ಕನ್ನಡಪ್ರಭ ವಾರ್ತೆ ಇಳಕಲ್ಲ
ಸಂಜೆ 4 ಗಂಟೆಗೆ ನಗರದ ಅಝಾದ್ ವೃತ್ತದಿಂದ ಪ್ರಾರಂಭವಾದ ಎರಡು ತಂಡಗಳಲ್ಲಿ ಒಂದು ತಂಡ ನೆಹರು ರಸ್ತೆ, ಮಹಾಂತೇಶ್ವರ ಚಿತ್ರಮಂದಿರದ ಮುಂದಿನಿಂದ ಮುಖ್ಯ ಬಜಾರ ರಸ್ತೆ, ಗಾಂಧಿ ಚೌಕ ಮೂಲಕ ಗ್ರಾಮ ಚಾವಡಿ ಮುಂದಿನಿಂದ ಕಂಠಿ ವೃತ್ತಕ್ಕೆ ಬಂದರೆ, ಇನ್ನೊಂದು ತಂಡ ಪಶು ಆಸ್ಪತ್ರೆ ಮೂಲಕ ಎಸಿಒ ಶಾಲೆಯ ಹತ್ತಿರದಿಂದ ಕೋರವರ ಒಣಿ ಮೂಲಕ ಅಲಂಪೂರ ಪೇಟೆಯ ಮೂಲಕ ವಾಲ್ಮೀಕಿ ಗುಡಿ ಮುಂದಿನಿಂದ ಮಹಾಂತ ವೃತ್ತ, ಅಂಬೇಡ್ಕರ್ ವೃತ್ತದಿಂದ ಕಂಠಿ ವೃತ್ತದಲ್ಲಿ ಎರಡೂ ತಂಡಗಳು ಒಂದಾಗಿ ಬಸ್ ನಿಲ್ದಾಣದ ಮೂಲಕ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ವೀರಮಣಿ ಮೈದಾನಕ್ಕೆ ತೆರಳಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಎರಡು ತಂಡಗಳು ಪಥ ಸಂಚಲನ ಹೋಗುವ ಮಾರ್ಗದುದ್ದಕ್ಕೂ ನಗರದ ಮಹಳೆಯರು ರಂಗೋಲಿ ಹಾಕಿ ಹೂವಿನ ದಳಗಳಿಂದ ಸಿಂಗಾರ ಮಾಡಿದ್ದರು. ನಗರ ಪ್ರಮುಖ ಸ್ಥಳಗಳಲ್ಲಿ ಪುಠಾಣಿ ಮಕ್ಕಳು ರಾಷ್ಟ್ರೀಯ ನಾಯಕರ, ದೇಶ ಭಕ್ತರ ಹಾಗೂ ದೇವಿಗಳ ವೇಷಭೂಷಣ ಧರಿಸಿ ಗಮನ ಸೆಳೆದರು.ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಹ ಗಣವೇಷ ಧರಿಸಿ ಪರೇಡ್‌ನಲ್ಲಿ ಪಾಲ್ಗೊಂಡಿದ್ದರು.ಮಾರ್ಗದುದ್ದಕ್ಕೂ ಜನತೆ ಪಥಸಂಚಲನ ಮೇಲೆ ಹೂಮಳೆ ಸುರಿಸಿ ಭಾರತ ಮಾತಾ ಕೀ ಜೈ ಘೊಷಣೆಗಳನ್ನು ಮೊಳಗಿಸಿದರು. ಜಿಲ್ಲಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.