ಇಮ್ತಿಯಾಜ್ ಸಾಧನೆ ಜಿಲ್ಲೆಗೆ ಕೀರ್ತಿ ತಂದಿದೆ: ಸತೀಶ್ ಅರಳೀಕೊಪ್ಪ

KannadaprabhaNewsNetwork |  
Published : Oct 19, 2025, 01:00 AM IST
೧೫ಬಿಹೆಚ್‌ಆರ್ ೧: ಬಿಸಿಲು ಕುದುರೆ ಚಿತ್ರದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪಡೆದ ಇಮ್ತಿಯಾಜ್ ಸುಲ್ತಾನ್ ಅವರನ್ನು ಬಾಳೆಹೊನ್ನೂರಿನ ಜೇಸಿಐ ಕ್ಲಾಸಿಕ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇಬ್ರಾಹಿಂ ಶಾಫಿ, ಸತೀಶ್ ಅರಳೀಕೊಪ್ಪ, ಸುಧಾಕರ್, ಚೈತನ್ಯ ವೆಂಕಿ, ಸೈಯ್ಯದ್ ಫಾಜಿಲ್, ಸುರೇಂದ್ರ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರುಅತ್ಯುತ್ತಮ ಸಂಗೀತ ನಿರ್ದೇಶಕ ಸಂಗೀತ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಅವರ ಸಾಧನೆ ಜಿಲ್ಲೆಗೆ ಗರಿ ಮೂಡಿಸಿ ಕೀರ್ತಿ ತಂದಿದೆ ಎಂದು ತಾಲೂಕು ಕಜಾಪ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು.

ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಅಭಿನಂದನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅತ್ಯುತ್ತಮ ಸಂಗೀತ ನಿರ್ದೇಶಕ ಸಂಗೀತ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಅವರ ಸಾಧನೆ ಜಿಲ್ಲೆಗೆ ಗರಿ ಮೂಡಿಸಿ ಕೀರ್ತಿ ತಂದಿದೆ ಎಂದು ತಾಲೂಕು ಕಜಾಪ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು. ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಇಮ್ತಿಯಾಜ್ ಸುಲ್ತಾನ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸಂಗೀತವೆಂದರೆ ಅದು ಪ್ರತಿಯೊಬ್ಬರ ಜೀವನಾಡಿ. ಸಂಗೀತ ಮೆಚ್ಚದವರೇ ಇಲ್ಲ. ಹಲವರ ನೋವು ಮರೆಸಿ ನೆಮ್ಮದಿ, ಶಾಂತಿ ನೀಡುವ ಸಂಗೀತ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಂಗೀತ ರಚಿಸುವ ನಿರ್ದೇಶಕರ ಭಾವಗಳು ಪ್ರಮುಖ ವಾಗಿರುತ್ತದೆ ಎಂದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ಇಮ್ತಿಯಾಜ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿರುವುದು ಹೆಮ್ಮೆ ಮೂಡಿಸಿದೆ. ಪ್ರತಿಯೊಬ್ಬ ಸಂಗೀತ ಅಭಿಮಾನಿ ಅವರ ಸಾಧನೆ ಮೆಚ್ಚಬೇಕಿದೆ. ಮುಂದಿನ ದಿನಗಳಲ್ಲಿ ಇಮ್ತಿಯಾಜ್ ರಾಜ್ಯ, ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಮೂಲತಃ ಕೋಣಂದೂರಿನವರಾದ ಇಮ್ತಿಯಾಜ್ ಬಾಳೆಹೊನ್ನೂರಿನಲ್ಲಿ ವಾಸವಿದ್ದು, ಗಜಲ್‌ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಬಿಸಿಲು ಕುದುರೆ ಚಿತ್ರದ ಅತ್ಯುತ್ತಮ ಸಂಗೀತಕ್ಕೆ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿರುವುದು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಇಮ್ತಿಯಾಜ್ ಅವರಿಂದ ಜೇಸಿಐಯಿಂದ ಗಜಲ್ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದರು.ಸನ್ಮಾನ ಸ್ವೀಕರಿಸಿ ಇಮ್ತಿಯಾಜ್ ಸುಲ್ತಾನ್ ಮಾತನಾಡಿ, ಹೃದಯ ಶಿವ ನಿರ್ದೇಶನದ ಬಿಸಿಲು ಕುದುರೆ ಚಿತ್ರ ಅತ್ಯುತ್ತಮ ಚಿತ್ರ. ಇದರ ಸಂಗೀತ ನಿರ್ದೇಶನಕ್ಕೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಪ್ರಾಮಾಣಿಕ ವಾಗಿ ಕಾರ್ಯನಿರ್ವಹಿಸಿದ್ದೇನೆ ಮನ್ನಣೆ ದೊರೆತಿದೆ. ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವ ಬಯಕೆಯಿದ್ದು, ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಸಾಧನೆ ಸಾಧ್ಯವಿದೆ ಎಂದರು.ಜೇಸಿ ಕಾರ್ಯದರ್ಶಿ ವಿ.ಅಶೋಕ, ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಚೈತನ್ಯ ವೆಂಕಿ, ಸುರೇಂದ್ರ ಮಾಸ್ತರ್, ಎ.ಆರ್.ಸುರೇಂದ್ರ, ರಿಚರ್ಡ್ ಮಥಾಯಿಸ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಜೇಸಿ ಸದಸ್ಯರಾದ ಕೆ.ಎಂ.ರಾಘವೇಂದ್ರ, ಚೇತನ್‌ಕುಮಾರ್, ಶಾಹಿದ್ ಮತ್ತಿತರರು ಹಾಜರಿದ್ದರು.೧೫ಬಿಹೆಚ್‌ಆರ್ ೧:

ಬಿಸಿಲು ಕುದುರೆ ಚಿತ್ರದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪಡೆದ ಇಮ್ತಿಯಾಜ್ ಸುಲ್ತಾನ್ ಅವರನ್ನು ಬಾಳೆಹೊನ್ನೂರಿನ ಜೇಸಿಐ ಕ್ಲಾಸಿಕ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ