ಕ್ರೀಡೆಯಲ್ಲಿ ಸೋಲು ಗೆಲುವು ಸಮಾನಾಗಿ ಸ್ವೀಕರಿಸಬೇಕು:ಮಾರುತಿ ಬೌಧ್ದೆ

KannadaprabhaNewsNetwork | Published : Jan 14, 2025 1:04 AM

ಸಾರಾಂಶ

In sports, victory and defeat should be accepted equally: Maruti Boudhde

-ಬೀದರ್‌ ನ ಡಾ. ಅಂಬೇಡ್ಕರ್ ಭವನದಲ್ಲಿ ವಾಲಿಬಾಲ್ ಪಂದ್ಯವಳಿ ಉದ್ಘಾಟನೆ

----

ಕನ್ನಡಪ್ರಭ ವಾರ್ತೆ ಬೀದರ್‌

ಮೊಬೈಲ್‌ ಗೀಳಿಗೆ ಒಳಗಾಗಿ ಯುವಕರು ಸಮಯ ಕಳೆಯುತ್ತಿದ್ದಾರೆ ಗುರಿ ಇಟ್ಟುಕೊಂಡು ಸಾಧನೆ ಮಾಡುವ ಕಡೆ ಗಮನ ಹರಿಸಬೇಕೆಂದು ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌಧ್ದೆ ನುಡಿದರು.

ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಾತ್ಮಾ ಜ್ಯೋತಿಬಾ ಫುಲೆ ಯುತ್ ಕ್ಲಬ್ ಶಾಹಗಂಜ್ ಬೀದರ ಸಹಯೋಗದಲ್ಲಿ 76ನೇ ಗಣರಾಜ್ಯೋತ್ಸವ ಪ್ರಯುಕ್ತ 12ರಂದು ನಡೆದ ವಾಲಿಬಾಲ್ ಪಂದ್ಯಾವಳಿ ಪ್ರಯುಕ್ತ ಡಾ. ಅಂಬೇಡ್ಕರ್ ಭವನದ ಆವರಣದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಮತ್ತು ರಾಷ್ಟ್ರೀಯ ಯುವ ದಿನದಂದು ವಾಲಿಬಾಲ್ ಪಂದ್ಯವಳಿ ಉದ್ಘಾಟಿಸಿ ಮಾತನಾಡಿದರು.

ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದರೆ ಕ್ರೀಡೆ ಕಡೆ ಗಮನಹರಿಸಬೇಕು ಕ್ರೀಡೆಯಲ್ಲಿ ಯುವಕರು ಸೋಲು ಗೆಲುವಿಗೆ ಸಮನಾಗಿ ಸ್ವಿಕರಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳಿದರು, ಶುಭ ಹಾರೈಸಿದರು.

ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ ಮಾತನಾಡಿ, ಬೀದರ ಜಿಲ್ಲೆಯ ಯುವಕರು ಕ್ರೀಡೆಯಲ್ಲಿ ಮನಸು ಮಾಡಿದರೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬಹುದು. ಆದರೆ, ಇವರಿಗೆ ಸರಿಯಾದ ತರಬೇತಿಯ ಅವಶ್ಯಕತೆ ಇದೆ. ಸರ್ಕಾರ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ ಗೋರನಾಳಕರ್ ಮಾತನಾಡಿ, ಸರ್ಕಾರ ರಾಜ್ಯದ ಪ್ರತಿ ತಾಲೂಕಿನಲ್ಲಿ ಒಬ್ಬ ಖಾಯಂ ಕ್ರೀಡಾಧಿಕಾರಿ ನೇಮಿಸಿ ಕ್ರೀಡೆಗೆ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕೆಂದರು.

ಹರಳಯ್ಯ ಸಮಾಜ ಯುವ ವೇದಿಕೆ ಅಧ್ಯಕ್ಷ ರಾಜಕುಮಾರ ವಾಘಮಾರೆ, ಯುವ ಉದ್ಯಮಿ ವಿರಶೆಟ್ಟಿ ಪಾಟೀಲ್ ನವದಗೇರಿ, ಬಾಬು ಜಗಜೀವನರಾಮ ಹೋರಾಟ ಸಮಿತಿ ಅಧ್ಯಕ್ಷ ಅಭಿ ಕಾಳೆ, ಯುವ ಮುಖಂಡ ಪವನ ಮಿಠಾರೆ ಭಾಗವಹಿಸಿದ.

ಮಹಾತ್ಮಾ ಜ್ಯೋತಿಬಾ ಫುಲೆ ಯುತ್ ಕ್ಲಬ್ ಅಧ್ಯಕ್ಷ ಅಜಯ ದೀನೆ ಅಧ್ಯಕ್ಷತೆ ವಹಿಸಿದರು. ಇದೆ ಸಂದರ್ಭದಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯ ವಿನಯ ಮಾಳಗೆ ಅವರಿಗೆ ಸನ್ಮಾನಿಸಲಾಯಿತು.

ವಾಲಿಬಾಲ್ ಪಂದ್ಯಾವಳಿ ಆಯೋಜನಾ ಸಮಿತಿಯ ಸದಸ್ಯರಾದ ವಿವೇಕ ಜಡಗೆ, ವನೀಶ್, ಬನೀಶ್, ಅಭಿ, ರೋಹನ್, ಸುಮೀತ್, ಸುರೇಶ್, ಪುಟ್ಟರಾಜ, ಸಚಿನ್, ಮಾರ್ಟಿನ್, ಬಲವೀರ್, ಕಿಶೋರ್, ಇದ್ದರು. ಪಂದ್ಯಾವಳಿಯಲ್ಲಿ 23 ತಂಡಗಳು ಭಾಗವಹಿಸಿದವು.

----

ಫೋಟೊ: ಚಿತ್ರ 12ಬಿಡಿಆರ್61

ಬೀದರಿನ ಡಾ. ಅಂಬೇಡ್ಕರ್ ಭವನದ ಆವರಣದಲ್ಲಿ ವಾಲಿಬಾಲ್ ಪಂದ್ಯವಳಿ ಉದ್ಘಾಟಿಸಿ ಮಾರುತಿ ಬೌದ್ಧೆ ಮಾತನಾಡಿದರು.

Share this article