ಮೋದಿ ಆಡಳಿತದ ಕಾಲಘಟ್ಟದಲ್ಲಿ ಭಾರತ ವಿಶ್ವಗುರು ಸ್ಥಾನ

KannadaprabhaNewsNetwork |  
Published : Feb 13, 2024, 12:51 AM IST
ವಿಜಯಪುರದಲ್ಲಿ ಬೂತ್ ಸಂಖ್ಯೆ 247 ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ದೊರಕಿತು. | Kannada Prabha

ಸಾರಾಂಶ

ಅಭಿಯಾನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಅನೇಕ ಜನಪರ, ಅಭಿವೃದ್ಧಿ ಪರ ಯೋಜನೆ ವಿವರಿಸುವ ಕರಪತ್ರಗಳನ್ನು ವಿತರಿಸುವ ಮೂಲಕ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಾಗಠಾಣ ಮತಕ್ಷೇತ್ರದ ನಗರದ ವಾರ್ಡ್ ನಂ.10ರ ವ್ಯಾಪ್ತಿಯ ಬೂತ್ ಸಂಖ್ಯೆ 247 ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ದೊರಕಿತು.

ಅಭಿಯಾನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಅನೇಕ ಜನಪರ, ಅಭಿವೃದ್ಧಿ ಪರ ಯೋಜನೆ ವಿವರಿಸುವ ಕರಪತ್ರಗಳನ್ನು ವಿತರಿಸುವ ಮೂಲಕ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಚಾಲನೆ ನೀಡಿದರು.

ರಾಮ‌ ಮಂದಿರ ಲೋಕಾರ್ಪಣೆ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಮಂಡನೆ, ಕಿಸಾನ್‌ ಸಮ್ಮಾನ ಹೀಗೆ ಅನೇಕ ಯೋಜನೆಗಳ ವಿವರಗಳನ್ನು ಒಳಗೊಂಡಿರುವ ಕರಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಮೇಶ ಕಾರಜೋಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಾಲಘಟ್ಟದಲ್ಲಿ ನಮ್ಮ ಹೆಮ್ಮೆಯ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸುವತ್ತ ಮುನ್ನಡೆದಿದೆ. ಅನೇಕ ಉತ್ತಮ ಯೋಜನೆಗಳ ಮೂಲಕ ದೇಶ ಮುನ್ನಡೆ ಸಾಧಿಸಿದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಮುಖ್ಯವಾಗಿ ನೋಟ್‌ಬ್ಯಾನ್ ಮೂಲಕ ಕಪ್ಪು ಹಣದ ವಿರುದ್ಧ ಪ್ರಬಲ ಸಮರ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿ, ರಾಮ ಮಂದಿರ ಲೋಕಾರ್ಪಣೆ, ರೈತರಿಗೆ ಅಭಯ ತುಂಬುವ ಕಿಸಾನ್‌ ಸಮ್ಮಾನ ಯೋಜನೆ, ಮಹಿಳೆಯರಿಗೆ ರಾಜಕೀಯ ಅದರಲ್ಲೂ ಶಾಸನ ಸಭೆಗಳಲ್ಲಿ ಮುಂಚೂಣಿ ಸ್ಥಾನವನ್ನು ಕಲ್ಪಿಸುವ ಮಸೂದೆ ಮಂಡನೆ ಹೀಗೆ ಮೋದಿಜಿ ಅವರ ಸಾಧನೆ ಪಟ್ಟಿ ದೊಡ್ಡದಿದೆ. ಮೋದಿಜಿ ಅವರ ಸಮರ್ಥ ಆಡಳಿತ, ನಾಯಕತ್ವಕ್ಕೆ ಜಗತ್ತೇ‌ ಮೆಚ್ಚಿದೆ. ಹೀಗಾಗಿ ಈ ಬಾರಿಯೂ ಸಹ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಬೇಕು. ಕಾರ್ಯಕರ್ತರು ಮೋದಿಜಿ ಅವರ ಸಾಧನೆಯನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾಶ್ಯಾಳ, ನಾಗಠಾಣ ಮಂಡಲ ಅಧ್ಯಕ್ಷ ನವೀನ ಅರಕೇರಿ, ಸಂಜೀವ ಐಹೊಳೆ, ಸಂಗಮೇಶ ಹೌದೆ, ಚಿದಾನಂದ ಚಲವಾದಿ, ಸಿದ್ದನಗೌಡ ಬಿರಾದಾರ, ಸಚಿನ ಕುಮಶಿ, ರವಿ ಬಿರಾದಾರ, ರವಿ ಮೂಕಾರ್ತಿಹಾಳ ಮುಂತಾದವರು ಇದ್ದರು.ನೋಟ್‌ಬ್ಯಾನ್ ಮೂಲಕ ಕಪ್ಪು ಹಣದ ವಿರುದ್ಧ ಪ್ರಬಲ ಸಮರ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿ, ರಾಮ ಮಂದಿರ ಲೋಕಾರ್ಪಣೆ, ರೈತರಿಗೆ ಅಭಯ ತುಂಬುವ ಕಿಸಾನ್‌ ಸಮ್ಮಾನ ಯೋಜನೆ, ಮಹಿಳೆಯರಿಗೆ ರಾಜಕೀಯ ಅದರಲ್ಲೂ ಶಾಸನ ಸಭೆಗಳಲ್ಲಿ ಮುಂಚೂಣಿ ಸ್ಥಾನವನ್ನು ಕಲ್ಪಿಸುವ ಮಸೂದೆ ಮಂಡನೆ ಹೀಗೆ ಮೋದಿಜಿ ಅವರ ಸಾಧನೆ ಪಟ್ಟಿ ದೊಡ್ಡದಿದೆ.

-ಉಮೇಶ ಕಾರಜೋಳ,

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.20ರಿಂದ ಕರಾವಳಿ ಉತ್ಸವ: 6 ಬೀಚ್‍ಗಳಲ್ಲಿ ಕಾರ್ಯಕ್ರಮ
ರೈತರಿಗೆ ಭರವಸೆ ಮೂಡಿಸಿದ ಚಳಿ: ತೋಟಗಾರಿಕೆಗೆ ಅನುಕೂಲ