ದಾವಣಗೆರೆ ವಿವಿಧೆಡೆ ಕಾಮದಹನ ಸಂಪನ್ನ

KannadaprabhaNewsNetwork |  
Published : Mar 25, 2024, 12:52 AM IST
ಕ್ಯಾಪ್ಷನಃ24ಕೆಡಿವಿಜಿ39ಃದಾವಣಗೆರೆಯ ಚೌಕಿಪೇಟೆಯಲ್ಲಿ ಕಾಮದಹನ ಮಾಡಿರುವುದು........ಕ್ಯಾಪ್ಷನಃ24ಕೆಡಿವಿಜಿ40ಃದಾವಣಗೆರೆಯ ಚೌಕಿಪೇಟೆಯ ಗುಜರಿಲೈನ್‌ನಲ್ಲಿ ಅಕ್ಕಿ ವರ್ತಕರ ಸಂಘದಿAದ ಕಾಮದಹನ ಮಾಡಿದರು. ......ಕ್ಯಾಪ್ಷನಃ24ಕೆಡಿವಿಜಿ41ಃದಾವಣಗೆರೆಯ ಕೆ.ಬಿ.ಬಡಾವಣೆಯಲ್ಲಿ ಕಾಮನನ್ನು ಸುಡಲು ಸಜ್ಜಾಗಿರುವ ಪುಟ್ಟ ಪುಟ್ಟ ಮಕ್ಕಳು. | Kannada Prabha

ಸಾರಾಂಶ

ದಾವಣಗೆರೆ ನಗರದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಭಾನುವಾರ ವಿವಿಧೆಡೆ ಕಾಮದಹನ ಆಚರಿಸಲಾಯಿತು. ಕಟ್ಟಿಗೆ, ಕುಳ್ಳು, ಮರಗಳ ಹಲಗೆ, ತೆಂಗಿನಗರಿ ಇತ್ಯಾದಿ ಉರುವಲುಗಳನ್ನು ಒಪ್ಪವಾಗಿ ಜೋಡಿಸಿ, ಕಾಮನ ಚಿತ್ರಪಟವನ್ನು ಇಟ್ಟು ಕಾಮನಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಳ್ಳಿಯಿಡಲಾಯಿತು. ಈ ವೇಳೆ ಯುವಕರು ಕೇಕೆ ಹಾಕಿ ಕುಣಿದರು. ಈ ಸಂದರ್ಭ ಸಾರ್ವಜನಿಕರಿಗೆ ಕಾರ-ಮಂಡಕ್ಕಿ ಪ್ರಸಾದ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದಲ್ಲಿ ಪ್ರತಿವರ್ಷದಂತೆ ಹೋಳಿ ಹುಣ್ಣಿಮೆ ಅಂಗವಾಗಿ ಭಾನುವಾರ ವಿವಿಧೆಡೆ ಕಾಮದಹನ ಆಚರಿಸಲಾಯಿತು. ಕಟ್ಟಿಗೆ, ಕುಳ್ಳು, ಮರಗಳ ಹಲಗೆ, ತೆಂಗಿನಗರಿ ಇತ್ಯಾದಿ ಉರುವಲುಗಳನ್ನು ಒಪ್ಪವಾಗಿ ಜೋಡಿಸಿ, ಕಾಮನ ಚಿತ್ರಪಟವನ್ನು ಇಟ್ಟು ಕಾಮನಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಳ್ಳಿಯಿಡಲಾಯಿತು. ಈ ವೇಳೆ ಯುವಕರು ಕೇಕೆ ಹಾಕಿ ಕುಣಿದರು. ಈ ಸಂದರ್ಭ ಸಾರ್ವಜನಿಕರಿಗೆ ಕಾರ-ಮಂಡಕ್ಕಿ ಪ್ರಸಾದ ವಿತರಿಸಲಾಯಿತು.

ಕೆಲವು ಶಾಲೆ-ಕಾಲೇಜು ಮಕ್ಕಳಿಗೆ ಪರೀಕ್ಷೆಗಳು ಇದ್ದರೂ ಓದಿಗೆ ಬಿಡುವು ನೀಡಿ, ಕಾಮದಹನ ಹಬ್ಬದಲ್ಲಿ ಪಾಲ್ಗೊಂಡರು. ಕಾಮನನ್ನು ಸುಟ್ಟ ಮರುದಿನವಾದ ಸೋಮವಾರ ಹೋಳಿ ನಡೆಯಲಿದೆ.

ಭಾನುವಾರ ರಾತ್ರಿ ಅಕ್ಕಿ ವರ್ತಕರ ಸಂಘದಿಂದ ಚೌಕಿಪೇಟೆಯ ಗುಜರಿ ಲೈನ್‌ನಲ್ಲಿಯೂ ಕಾಮದಹನ ನಡೆಯಿತು. ಅಕ್ಕಿ ವರ್ತಕರಾದ ಎಂ.ವಿ.ಜಯಪ್ರಕಾಶ್ ಮಾಗಿ, ಬಿ.ಪಿ.ಎಂ.ಜಗದೀಶ್, ಹಲವಾಗಲ ರುದ್ರೇಶ್, ಜಯರಾಜ್ ಮೇಟಿ, ಟಿ.ಎಸ್.ಮಲ್ಲಿಕಾರ್ಜುನ, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಟಿಂಕರ್ ಮಂಜಣ್ಣ ಇತರರು ಇದ್ದರು.

ವಿನೋಬನಗರ, ರಾಂ ಅಂಡ್ ಕೋ ಸರ್ಕಲ್, ಚರ್ಚ್ ರಸ್ತೆ, ಕೆ.ಬಿ.ಬಡಾವಣೆ, ನಿಟ್ಟುವಳ್ಳಿ, ನಿಜಲಿಂಗಪ್ಪ ಬಡಾವಣೆ, ಗಡಿಯಾರ ಕಂಬ, ಕಾಯಿಪೇಟೆ, ದೊಡ್ಡಪೇಟೆ, ದೇವರಾಜ ಅರಸ್ ಬಡಾವಣೆ ಇನ್ನಿತರೆಡೆ ಕಾಮದಹನ ಹಬ್ಬ ಸಂಭ್ರಮದಿಂದ ಆಚರಿಸಲಾಗಿದೆ.

- - - -24ಕೆಡಿವಿಜಿ39ಃ ದಾವಣಗೆರೆಯ ಚೌಕಿಪೇಟೆಯಲ್ಲಿ ಕಾಮದಹನ ನಡೆಸಲಾಯಿತು.

-24ಕೆಡಿವಿಜಿ40ಃ ದಾವಣಗೆರೆ ಚೌಕಿಪೇಟೆಯ ಗುಜರಿ ಲೈನ್‌ನಲ್ಲಿ ಅಕ್ಕಿ ವರ್ತಕರ ಸಂಘದಿಂದ ಕಾಮದಹನ ನಡೆಸಲಾಯಿತು.

-24ಕೆಡಿವಿಜಿ41ಃ ದಾವಣಗೆರೆಯ ಕೆ.ಬಿ. ಬಡಾವಣೆಯಲ್ಲಿ ಕಾಮನನ್ನು ಸುಡಲು ಸಜ್ಜಾಗಿರುವ ಪುಟ್ಟ ಪುಟ್ಟ ಮಕ್ಕಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ