ಮಕ್ಕಳಲ್ಲಿ ಬರವಣಿಗೆ ಕೌಶಲ್ಯ, ಏಕಾಗ್ರತೆ ಹೆಚ್ಚಿಸಿ: ಸಿಪಂ ಸಿಇಒ ಶಶಿಧರ ಕುರೇರ

KannadaprabhaNewsNetwork |  
Published : Sep 20, 2025, 01:02 AM IST
(ಫೋಟೊ 19ಬಿಕೆಟಿ1, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ್ ಅವರು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು) | Kannada Prabha

ಸಾರಾಂಶ

ಕೆಲವು ವಿದ್ಯಾರ್ಥಿಗಳು ಮೌಖಿಕವಾಗಿ ಉತ್ತರ ನೀಡುತ್ತಾರೆ ಹೊರತು ಬರೆಯುವಲ್ಲಿ ಕಷ್ಟ ಪಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ದಿನನಿತ್ಯ ಶಾಲೆಗಳಲ್ಲಿ ೆ ಬರೆವಣಿಗೆ ಕೌಶಲ್ಯ ಮತ್ತು ಏಕಾಗ್ರತೆ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೆಲವು ವಿದ್ಯಾರ್ಥಿಗಳು ಮೌಖಿಕವಾಗಿ ಉತ್ತರ ನೀಡುತ್ತಾರೆ ಹೊರತು ಬರೆಯುವಲ್ಲಿ ಕಷ್ಟ ಪಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ದಿನನಿತ್ಯ ಶಾಲೆಗಳಲ್ಲಿ ೆ ಬರೆವಣಿಗೆ ಕೌಶಲ್ಯ ಮತ್ತು ಏಕಾಗ್ರತೆ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ ಹೇಳಿದರು.

ಜಿಪಂ ನೂತನ ಸಭಾಭವನದಲ್ಲಿ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಇವರ ವತಿಯಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲ್ಯಾಬ್, ಸ್ಮಾರ್ಟ್‌ ಬೋರ್ಡ್‌ ಸೇರಿದಂತೆ ಶಾಲೆಯಲ್ಲಿನ ಸೌಲಭ್ಯಗಳನ್ನು ಸಂಪೂರ್ಣವಾಗಿ ಮಗುವಿನ ಪ್ರಗತಿಗೆ ಬಳಸಿಕೊಳ್ಳಿ, ತರಗತಿಯ ಪ್ರತಿ ಮಗುವಿನ ಕುರಿತು ಶಿಕ್ಷಕರಿಗೆ ಸಂಪೂರ್ಣ ಮಾಹಿತಿ ಇರಬೇಕು. ಅಣಕು ಪರೀಕ್ಷೆ, ಮಾದರಿ ಪ್ರಶ್ನೋತ್ತರ ಬರೆಯಿಸುವುದರ ಜೊತೆಗೆ ಓದಿಸುವ ರೂಢಿ ಸಹ ನೆನಪಿಡಲೂ ಸಹಾಯವಾಗುತ್ತದೆ ಎಂದು ಹೇಳಿದರು.

ಅಧಿಕಾರಿಗಳು ತಮಗೆ ನೀಡಿದ ದತ್ತು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿ ಕುರಿತು ವರದಿ ಸಲ್ಲಿಸಬೇಕು. ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ವೈಯಕ್ತಿಕ ಪ್ರಗತಿ, ಶಾಲೆಯ ಸ್ಥಿತಿಗತಿ, ಶಿಕ್ಷಕರ ಕುರಿತು ಸಂಪೂರ್ಣ ವರದಿ ನೀಡಬೇಕು. ಅಧಿಕಾರಿಗಳ ಭೇಟಿಯಿಂದ ಶಾಲೆಗಳಲ್ಲಿ ಬದಲಾವಣೆ ಸಾಧ್ಯ. ಶಿಕ್ಷಕರು ಅನಾವಶ್ಯಕ ಸಭೆ, ರಜೆಗಳನ್ನು ಬಿಟ್ಟು ಮಕ್ಕಳ ಮತ್ತು ಶಾಲೆಯ ಪ್ರಗತಿಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸೋಸಿಯಲ್ ಮೀಡಿಯಾ ನಿಷೇಧದಿಂದ ದೇಶದ ಆಡಳಿತವೇ ತಲೆಕೆಳಗಾದ ಉದಾಹರಣೆ ನೀಡುತ್ತ, ಮಕ್ಕಳ ಮೊಬೈಲ್ ಮೇಲಿನ ಅವಲಂಬನೆ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ ಅವರು, ಮಕ್ಕಳಲ್ಲಿ ಮೊಬೈಲ್‌ ಬಳಕೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವ ಮತ್ತು ಅದರ ಸರಿಯಾದ ಬಳಕೆಯ ಕುರಿತು ಜಾಗೃತಿ ಮೂಡಿಸುವಂತೆ ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ಈಗಾಗಲೇ ಶಾಲೆ, ಕಾಲೇಜುಗಳಲ್ಲಿ ಮೊಬೈಲ್ ಸಂಪೂರ್ಣ ನಿಷೇಧ ಕುರಿತು ಚರ್ಚಿಸಲಾಗಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಮತ್ತು ದೇಶ ಪ್ರೇಮ ತುಂಬಲು ಹೇಳಿದರು.

ಮೊರಾರ್ಜಿ ಶಾಲೆಗಳು ಎಲ್ಲ ಸೌಕರ್ಯಗಳಿದ್ದರೂ ಉತ್ತಮ ಫಲಿತಾಂಶ ನೀಡುತ್ತಿಲ್ಲ. ಈ ಸಲ ಹೆಚ್ಚಿನ ಶ್ರಮವಹಿಸಿ ಉತ್ತಮ ಫಲಿತಾಂಶ ಸಾಧಿಸಬೇಕಿದೆ. ಉತ್ತಮ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಗೌರವಿಸಲಾಗುವುದು. ನಿರ್ಲಕ್ಷ್ಯತನ ತೋರಿದರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷದ ಫಲಿತಾಂಶಕ್ಕಿಂತ ಉತ್ತಮ ಫಲಿತಾಂಶ ಸಾಧಿಸಲು ಎಲ್ಲರೂ ಸೇರಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಸಿ. ಮನ್ನಿಕೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಕಾಂಬಳೆ, ಶಿಕ್ಷಣಾಧಿಕಾರಿ ಎಸ್.ಜಿ. ಮಿರ್ಜಿ, ಪಿಯು ಕಾಲೇಜುಗಳ ಪ್ರಾಂಶುಪಾಲರು, ಮೊರಾರ್ಜಿ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಣ ಇಲಾಖೆಯ ಬಿಇಒಗಳು ಮತ್ತು ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ