ಕನ್ನಡಪ್ರಭ ವಾರ್ತೆ ಬಾದಾಮಿ
ನಗರದ ಪುರಸಭೆ 23 ಸದಸ್ಯರ ಬಲ ಹೊಂದಿದೆ. ಅದರಲ್ಲಿ 13 ಕಾಂಗ್ರೆಸ್ ಸದಸ್ಯರು, 10 ಕಾಂಗ್ರೆಸ್ ಸದಸ್ಯ ಇದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾಣೆಯಲ್ಲಿ 13 ಕಾಂಗ್ರೆಸ್ ಸದಸ್ಯರು ಹಾಗೂ ಶಾಸಕರ ಮತವನ್ನು ಹಿಡಿದು ತಲಾ 14 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಜೆ.ಬಿ.ಮಜ್ಜಗಿ ಘೋಷಿಸಿದರು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಕಾವ್ಯಶ್ರೀ ಚಂದ್ರಶೇಖರಯ್ಯ ಹಿರೇಮಠ, ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಯಲಿಗಾರ ತಮ್ಮ ನಾಮಪತ್ರ ಸಲ್ಲಿಕೆ ಮಾಡಿ ತಲಾ 10 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಂದೆನವಾಜ ಡಾಂಗೆ ಹಾಗೂ 23 ಜನ ಸದಸ್ಯರು ಉಪಸ್ಥಿತರಿದ್ದರು. ಡಿವೈಎಸ್‌ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ವಿಠ್ಠಲ ನಾಯಕ, ಕ್ರೈಂ ಪಿಎಸ್‌ಐ ವಿಜಯಕುಮಾರ ರಾಠೋಡ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಕೋಟ್
-ಪಾಂಡು ಕಟ್ಟಿಮನಿ, ನೂತನ ಬಾದಾಮಿ ಪುರಸಭೆ ಅಧ್ಯಕ್ಷ--
ಐತಿಹಾಸಿಕ ನಗರ ಬಾದಾಮಿ ಪ್ರವಾಸಿತಾಣವಾಗಿರುವುದರಿಂದ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಕಳೆದ ಬಾರಿ ಸಿದ್ದರಾಮಯ್ಯನವರು ಬಾದಾಮಿ ಶಾಸಕರಾಗಿದ್ದು ಈಗ ಅವರೇ ಮುಖ್ಯಮಂತ್ರಿಗಳು. ಬಾದಾಮಿ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಅವರಿಗಿದೆ. ನಾನು ಸ್ಥಳೀಯ ಶಾಸಕನಾಗಿ ಎಲ್ಲ ಸದಸ್ಯರೊಂದಿಗೆ ಸಮಾಲೋಚಣೆ ಮಾಡುವುದರ ಮೂಲಕ ಹೆಚ್ಚಿನ ಅನುದಾನವನ್ನು ತರುವುದರೊಂದಿಗೆ ಬಾದಾಮಿ ನಗರದ ಮೂಲ ಭೂತ ಸೌಲಭ್ಯಗಳನ್ನು ನೀಡುವುದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ.