(ಕಡ್ಡಾಯ) ವೆಂಕಟೇಶ್ವರ ಸುರಪುರಗೆ ಮುಖ್ಯಮಂತ್ರಿಗಳ ಪದಕ

KannadaprabhaNewsNetwork |  
Published : Jun 16, 2024, 01:48 AM IST
ಬೆಂಗಳೂರಿನಲ್ಲಿ ಗೃಹಮಂತ್ರಿ ಜಿ. ಪರಮೇಶ್ವರ ಅವರು ವೆಂಕಟೇಶ್ವರ್‌ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಗೃಹಮಂತ್ರಿ ಜಿ. ಪರಮೇಶ್ವರ ಅವರು ವೆಂಕಟೇಶ್ವರ್‌ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದರು.

ಬೆಂಗಳೂರಿನ ಅಗ್ನಿಶಾಮಕ ದಳದ ತರಬೇತಿ ಸಮಾರಂಭದಲ್ಲಿ ಗೃಹಮಂತ್ರಿ ಜಿ. ಪರಮೇಶ್ವರ ವಿತರಣೆ

ಕನ್ನಡಪ್ರಭ ವಾರ್ತೆ ಸುರಪುರ

ಸೀನಿಯರ್ ಪ್ಲಟೂನ್ ಕಮಾಂಡರ್, ಗೃಹ ರಕ್ಷಕದಳ, ಸುರಪುರ ಘಟಕದ ವೆಂಕಟೇಶ್ವರ ಡಿ. ಸುರಪುರ ಅವರ ಪ್ರಾಮಾಣಿಕ ಸೇವೆ ಪರಿಗಣಿಸಿ ಬೆಂಗಳೂರಿನ ಜಯನಗರ ಅಗ್ನಿಶಾಮಕ ದಳದ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಗೃಹಮಂತ್ರಿ ಡಾ. ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದರು.

ವೆಂಕಟೇಶ್ವರ ಅವರು 1993 ರಿಂದ ಗೃಹರಕ್ಷಕ ಸಂಸ್ಥೆಗೆ ಸೇರಿ ಪ್ರಸ್ತುತ ಸೀನಿಯರ್ ಪ್ಲಟೂನ್ ಕಮಾಂಡರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಾಂಬ್ ನಿಷ್ಕ್ರಿಯಗೊಳಿಸುವ ತರಬೇತಿ ಹಾಗೂ ಅಧಿಕಾರಿಗಳ ತರಬೇತಿ ಪಡೆದುಕೊಂಡಿದ್ದಾರೆ. ವೃತ್ತಿಪರ ಕ್ರೀಡಾಕೂಟದಲ್ಲಿ ವಾಲಿಬಾಲ್, ಹಗ್ಗ-ಎಳೆತ, ರಿಲೆ, ಕಬಡ್ಡಿ ಮುಂತಾದ ಆಟಗಳಲ್ಲಿ ಗೆದ್ದು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕೃಷ್ಣಾ ನದಿ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಜನರ ಆಸ್ತಿ-ಪಾಸ್ತಿ ಹಾಗೂ ಜಾನುವಾರಗಳನ್ನು ರಕ್ಷಿಸಿದ್ದಾರೆ. ಪಥಸಂಚಲನದ ಪರೇಡ್ ಕಮಾಂಡರಾಗಿ ಕರ್ತವ್ಯ ನಿರ್ವಹಿಸಿದ ಇವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸ್ ಅಧೀಕ್ಷಕರಿಂದ ಪ್ರಶಂಸಾ ಪತ್ರ ಪಡೆದಿದ್ದಾರೆ. ಇವರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರವು 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ. ವೆಂಕಟೇಶ್ವರಗೆ ಮುಖ್ಯಮಂತ್ರಿ ಚಿನ್ನದ ಪದಕ ಬಂದಿದ್ದು, ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!