ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ.ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಸಭಾಭವನದಲ್ಲಿ ಸೋಮವಾರ ನಡೆದ ಬಿ.ವಿ.ವಿ.ಎಸ್ ಇನ್ಸ್ಟಿಟ್ಯೂಟ್ ಮ್ಯಾನೇಜಮೆಂಟ್ ಸ್ಟಡೀಸ್ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪದವಿ ಪ್ರದಾನ ಮಾಡಿ ಮಾತನಾಡಿದರು .
ಎಂಬಿಎ ಸ್ನಾತಕೋತ್ತರ ಶಿಕ್ಷಣ ಮುಗಿಸಿ ಪದವಿ ಪಡೆಯುವುದು ಒಂದು ಮುಖ್ಯ ಹಂತ. ಮೊಬೈಲ್ ವ್ಯಾಮೋಹ ತೊರೆದು ಓದಿನ ಕಡೆಗೆ ಗಮನ ಕೊಡಬೇಕು. ಕರ್ನಾಟಕದಲ್ಲಿ ಪ್ರತಿವರ್ಷ 21ಲಕ್ಷ ಪದವೀದರರು ಔದ್ಯೋಗಿಕ ಕ್ಷೇತ್ರಕ್ಕೆ ಬರುತ್ತಾರೆ. ಸುಮಾರು 20 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಲೇ ಇವೆ, ಈ ಉದ್ಯೋಗಳು ಕೌಶಲ್ಯ ಬೇಕಾಗುತ್ತದೆ. ತಂದೆ ತಾಯಿಗಳು ನಿಮ್ಮ ಮೇಲೆ ಬಂಡವಾಳ ಹಾಕಿ ಪದವಿಧರರನ್ನಾಗಿ ಮಾಡುತ್ತಾರೆ. ಕಂಪನಿಗಳು ನಿಮ್ಮ ಮೇಲೆ ಬಂಡವಾಳ ಹಾಕಿ ಕಂಪನಿಯ ರಾಯಭಾರಿಯನ್ನಾಗಿ ಮಾಡುತ್ತವೆ ಎಂಬ ಅರಿವು ನಮಗಿರಬೇಕು ಎಂದರು.ಬಾಗಲಕೋಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ, ಆನಂದ ದೇಶಪಾಂಡೆ ಮಾತನಾಡಿ ಬಿ.ವಿ.ವಿ.ಸಂಘದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನೋಡಿದರೆ ಅದ್ಭುತ ಎನಿಸುತ್ತದೆ, ಇಲ್ಲಿ ಉತ್ತಮ ಶಿಕ್ಷಕರ ತಂಡ ಇದೆ, ಒಳ್ಳೆಯ ಮೂಲಭೂತ ಸೌಕರ್ಯವಿದೆ, ಒಳ್ಳೆಯ ವಿದ್ಯಾರ್ಥಿಗಳಿದ್ದಾರೆ. ರಾಜ್ಯಕ್ಕೆ ಇದೊಂದು ಮಾದರಿ ಸಂಸ್ಥೆಯಾಗಿದೆ ಎಂದರು.
ಪದವಿ ಪ್ರದಾನ: ಇನ್ಸ್ಟಿಟ್ಯೂಟ್ ಮ್ಯಾನೇಜಮೇಂಟ್ ಸ್ಟಡೀಸ್‌ನ ಸುಮಾರು 60 ಜನ ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಶ್ರೀನಿಧಿ ಸಂಗಡಿಗರಿಂದ ಪ್ರಾರ್ಥನೆ ಸಲ್ಲಿಸಲಾಯಿತು, ನಿರ್ದೇಶಕ ಡಾ.ಪ್ರಕಾಶ ವಡವಡಗಿ ಸ್ವಾಗತಿಸಿದರು, ಡಾ.ಪವನ ಬೇನಕಟ್ಟಿ ಕಾಲೇಜು ನಡೆದ ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು, ಡಾ.ಅಮರೇಶ ಚರಂತಿಮಠ ಹಾಗೂ ಸಂತೋಷ ಕುಮಾರ ನಿರೂಪಿಸಿದರು.