ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಎರಡನೇ ದಿನವಾದ ಗುರುವಾರ ದೇವರಿಗೆ ದರ್ಶನ ಬಲಿ, ಪಲ್ಲ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಬೆಳಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, ನಿತ್ಯ ಪೂಜೆ, ದೇವರ ಬಲಿ ನಡೆಯಿತು.ದೇವಳದ ಟ್ರಸ್ಟಿ, ನಿವೃತ್ತ ಯೋಧ ದಿನೇಶ್ ಗೌಡ ಕಲಾಯಿತೊಟ್ಟು, ಪ್ರಸ್ತುತ ಸೇವೆಯಲ್ಲಿರುವ ಯೋಧರಾದ ಬೇಬಿ ಗೌಡ ಪೇರಾಜೆ, ವಿಕ್ರಂ ಜೆ.ಎನ್. ವಂಜಾರೆ ಹಾಗೂ ಪ್ರಮೋದ್ ಗೌಡ ಬಾಕಿಮಾರು ಅವರ ಸೇವೆಯಾಗಿ ಅನ್ನದಾನ ನಡೆಯಿತು. ಈ ಸಂದರ್ಭ ಅನ್ನದಾನ ಸೇವಾರ್ಥಿಗಳ ಮನೆಯವರು ಉಪಸ್ಥಿತರಿದ್ದರು.ಸಂಜೆ ದೇವರ ಬಲಿ ಹೊರಟು, ಕೆರೆಕಟ್ಟೆ ಉತ್ಸವ, ಮಹಾಪೂಜೆ, ನಿತ್ಯ ಬಲಿ, ದೀಪದ ಬಲಿ ಕಾರ್ಯಕ್ರಮ ಜರುಗಿತು. ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯ ಮಾರ್ಗದರ್ಶನದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ದೇವಳದ ಸಿಬ್ಬಂದಿ, ಜಾತ್ರಾ ಮಹೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.
ರಾತ್ರಿ ನಾಳ ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೇಸರಿ ಗೆಳೆಯರ ಬಳಗದ ಮೋಕೆದ ಕಲಾವಿದೆರ್ ತಂಡದ ಸದಸ್ಯರಿಂದ ತುಳು ಹಾಸ್ಯಮಯ ನಾಟಕ ‘ಕಾಸ್ ದ ಕಸರತ್ತ್’ ನಾಟಕ ನಡೆಯಿತು.ಇಂದು ಚಂದ್ರಮಂಡಲ ಉತ್ಸವ: ಜ.26ರಂದು ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ, ಸಂಜೆ ದೇವರ ಬಲಿ ಹೊರಟು ಚಂದ್ರಮಂಡಲ ಉತ್ಸವ, ಪ್ರಸಾದ ವಿತರಣೆ, ಮಹಾಪೂಜೆ, ದೀಪದ ಬಲಿ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ.
ಧಾರ್ಮಿಕ ಸಭೆ: ಸಂಜೆ 7 ಗಂಟೆಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಹೇಮಂತ ಕುಮಾರ್, ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಮೇದಿನ, ಉದ್ಯಮಿ ಕಿರಣ್ ಚಂದ್ರ, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಸುರೇಂದ್ರ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು, ಬದಿನೆಡೆ ಮಂಜಲಡ್ಕ ಪರಿವಾರ ದೈವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್ ಮತ್ತಿತರರು ಭಾಗವಹಿಸಲಿದ್ದಾರೆ.