಂಎ ವ್ಯಾಸಂಗಕ್ಕೆ 16 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಮೂಲಸೌಕರ್ಯಕ್ಕೆದು ಕಳೆದ ವರ್ಷ ಒಂದುವರೆ ಕೋಟಿ ಅನುದಾನ ನೀಡಲಾಗಿತ್ತು.ಸಭಾಂಗಣ ಸೇರಿದಂತೆ ವಿವಿಧ ಸೌಕರ್ಯಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಬೇಡಿಕೆಯಂತೆ ನಾಲ್ಕು ಕೊಠಡಿ ಮಂಜೂರು ಮಾಡಲಾಗಿದೆ.

- ಡಾ.ಎಂ.ಸಿ. ಸುಧಾಕರ ಉನ್ನತ ಶಿಕ್ಷಣ ಸಚಿವ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ