ಕಿರು ಅವಧಿಯಲ್ಲಿ ಗೋವಿಂದ ಕೋಟಿ ಬರೆದು ನಗರದ ಯುವತಿ ದಾಖಲೆ

KannadaprabhaNewsNetwork |  
Published : May 01, 2024, 02:00 AM IST

ಸಾರಾಂಶ

ಅತ್ಯಂತ ಕಡಿಮೆ ಅವಧಿಯಲ್ಲಿ ತಿರುಪತಿಯ ಟಿಟಿಡಿ ಆರಂಭಿಸಿರುವ ಗೋವಿಂದ ಕೋಟಿ ಬರವಣಿಗೆಯನ್ನು ಪೂರೈಸಿ ಬೆಂಗಳೂರಿನ ಯುವತಿ ಕುಮಾರಿ ಕೀರ್ತನಾ(17) ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಕ್ಕೆ ತಿರುಮಲದಲ್ಲಿ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ ದೊರೆತಿದೆ.

ತಿರುಮಲ: ಅತ್ಯಂತ ಕಡಿಮೆ ಅವಧಿಯಲ್ಲಿ ತಿರುಪತಿಯ ಟಿಟಿಡಿ ಆರಂಭಿಸಿರುವ ಗೋವಿಂದ ಕೋಟಿ ಬರವಣಿಗೆಯನ್ನು ಪೂರೈಸಿ ಬೆಂಗಳೂರಿನ ಯುವತಿ ಕುಮಾರಿ ಕೀರ್ತನಾ(17) ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಕ್ಕೆ ತಿರುಮಲದಲ್ಲಿ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ ದೊರೆತಿದೆ.

ಕುಮಾರಿ ಕೀರ್ತನ ಬೆಂಗಳೂರಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುವ ವೇಳೆ ನವರಾತ್ರಿಯಿಂದ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಗೋವಿಂದ ನಾಮವನ್ನು ಟಿಟಿಡಿಯಿಂದ ಪಡೆದ ಪುಸ್ತಕದಲ್ಲಿ ಬರೆದು ಪೂರ್ಣಗೊಳಿಸಿದ್ದಾಳೆ. ಇದುವರೆಗೂ ಆಕೆ 10,01,116 ಬಾರಿ ಗೋವಿಂದ ನಾಮವನ್ನು ಬರೆದ ಹಿನ್ನೆಲೆಯಲ್ಲಿ ಟಿಟಿಡಿ ಅವರ ಕುಟುಂಬಕ್ಕೆ ತಿರುಮಲದಲ್ಲಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯವನ್ನು ನೀಡಿದೆ.

ಈ ವೇಳೆ ಮಾತನಾಡಿದ ಕುಮಾರಿ ಕೀರ್ತನಾ, ‘ನನ್ನ ಇಷ್ಟ ದೈವ ತಿಮ್ಮಪ್ಪನ ದರ್ಶನದಿಂದ ಪುಳಕಿತಳಾಗಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ನಮ್ಮ ಸಮಾಜದಲ್ಲಿ ಎಲ್ಲರೂ ರಾಮಕೋಟಿ ಬರೆಯುವುದನ್ನು ನೋಡಿ ಸ್ಫೂರ್ತಿ ಪಡೆದು ಇಂದು ಗೋವಿಂದ ಕೋಟಿಯನ್ನು ಬರೆದು ಪೂರ್ಣಗೊಳಿಸಿದ್ದೇನೆ’ ಎಂದು ಹೇಳಿದ್ದಾಳೆ.ಏನಿದು ಗೋವಿಂದ ಕೋಟಿ?

ಟಿಟಿಡಿಯು ಮಕ್ಕಳಲ್ಲಿ ಆಧ್ಯಾತ್ಮದ ಕುರಿತು ಒಲವು ಮೂಡಿಸಲು ಸೆಪ್ಟೆಂಬರ್‌ 2023ರಲ್ಲಿ ಗೋವಿಂದ ಕೋಟಿ ಅಭಿಯಾನವನ್ನು ಆರಂಬಿಸಿದೆ. ₹111 ನೀಡಿದರೆ ಟಿಟಿಡಿ ಗೋವಿಂದ ಕೋಟಿ ಬರೆಯುವ 26 ಪುಸ್ತಕಗಳನ್ನು ನೀಡುತ್ತದೆ. ಅದರಲ್ಲಿ 10,01,116 ಬಾರಿ ಗೋವಿಂದ ಕೋಟಿ ಬರೆದರೆ ತಿರುಮಲದಲ್ಲಿ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ ಕಲ್ಪಿಸುತ್ತದೆ. ಹಾಗೆಯೇ 1 ಕೋಟಿ ಬಾರಿ ಬರೆದರೆ ವಿದ್ಯಾರ್ಥಿಯನ್ನೂ ಒಳಗೊಂಡು ಗರಿಷ್ಠ 5 ಕುಟುಂಬಸ್ಥರಿಗೆ ವಿಐಪಿ ದರ್ಶನ ಭಾಗ್ಯದ ಜೊತೆಗೆ ವಸತಿ ಸೌಕರ್ಯವನ್ನೂ ಕಲ್ಪಿಸುತ್ತದೆ. 25ಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಈ ಅಭಿಯಾನವನ್ನು ರೂಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ