ಗುಡವಿಯಲ್ಲಿ ಮೈನವಿರೇಳಿಸಿದ ಹೋರಿ ಬೆದರಿಸುವ ಹಬ್ಬ

KannadaprabhaNewsNetwork |  
Published : Nov 07, 2024, 11:56 PM IST
ಫೋಟೋ:೦೭ಕೆಪಿಸೊರಬ-೦೨ : ಸೊರಬ ತಾಲೂಕಿನ ಗುಡವಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವು ಸಂಭ್ರಮದಿAದ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಗುಡವಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಹೋರಿ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದ ಜನಪದ ಕ್ರೀಡೆಯಾದ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಗುಡವಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಹೋರಿ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದ ಜನಪದ ಕ್ರೀಡೆಯಾದ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು. ಗ್ರಾಮೀಣ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬ ಹೆಚ್ಚು ಮಹತ್ವ ಪಡೆದಿದೆ. ಅಖಾಡದಲ್ಲಿ ಹೋರಿಗಳು ಓಡಿಹೋಗುವುದನ್ನು, ಅವುಗಳನ್ನು ಹಿಡಿಯುವ ಸಾಹಸಿಗರ ಕಸರತ್ತನ್ನು ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕಿನ ವಿವಿಧ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.

ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದಟೇಪು, ಬಲೂನುಗಳು ಮತ್ತು ಕೊಬ್ಬರಿ ಸರವನ್ನು ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಮರೂರು ತಾರಕಾಸುರ, ಉದ್ರಿ ವೀರೇಶ, ಸಾರೇಕೊಪ್ಪ ಸರದಾರ, ಶಿಗ್ಗಾದ ಸಾರಂಗ, ಕುಪ್ಪಗಡ್ಡೆ ಪವರ್ ಸ್ಟಾರ್, ಸಾರೆಕೊಪ್ಪ ಸುನಾಮಿ, ಕೊರಕೋಡು ಕಾಲಭೈರವ, ಜಡೆ ಓಂಕಾರ, ಬಳ್ಳಿಬೈಲು ಅಗ್ನಿ, ಕುಂದಗಸವಿ ದಳಪತಿ, ಬಿದರೇರಿ ಬುಲೇಟ್ ಕಾ ರಾಜ, ಕೊಡಕಣಿ ದೊಡ್ಮನೆ ಹುಡುಗ, ಹೈಸ್ಪೀಡ್ ಚಿನ್ನ, ಯಡಗೊಪ್ಪ ೭ಸ್ಟಾರ್, ಹರೂರು ಜೈಹನುಮ, ಕೆರೆಕೊಪ್ಪದ ಮಲೆನಾಡ ಹೈಸ್ಪೀಡ್ ಚಕ್ರವರ್ತಿ, ಹರೂರು ಮಾರಿಕಾಂಬ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಶರವೇಗದಲ್ಲಿ ಓಡಿ, ಮನರಂಜಿಸಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು.

ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು. ಗ್ರಾಮದ ಮಹಿಳೆಯರು, ಮಕ್ಕಳು, ಯುವತಿಯರು ಸಹ ಹೋರಿ ಬೆದರಿಸುವ ಹಬ್ಬವನ್ನು ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಸುರಕ್ಷತಾ ಬೇಲಿಗಳ ನಿರ್ಮಿಸಿ, ಒಂದೊಂದೇ ಹೋರಿಗಳನ್ನು ಓಡಿಸುವ ಮೂಲಕ ಗ್ರಾಮಸ್ಥರು ಜನಪರ ಕಾಳಜಿಯಲ್ಲಿ ಹೆಚ್ಚಿನ ಗಮನ ಸೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!