ಶಂಕರಾಚಾರ್ಯರ ಮೋಹ ಮುದ್ಗರ ಕುರಿತು ವಿದುಷಿ ಡಾ.ಕೆ. ಲೀಲಾ ಪ್ರಕಾಶ್ ಪ್ರವಚನ

KannadaprabhaNewsNetwork | Published : Oct 20, 2024 1:52 AM

ಸಾರಾಂಶ

ಸ್ವಾರ್ಥವೇ ರಾರಾಜಿಸುತ್ತಿರುವ ಈ ಪ್ರಪಂಚದಲ್ಲಿ ಶ್ರೀ ಶಂಕರಾಚಾರ್ಯರು ನಿಸ್ವಾರ್ಥತೆಯಿಂದ ಲೋಕಕಲ್ಯಾಣಕ್ಕಾಗಿ ನೀಡಿದ ಅದ್ವೈತ ಸಂದೇಶ ಸಾರ್ವಕಾಲಿಕ ಮಹತ್ವ

ಕನ್ನಡಪ್ರಭ ವಾರ್ತೆ ಮೈಸೂರುಕ್ರಿಸ್ತಶಕ ಎಂಟನೇ ಶತಮಾನದಲ್ಲಿ ಜನಿಸಿ ಅವನತಿಯ ಅಂಚಿನಲ್ಲಿದ್ದ ಸನಾತನ ಧರ್ಮಕ್ಕೆ ಮರುಜೀವ ನೀಡಿದ ಸತ್ ಕೀರ್ತಿ ಸಂಪನ್ನ ಆದಿ ಗುರು ಶ್ರೀ ಶಂಕರಾಚಾರ್ಯರು ಎಂದು ಪ್ರಮತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಎಚ್.ವಿ. ರಾಜೀವ್ ಹೇಳಿದರು.ನಗರದ ಶ್ರೀ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಡಾ.ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಉತ್ತಿಷ್ಟ ಭಾರತ ಪ್ರತಿಷ್ಠಾನ ಸಂಸ್ಥೆಗಳ ಆಶ್ರಯದಲ್ಲಿ ವಿದುಷಿ ಡಾ.ಕೆ. ಲೀಲಾ ಪ್ರಕಾಶ್ ಅವರಿಂದ ಶ್ರೀ ಶಂಕರಾಚಾರ್ಯರ ಮೋಹ ಮುದ್ಗರ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾರ್ಥವೇ ರಾರಾಜಿಸುತ್ತಿರುವ ಈ ಪ್ರಪಂಚದಲ್ಲಿ ಶ್ರೀ ಶಂಕರಾಚಾರ್ಯರು ನಿಸ್ವಾರ್ಥತೆಯಿಂದ ಲೋಕಕಲ್ಯಾಣಕ್ಕಾಗಿ ನೀಡಿದ ಅದ್ವೈತ ಸಂದೇಶ ಸಾರ್ವಕಾಲಿಕ ಮಹತ್ವವನ್ನು ಪಡೆದಿದೆ ಎಂದರು.ಈ ವೇಳೆ ಡಾ. ಲೀಲಾ ಪ್ರಕಾಶ್ ಅವರು ಮೋಹ ಮುದ್ಗರ ಅರ್ಥಾತ್ ಭಜ ಗೋವಿಂದ ಸ್ತೋತ್ರ ಉದ್ಭವಿಸಿದ ಕಥೆಯಿಂದ ಹಿಡಿದು ಈ ಮಾಲಿಕೆಯ 32 ಸ್ತೋತ್ರಗಳ ತಾತ್ಪರ್ಯವನ್ನು ಪ್ರಸ್ತುತಪಡಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಮ ವಾಜಪೇಯಿ ಮಾತನಾಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿಯೂ ಬಸ್ ಸೌಲಭ್ಯ ಕಲ್ಪಿಸಿದ್ದಾಗಿ, ಇದಕ್ಕೆ ಪ್ರೇರಣೆ ಶ್ರೀ ಶಂಕರಾಚಾರ್ಯರು ಎಂದು ಹೇಳಿದರು.ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಇದ್ದರು. ಶ್ರೀ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ.ಪಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಉತ್ತಿಷ್ಠ ಭಾರತ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ವಿ. ನಾಗೇಂದ್ರ ಬಾಬು, ಸಂಚಾಲಕ ಎನ್. ಅನಂತ ಇದ್ದರು. ನಾಗೇಂದ್ರ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶಕ ಕೇಶವ ಪ್ರಕಾಶ್ ಸ್ವಾಗತಿಸಿದರು. ಮುಕ್ತಕ ಕವಿ ಮುತ್ತುಸ್ವಾಮಿ ವಂದಿಸಿದರು.

Share this article