ಗಂಗಾವತಿಯಲ್ಲಿ ಆರ್‌ಎಸ್‌ಎಸ್ ಆಕರ್ಷಕ ಪಥ ಸಂಚಲನ

KannadaprabhaNewsNetwork |  
Published : Nov 02, 2026, 03:30 AM IST
ಗಂಗಾವತಿ ನಗರದಲ್ಲಿ ಜರುಗಿದ ಆರ್‌ಎಸ್‌ಎಸ್‌ ಪಥ ಸಂಚಲನ ಗಾಂಧಿ ವೃತ್ತಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕೊಟ್ಟೂರು ಸ್ವಾಮೀಜಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ಗಂಗಾವತಿ ನಗರದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಶ್ರೀ ಕೊಟ್ಟೂರೇಶ್ವರ ಶಾಲಾ ಮೈದಾನದಿಂದ ಪ್ರಾರಂಭಗೊಂಡು ಎರಡು ಮಾರ್ಗದಲ್ಲಿ ಗಣವೇಷದೊಂದಿಗೆ 1500ಕ್ಕೂ ಹೆಚ್ಚು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ಗಂಗಾವತಿ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ನಗರದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ನಗರದ ಶ್ರೀ ಕೊಟ್ಟೂರೇಶ್ವರ ಶಾಲಾ ಮೈದಾನದಿಂದ ಪ್ರಾರಂಭಗೊಂಡು ಎರಡು ಮಾರ್ಗದಲ್ಲಿ ಗಣವೇಷದೊಂದಿಗೆ 1500ಕ್ಕೂ ಹೆಚ್ಚು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಗಣವೇಷದೊಂದಿಗೆ ಭಾಗವಹಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ 101 ವರ್ಷಕ್ಕೆ ಕಾಲಿಡುತ್ತಿರುವ ಮತ್ತು ಸಂಘ ಪ್ರಾರಂಭವಾದ ದಿನವಾದ ವಿಜಯ ದಶಮಿಯ ಅಂಗವಾಗಿ ಗಂಗಾವತಿ ನಗರದಲ್ಲಿ ಪಥ ಸಂಚಲನ ನಡೆಯಿತು.

ಇದಕ್ಕಿಂತ ಮೊದಲು ಭಾರತ ಮಾತೆ ಮತ್ತು ಆರ್‌ಎಸ್‌ಎಸ್‌ ಸಂಸ್ಥಾಪಕರ ಭಾವಚಿತ್ರಗಳಿಗೆ ಕೊಟ್ಟೂರು ಸ್ವಾಮೀಜಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಪುಷ್ಪಗುಚ್ಚ ಸಮರ್ಪಿಸಿದರು. ನಗರದ ವಾಲ್ಮೀಕಿ ವೃತ್ತ ಹಾಗೂ ಪಂಪಾನಗರ ಮಾರ್ಗವಾಗಿ ಸ್ವಯಂ ಸೇವಕರು ಎರಡು ಮಾರ್ಗಗಳಲ್ಲಿ ಪಥ ಸಂಚಲನ ನಡೆಸಿ, ಮಹಾತ್ಮ ಗಾಂಧಿ ವೃತ್ತದಲ್ಲಿ ಸಂಗಮಗೊಂಡರು. ಗಾಂಧಿ ವೃತ್ತದಲ್ಲಿ ಗಣವೇಷಧಾರಿಗಳು ಆಗಮಿಸುತ್ತಿದ್ದಂತೆಯೇ ನಾಗರಿಕರು, ಮಹಿಳೆಯರು ಪುಷ್ಪಗುಚ್ಚ ಸಮರ್ಪಿಸಿದರು.

ಕುಮಾರ ಸ್ವಾಮೀಜಿ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ, ಆರ್‌ಎಸ್‌ಎಸ್‌ ಪ್ರಮುಖರಾದ ವೀಠಲ್ ಜೀ, ಸಂದೀಪ್, ಸಂತೋಷ ಕೆಲೋಜಿ, ವೀರೇಶ, ಹರೀಶ ಕುಲಕರ್ಣಿ, ವಾಸುದೇವ ನವಲಿ, ಬದರಿನಾಥ ಆದಾಪುರ, ನೀಲಕಂಠ ನಾಗಶೆಟ್ಟಿ, ಶರದಕುಮಾರ ದಂಡಿನ್, ಅಭಯ್ ನವಲಿ, ತಿಪ್ಪೇರುದ್ರಸ್ವಾಮಿ ಭಾಗವಹಿಸಿದ್ದರು.

ಬಿಗಿ ಭದ್ರತೆ: ಪೊಲೀಸರು ಭದ್ರತೆ ಒದಗಿಸಿದ್ದರು. ಮೂವರು ಡಿವೈಎಸ್ಪಿ ಸೇರಿದಂತೆ 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು. ನಗರದ ಜಾಮೀಯಾ ಮಸೀದಿ ಮುಂಭಾಗದಲ್ಲಿ ಹಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಪಂ, ತಾಪಂ ಎಲೆಕ್ಷನ್‌ಗೆ ಎಸ್‌ಐಆರ್‌ ಮತಪಟ್ಟಿ ಇಲ್ಲ? - ಹಳೆ ಪಟ್ಟಿ ಬಳಕೆ: ಖಂಡ್ರೆ
ಹಾಲು, ಮೊಸರು ಆಯ್ತು, ಇದೀಗ ಬಸ್‌ ದರ ಏರಿಕೆ - ನ.5ರಿಂದಲೇ ಹೊಸ ದರ