ರಾಷ್ಟ್ರ ಸೇವಿಕಾ ಸಮಿತಿ-90 ವಿಜಯನಗರ ಪ್ರಾಂತ ಸಮ್ಮೇಳನದ ಸಮಾರೋಪ ಸಮಾರಂಭದ ಅಂಗವಾಗಿ ಸೋಮವಾರ ನಗರದಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರ ಆಕರ್ಷಕವಾದ ಪಥಸಂಚಲನ ಗಮನ ಸೆಳೆಯಿತು.
ಧಾರವಾಡ:
ರಾಷ್ಟ್ರ ಸೇವಿಕಾ ಸಮಿತಿ-90 ವಿಜಯನಗರ ಪ್ರಾಂತ ಸಮ್ಮೇಳನದ ಸಮಾರೋಪ ಸಮಾರಂಭದ ಅಂಗವಾಗಿ ಸೋಮವಾರ ನಗರದಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರ ಆಕರ್ಷಕವಾದ ಪಥಸಂಚಲನ ಗಮನ ಸೆಳೆಯಿತು.
ತೆರೆದ ಜೀಪಿನಲ್ಲಿ ಭಾರತಮಾತೆ ಭಾವಚಿತ್ರದ ಭವ್ಯಮೆರವಣಿಗೆ ಜತೆಗೆ ಗಣವೇಷಧಾರಿ ಸೇವಿಕೆಯರ, ಪುಟಾಣಿ ಮಕ್ಕಳ ಪಥಸಂಚಲನವು ನಗರದ ಕೆ.ಇ. ಬೋರ್ಡ್ ಕಾಲೇಜಿನ ಆವರಣದಿಂದ ಪ್ರಾರಂಭವಾಯಿತು. ಸವದತ್ತಿ ರಸ್ತೆ, ರೀಗಲ್ ಟಾಕೀಸ್ ವೃತ್ತ, ಮಣಿಕಿಲ್ಲಾ ಮಾರ್ಗ, ಸೂಪರ್ ಮಾರ್ಕೆಟ್ ರಸ್ತೆ, ಗಾಂಧಿ ಚೌಕ್, ವಿವೇಕಾನಂದ ವೃತ್ತ, ಮಹಾರಾಣ ಪ್ರತಾಪ್ ವೃತ್ತ, ರೀಗಲ್ ಟಾಕೀಸ್ ವೃತ್ತ, ಶಿವಾಜಿ ವೃತ್ತ ಮಾರ್ಗವಾಗಿ ಪುನಃ ಕೆ.ಇ.ಬೋರ್ಡ್ ಮೈದಾನದಲ್ಲಿ ಸಂಪನ್ನಗೊಂಡಿತು.
ಬಳಿಕ ಮೈದಾನದಲ್ಲಿ ರಾಷ್ಟ್ರ ಸೇವಿಕೆಯರಿಂದ ಘೋಷ ಮೊಳಗಿದವು. ಇದಲ್ಲದೇ, ನೂರಾರು ಸೇವಿಕೆಯರಿಂದ ನಡೆದ ಆತ್ಮರಕ್ಷಣಾ ಕಲೆಗಳ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಅಲ್ಕಾತಾಯಿ, ಅಂಬಿಕಾ, ಆಶಾ ನಾಯಕ, ಸಾವಿತ್ರಿ ಸೇರಿದಂತೆ ಸುಮಾರು 1000ಕ್ಕೂ ಅಧಿಕ ಸೇವಿಕಿಯರು ಪಾಲ್ಗೊಂಡಿದ್ದರು.
ಉದ್ಯಮಿ ನಂದಿನಿ ಕಶ್ಯಪ ಮಜೇಥಿಯಾ ಮಾತನಾಡಿ, ಮಹಿಳೆಯರು ಸಮಯ, ಶ್ರಮ ಮತ್ತು ತಮ್ಮ ಶಕ್ತಿಯನ್ನು ಸಮಾಜ ಹಾಗೂ ರಾಷ್ಟ್ರದ ಕಲ್ಯಾಣಕ್ಕೆ ಸಮರ್ಪಿಸಬೇಕು. ರಾಷ್ಟ್ರವೇ ಮೊದಲು ಎಂಬ ಭಾವನೆಯೊಂದಿಗೆ ಮಹಿಳೆಯರು ಕುಟುಂಬದ ಜವಾಬ್ದಾರಿ ಜೊತೆ ರಾಷ್ಟ್ರ ನಿರ್ಮಾಣಕ್ಕೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.