ಒಕ್ಕೂಟವು ಈಗಾಗಲೇ ೧.೪೦ ಲಕ್ಷ ಲೀಟರ್ ಹಾಲನ್ನು ನಿತ್ಯ ಸಂಗ್ರಹಿಸಲಾಗುತ್ತಿದ್ದು, ದಾಖಲೆಯ ೨ ಲಕ್ಷ ಲೀ.ಹಾಲು ಸಂಗ್ರಹದ ಗುರಿ ನಮ್ಮ ಮುಂದಿದೆ. ಶಾಸಕ ನಂಜೇಗೌಡರ ಮರ‍್ಗರ‍್ಶನದಲ್ಲಿ ಈಗಾಗಲೇ ೫೦ ಸಾವಿರ ರು.ನೀಡಲಾಗುತ್ತಿದ್ದ ರಾಸು ವಿಮೆ ಪರಿಹಾರ ಮೊತ್ತವನ್ನು ೭೦ ಸಾವಿರಕ್ಕೆ ಹೆಚ್ಚಾಸಲಾಗಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ಅಧಿಕಾರ ಅನುಭವಿಸಲು ತಾವು ಶಾಸಕನಾಗಿಲ್ಲ, ಜನತೆ ನೀಡಿರುವ ಅವಕಾಶವನ್ನು ಅವರ ಸೇವೆಗೆ ಮುಡಿಪ್ಪಿಟ್ಟಿದ್ದೇನೆ ಎಂದು ಶಾಸಕ ಕೆ.ವೈ.ನಂಜೇಗೌಡರು ಹೇಳಿದರು.
ಅವರು ಇಲ್ಲಿನ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ಷೀರ ಸಂಜೀವಿನಿ ಹಂತ-೪ ರ ಯೋಜನೆಯಡಿ ೧೦೫ ವಿವಿಧ ಯೋಜನೆಯ ಪಲಾನುಭವಿಗಳಿಗೆ ಮೂವತ್ತನಾಲ್ಕು ಲಕ್ಷ ರು.ಗಳ ಮೌಲ್ಯದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ಕೋಚಿಮುಲ್‌ನ 4 ಯೋಜನೆ
ಕ್ಷೀರ ಕ್ಷೇತ್ರವನ್ನು ಆಕಸ್ಮಿಕವಾಗಿ ಪ್ರವೇಶಿಸಿರುವ ನಾನು ಸಿಕ್ಕ ಅವಕಾಶವನ್ನೆಲ್ಲ ರೈತರ, ಗೋಮಾತೆಯ ಸೇವೆಗೆ ಮುಡಿಪಾಗಿಟ್ಟಿದ್ದೇನೆ..ಸಿಕ್ಕ ಅವಕಾಶದಲ್ಲಿ ಶಾಶ್ವತ ಕೆಲಸವಾಗಬೇಕೆಂಬ ಉದ್ದೇಶದಿಂದ ಕೋಚಿಮುಲ್ ಆಧ್ಯಕ್ಷನಾಗಿ ನಾಲ್ಕು ಮುಖ್ಯ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಕೋಲಾರದಲ್ಲಿ ೨೨೦ ಕೋಟಿ ರು.ವೆಚ್ಚದಲ್ಲಿ ಮೆಗಾ ಡೇರಿ ಸ್ಥಾಪಿಸುವ ನನ್ನಗುರಿ ಇನ್ನೂ ಹಲವು ತಿಂಗಳಲ್ಲೇ ಪೂರ್ಣಗೊಳಲಿದೆ. ಹಾಲು ಉತ್ಪನಗಳನ್ನು ಹೆಚ್ಚುಸುವ ಸಲುವಾಗಿ ೫೦ ಕೋಟಿ ರು.ಗಳಲ್ಲಿ ಐಸ್ ಕ್ರೀಮ್ ಪ್ಲಾಟ್ ಪ್ರಾರಂಭಿಸಲಾಗಿದೆ ಎಂದರು.
ನನ್ನ ಮೂರನೇ ಗುರಿ ಸೋಲಾರ್ ಪ್ಲಾಟ್ ನಿರ್ಮಿಸುವುದು. ಅದರಂತೆ ಕೋಚಿಮುಲ್ ಸಮೀಪದ ೫೦ ಎಕರೆ ಕೋಚಿಮುಲ್ ನ ಜಮೀನನಲ್ಲಿ ೭೦ ಕೋಟಿ ವೆಚ್ಚದಲ್ಲಿ ೧೨ ಕಿ.ವ್ಯಾಟ್ಸ್ ವಿದ್ಯುತ್ ಉತ್ಪಾದನೆಗಾಗಿ ಸೋಲಾರ್ ಆಳವಡಿಸಲಾಗುತ್ತಿದೆ. ರಾಜ್ಯದ ೧೬ ಹಾಲು ಒಕ್ಕೂಟಗಳಲ್ಲಿ ನಮ್ಮಲ್ಲೇ ಸೋಲಾರ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರಿಂದ ಪ್ರತಿ ಮಾಸಿಕ ಒಕ್ಕೂಟವು ಬೆಸ್ಕಾಂಗೆ ಕಟ್ಟಲಾಗುತ್ತಿದ್ದ ೨ ಕೋಟಿ ರು.ಉಳಿತಾಯವಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಹಾಸ್ಟೆಲ್
ನಾಲ್ಕನೇ ಗುರಿ ಬೆಂಗಳೂರಿನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಹೈನುಗಾರಿಕೆ ಕುಟುಂಬದ ಹೆಣ್ಣು ಮಕ್ಕಳ ಉನ್ನತ್ತ ಶಿಕ್ಷಣಕ್ಕಾಗಿ ಅವಶ್ಯಕತೆ ಇರುವ ವಸತಿ ಶಾಲೆಯನ್ನು ಇಂದು ಲೋಕಾರ್ಪಣೆಗೊಳಿಸಲಾಗುತ್ತಿದ್ದು, ಎರಡು ಜಿಲ್ಲೆಯ ೩೦೦ ಹೆಣ್ಣು ಮಕ್ಕಳಿಗೆ ವಸತಿ ಸೌಲಭ್ಯ ಸಿಗಲಿದೆ, ಇದಕ್ಕಾಗಿ ೧೨೦೦ ಅಡಿ ವಿಸ್ತಿರಣದ ನಿವೇಶನವನ್ನು ಮಂಜೂರಾಗಿದ್ದು, ರಿಜಿಸ್ಟ್ರೇಶನ್ ಮಾಡಿಕೊಳ್ಳಲಾಗಿದೆ ಎಂದರು.
2 ಲಕ್ಷ ಲೀ. ಹಾಲು ಸಂಗ್ರಹಿಸುವ ಗುರಿ
ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ಎಂ.ಬಿ.ಲೋಹಿತ್ ಮಾತನಾಡಿ ನಮ್ಮ ಒಕ್ಕೂಟವು ಈಗಾಗಲೇ ೧.೪೦ ಲಕ್ಷ ಲೀಟರ್ ಹಾಲನ್ನು ನಿತ್ಯ ಸಂಗ್ರಹಿಸಲಾಗುತ್ತಿದ್ದು, ದಾಖಲೆಯ ೨ ಲಕ್ಷ ಲೀ.ಹಾಲು ಸಂಗ್ರಹದ ಗುರಿ ನಮ್ಮ ಮುಂದಿದೆ. ಶಾಸಕ ನಂಜೇಗೌಡರ ಮರ‍್ಗರ‍್ಶನದಲ್ಲಿ ಈಗಾಗಲೇ ೫೦ ಸಾವಿರ ರು.ನೀಡಲಾಗುತ್ತಿದ್ದ ರಾಸು ವಿಮೆ ಪರಿಹಾರ ಮೊತ್ತವನ್ನು ೭೦ ಸಾವಿರಕ್ಕೆ ಹೆಚ್ಚಾಸಲಾಗಿದೆ. ರೈತರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡಿ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.