ಅಕ್ರಮ ಮರಳು ದಂಧೆಕೋರರು ಯಾರೆಂಬುದೇ ಗೊತ್ತಿಲ್ಲವಂತೆ

KannadaprabhaNewsNetwork |  
Published : Jun 25, 2025, 11:47 PM IST
151 | Kannada Prabha

ಸಾರಾಂಶ

ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆಯ ವಿರುದ್ಧ ಸಿನಿಮಿಯ ರೀತಿಯಲ್ಲಿ ದಾಳಿ ಮಾಡಿದ್ದ ಅಧಿಕಾರಿಗಳು, ಅಲ್ಲಿದ್ದ 20ಕ್ಕೂ ಹೆಚ್ಚು ಮರಳು ಫಿಲ್ಟರ್ ಯಂತ್ರಗಳನ್ನು ಪುಡಿ-ಪುಡಿ ಮಾಡಿದ್ದರು. ಆದರೆ, ಇದಾದ ಮೇಲೆ ಯಾರೊಬ್ಬರ ಮೇಲೆಯೂ ಎಫ್‌ಐಆರ್ ದಾಖಲಿಸದೆ ಇರುವುದು ತೀವ್ರ ಟೀಕೆಗೆ ಗುರಿಯಾಗಿತ್ತು.

ಸೋಮರಡ್ಡಿ ಅಳವಂಡಿ

ಕೊಪ್ಪಳ

ಹಿರೇಹಳ್ಳದ ಉದ್ದಕ್ಕೂ ಅಕ್ರಮ ಮರಳು ದಂಧೆ ನಡೆಸಿದ್ದು ಯಾರು ಎನ್ನುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ವಂತೆ. ಹೀಗಾಗಿ, ಅಳವಂಡಿ ಪೊಲೀಸ್ ಠಾಣೆಯಲ್ಲಿ ಯಾರ ಹೆಸರು ಹಾಕದೆ ದೂರು ನೀಡಿದ್ದು, ಅನಾಮಧೇಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆಯ ವಿರುದ್ಧ ಸಿನಿಮಿಯ ರೀತಿಯಲ್ಲಿ ದಾಳಿ ಮಾಡಿದ್ದ ಅಧಿಕಾರಿಗಳು, ಅಲ್ಲಿದ್ದ 20ಕ್ಕೂ ಹೆಚ್ಚು ಮರಳು ಫಿಲ್ಟರ್ ಯಂತ್ರಗಳನ್ನು ಪುಡಿ-ಪುಡಿ ಮಾಡಿದ್ದರು. ಆದರೆ, ಇದಾದ ಮೇಲೆ ಯಾರೊಬ್ಬರ ಮೇಲೆಯೂ ಎಫ್‌ಐಆರ್ ದಾಖಲಿಸದೆ ಇರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆ ಮಾಡಿದವರನ್ನು ಪತ್ತೆ ಮಾಡಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಹಾಗಾದರೆ ದಂಧೆ ನಡೆಸುವವರು ಯಾರೆಂದು ಗೊತ್ತಿಲ್ಲವೇ ಎನ್ನುವುದು ಹಾಸ್ಯಸ್ಪದವಾಗಿದೆ.

ರೈತರ ವಿರುದ್ಧ ಕ್ರಮ:

ಅನಾಮಧೇಯ ದೂರು ದಾಖಲಿಸಿರುವ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಮಾಡಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಸಲು ಹಳ್ಳದ ಪಕ್ಕದಲ್ಲಿರುವ ಜಮೀನಿನವರೇ ಹಣ ಪಡೆದು ಸಹಕಾರ ನೀಡಿದ್ದಾರೆ. ಹೀಗಾಗಿ, ಇವರ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ನಿಜವಾದ ಆರೋಪಿಗಳು ಯಾರು ಎನ್ನುವುದು ಗೊತ್ತಾಗುತ್ತದೆ ಎಂದು ಅಧಿಕಾರಿಗಳ ಸಿದ್ಧತೆ ನಡೆಸಿದ್ದು ಅವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಕಂದಾಯ ಇಲಾಖೆ ಮೌನ:

ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾಗಬೇಕಿದ್ದ ಕಂದಾಯ ಇಲಾಖೆ ಮಾತ್ರ ಜಾಣ ಕುರುಡತನ ಪ್ರದರ್ಶಿಸುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ಇರುವುದರಿಂದ ಅವರ ಮೂಲಕ ಆರೋಪಿಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ, ಕೈತೊಳೆದುಕೊಳ್ಳುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಯಂತ್ರಗಳು ಯಾರಿಗೆ ಸೇರಿದ್ದವು

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪುಡಿಗಟ್ಟಿದ ಫಿಲ್ಟರ್ ಯಂತ್ರಗಳು ಯಾರ ಮಾಲಿಕತ್ವದಲ್ಲಿವೆ ಎನ್ನುವುದನ್ನು ಪತ್ತೆ ಮಾಡಿದರೆ ಆರೋಪಿಗಳು ಸಿಗುತ್ತಾರೆ. ಆದರೆ, ಅಧಿಕಾರಿಗಳು ಆ ಕುರಿತು ಕಾರ್ಯಪ್ರವೃತ್ತವಾಗದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.ಹಿರೇಸಿಂದೋಗಿ ಮರಳು ದಂಧೆಕೋರರ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಯಾರ ಹೆಸರನ್ನು ಹಾಕಿ ದೂರು ನೀಡಿಲ್ಲ, ಪೊಲೀಸರು ಪತ್ತೆ ಮಾಡಲಿದ್ದಾರೆ.

ಸನ್ನಿತ್, ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಪ್ಪಳ

PREV

Recommended Stories

ಕಾಲ್ತುಳಿತದ ನಂತರ ನಾನು ವಿಚಲಿತ : ಸಿದ್ದರಾಮಯ್ಯ
ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ