ಅಲ್ಪಾವಧಿಯಲ್ಲಿ ಜನರು, ಶಿಕ್ಷಕರು ಪ್ರೀತಿ, ವಿಶ್ವಾಸದಿಂದ ನಡೆಸಿಕೊಂಡಿದ್ದಾರೆ: ರವಿಕುಮಾರ್

KannadaprabhaNewsNetwork |  
Published : Jul 02, 2025, 12:19 AM IST
1ಕೆಎಂಎನ್ ಡಿ17 | Kannada Prabha

ಸಾರಾಂಶ

ರವಿಕುಮಾರ್ ಅವರು ಶಿಕ್ಷಕರ ಪ್ರೇಮಿ ಅಧಿಕಾರಿಯಂತೆ ಕೆಲಸ ಮಾಡುವ ಮೂಲಕ ತಾವಿದ್ದ ಕಡಿಮೆ ಅವಧಿಯಲ್ಲಿ ಅಪಾರ ಸಂಖ್ಯೆಯ ಶಿಕ್ಷಕರ ಪ್ರೀತಿವಿಶ್ವಾಸ ಸಂಪಾದಿಸಿದ್ದಾರೆ. ಅವರು ಕೇವಲ 11 ತಿಂಗಳಲ್ಲಿಯೇ ವರ್ಗಾವಣೆಗೊಳ್ಳುತ್ತಿರುವುದು ತಾಲೂಕಿನ ಎಲ್ಲಾ ಶಿಕ್ಷಕರಿಗೆ ಅಪಾರನೋವುಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಿಕ್ಕ ಅಲ್ಪಾವಧಿಯಲ್ಲಿ ತಾಲೂಕಿನ ಜನತೆ, ಶಿಕ್ಷಕರು ಬಹಳ ಪ್ರೀತಿ ವಿಶ್ವಾಸದಿಂದ ನಡೆಸಿಕೊಂಡಿದ್ದಾರೆ. ಇಲ್ಲಿನ ಜನರ, ಅನ್ನದ ಋಣ ನನ್ನ ಮೇಲಿದೆ ಎಂದು ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಹೇಳಿದರು.

ಪಟ್ಟಣದ ಶತಮಾನದ ಫ್ರೆಂಚ್‌ರಾಕ್ಸ್ ಶಾಲೆಯಲ್ಲಿ ಶಿಕ್ಷಕರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿನ ಶಿಕ್ಷಕರು, ಜನತೆ ಪ್ರತಿ ಹಂತದಲ್ಲೂ ಸಾಕಷ್ಟು ಸಹಕಾರ ನೀಡಿದ್ದಾರೆ. ವರ್ಗಾವಣೆಗೊಂಡ ನನಗೆ ಪ್ರೀತಿಯಿಂದ ಬೀಳ್ಕೊಡುಗೆ ನೀಡುವುದಕ್ಕೆ ಧನ್ಯವಾದ ಅರ್ಪಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಚಂದ್ರಶೇಖರ್ ಮಾತನಾಡಿ, ಬಿಇಒ ರವಿಕುಮಾರ್ ಅವರು ಅಹಂ ಇಲ್ಲದೆ ಎಲ್ಲರಿಗೂ ಸ್ಪಂದಿಸಿ ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದಾರೆ. ಶಿಕ್ಷಕರ ಪ್ರತಿ ಕೆಲಸಕ್ಕೆ ಸ್ಪಂದಿಸಿ ಅನಗತ್ಯವಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸಿದ್ದಾರೆ ಎಂದರು.

ರವಿಕುಮಾರ್ ಅವರು ಶಿಕ್ಷಕರ ಪ್ರೇಮಿ ಅಧಿಕಾರಿಯಂತೆ ಕೆಲಸ ಮಾಡುವ ಮೂಲಕ ತಾವಿದ್ದ ಕಡಿಮೆ ಅವಧಿಯಲ್ಲಿ ಅಪಾರ ಸಂಖ್ಯೆಯ ಶಿಕ್ಷಕರ ಪ್ರೀತಿವಿಶ್ವಾಸ ಸಂಪಾದಿಸಿದ್ದಾರೆ. ಅವರು ಕೇವಲ 11 ತಿಂಗಳಲ್ಲಿಯೇ ವರ್ಗಾವಣೆಗೊಳ್ಳುತ್ತಿರುವುದು ತಾಲೂಕಿನ ಎಲ್ಲಾ ಶಿಕ್ಷಕರಿಗೆ ಅಪಾರನೋವುಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ನಾಗಮಂಗಲ ಬಿಇಒ ಯೋಗೇಶ್, ಪದವೀಧರ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ವಿಜಯ್‌ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸುರೇಂದ್ರಕುಮಾರ್, ಶಿಕ್ಷಕರಾದ ಕೆ.ಯುವರಾಜ್, ಕರುಣ್‌ಕುಮಾರ್, ಎಂ.ಜಯರಾಮ, ದಿವ್ಯ, ಜೆ.ವಿಜಯ್‌ಕುಮಾರ್, ಎಚ್.ಎನ್.ಸೋಮಶೇಖರ್, ಮಹದೇವಪ್ಪ, ಮಂಜುಳ, ಯೋಗನರಸಿಂಹೇಗೌಡ, ವೆಂಕಟೇಶ್, ಕಿರಣ್‌ಕುಮಾರ್, ಜಯಚಂದ್ರ, ನಾಗರತ್ನ, ಭವ್ಯ, ಕೆ.ಸುಮಿತ್ರ ಸೇರಿದಂತೆ ಸೇರಿದಂತೆ ಹಲವು ಶಿಕ್ಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''