ಗ್ರಾಮಗಳ ಆರ್ಥಿಕತೆ ಸುಧಾರಣೆ ಉತ್ತಮ ರಸ್ತೆ ಸಹಕಾರಿ: ಪಾಟೀಲ

KannadaprabhaNewsNetwork |  
Published : Sep 28, 2025, 02:00 AM IST
ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ಡಾ. ಎಚ್‌.ಕೆ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿವೆ. ಈ ಬಗ್ಗೆ ಜಂಟಿ ಸಮೀಕ್ಷೆಯಾಗಿದೆ. ಸೋಮವಾರ ಅಥವಾ ಮಂಗಳವಾರದಿಂದ ಪರಿಹಾರ ಬಿಡುಗಡೆ ಕೆಲಸ ಪ್ರಾರಂಭವಾಗುತ್ತದೆ. ಮಳೆಯಿಂದ ಬಹಳಷ್ಟು ಕಡೆ ರಸ್ತೆಗಳು ಹದಗೆಟ್ಟಿದ್ದು, ಮಳೆ ನಿಂತ ನಂತರ ಅವುಗಳ ದುರಸ್ತಿ ಕೆಲಸ ಪ್ರಾರಂಭಿಸಲಾಗುವುದು.

ಮುಳಗುಂದ: ರಸ್ತೆ ಅಭಿವೃದ್ಧಿ ಆಗುವುದರಿಂದ ಹಳ್ಳಿಗಳ ಆರ್ಥಿಕತೆ ಸುಧಾರಣೆಯಾಗುತ್ತದೆ ಮತ್ತು ವ್ಯಾಪಾರ ವಹಿವಾಟುಗಳು ಹೆಚ್ಚುತ್ತವೆ. ಜತೆಗೆ ನಗರದಕ್ಕೆ ವಿದ್ಯಾಭ್ಯಾಸ ಮಾಡುಲು ಹೋಗುವ ವಿದ್ಯಾರ್ಥಿಗಳಿಗೆ ಅನೂಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು.

ಸಮೀಪದ ಹರ್ತಿ ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯ ಪ್ರಸ್ತಕ ಸಾಲಿನ ಅಂದಾಜು ಮೊತ್ತ ₹2 ಕೋಟಿ ವೆಚ್ಚದಲ್ಲಿ ಹರ್ತಿ- ಹುಲಕೋಟಿ ಸಂರ್ಪಕ ಕಲ್ಪಿಸುವ ರಸ್ತೆ ಸುಧಾರಣೆ ಹಾಗೂ ಅಂದಾಜು ಮೊತ್ತ ₹2 ಕೋಟಿ ವೆಚ್ಚದಲ್ಲಿ ಕುರ್ತಕೊಟಿ, ಹರ್ತಿ, ಬೆಳಧಡಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದ್ದು, ಕುರ್ತಕೋಟಿಯಲ್ಲಿ ಬ್ರಿಜ್‌ ನಿರ್ಮಾಣ, ಅಂತೂರು- ಬೆಂತೂರಲ್ಲಿ ಮಲ್ಲಿಗವಾಡ ರಸ್ತೆ ಸುಧಾರಣೆ, ಚಿಂಚಲಿಯಲ್ಲಿ ರಸ್ತೆ ಸುಧಾರಣೆ, ಕೆಲ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಹರ್ತಿಯಲ್ಲಿ ಹರ್ತಿ ಬೆಳಧಡಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಎಲ್ಲ ಕಾಮಗಾರಿಗಳು 6 ತಿಂಗಳೊಳಗೆ ಪೂರ್ಣಗೊಳಿಸಿ, ಗುಣಮಟ್ಟದ ಕೆಲವಾಗಬೇಕೆಂದು ಸೂಚಿಸಲಾಗಿದೆ ಎಂದರು.

ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿವೆ. ಈ ಬಗ್ಗೆ ಜಂಟಿ ಸಮೀಕ್ಷೆಯಾಗಿದೆ. ಸೋಮವಾರ ಅಥವಾ ಮಂಗಳವಾರದಿಂದ ಪರಿಹಾರ ಬಿಡುಗಡೆ ಕೆಲಸ ಪ್ರಾರಂಭವಾಗುತ್ತದೆ. ಮಳೆಯಿಂದ ಬಹಳಷ್ಟು ಕಡೆ ರಸ್ತೆಗಳು ಹದಗೆಟ್ಟಿದ್ದು, ಮಳೆ ನಿಂತ ನಂತರ ಅವುಗಳ ದುರಸ್ತಿ ಕೆಲಸ ಪ್ರಾರಂಭಿಸಲಾಗುವುದು. ನಮ್ಮ ಕ್ಷೇತದಲ್ಲಿಯೇ ಈ ಮೊದಲು ಸುರಿದ ಮಳೆಗೆ 376 ಮನೆಗಳು ಬಿದ್ದ ವರದಿಯಾಗಿದ್ದು, ಅವುಗಳಿಗೆ ಪರಿಹಾರ ಬಿಡುಗಡೆ ಮಾಡಿದ್ದೇವೆ. ಈಗ ಮತ್ತೆ ಸುರಿದ ಮಳೆಗೆ ಸುಮಾರು 200 ಮನೆಗಳು ದುರಸ್ತಿಗೆ ಬಂದ ಸಾಧ್ಯತೆ ಇದ್ದು, ಅದರ ಬಗ್ಗೆ ಜಂಟಿ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು. ಹರ್ತಿ ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹50 ಲಕ್ಷ ಅನುದಾನ ಒದಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಧಿಕಾರಿಗಳು, ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ