ದೇಶ ರಕ್ಷಣೆಗಾಗಿ ಸಮರ್ಪಿಸಿಕೊಳ್ಳುವ ಯುವ ಪಡೆ ಬೇಕಾಗಿದೆ

KannadaprabhaNewsNetwork |  
Published : Jun 16, 2024, 01:48 AM IST
ಫೋಟೋ : ೧೫ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ದೇಶಕ್ಕಾಗಿ ಸೈನಿಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಉಚಿತ ಅಗ್ನಿವೀರ ಆರ್ಮಿ ಕೋಚಿಂಗ್ ಆರಂಬಿಸಿದ್ದು, ಈ ತರಬೇತಿ ನಮಗೆ ಸಂತೋಷ ಸಮಾಧಾನ ನೀಡಿದೆಯಲ್ಲದೆ ವಿವಿಧ ಜಿಲ್ಲೆಗಳಿಂದ ಯುವಕರು ಆಗಮಿಸಿ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಸಿದ್ದಲಿಂಗಪ್ಪ ಕಮಡೊಳ್ಳಿ ತಿಳಿಸಿದರು.

ಹಾನಗಲ್ಲ: ದೇಶಕ್ಕಾಗಿ ಸೈನಿಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಉಚಿತ ಅಗ್ನಿವೀರ ಆರ್ಮಿ ಕೋಚಿಂಗ್ ಆರಂಬಿಸಿದ್ದು, ಈ ತರಬೇತಿ ನಮಗೆ ಸಂತೋಷ ಸಮಾಧಾನ ನೀಡಿದೆಯಲ್ಲದೆ ವಿವಿಧ ಜಿಲ್ಲೆಗಳಿಂದ ಯುವಕರು ಆಗಮಿಸಿ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಸಿದ್ದಲಿಂಗಪ್ಪ ಕಮಡೊಳ್ಳಿ ತಿಳಿಸಿದರು.ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಸ್ಥಳೀಯ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ, ಶ್ರೀಗುರು ಕುಮಾರೇಶ್ವರಮಠ ಜೀರ್ಣೋದ್ಧಾರ ಸೇವಾ ಸಮಿತಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ ಉಚಿತ ಅಗ್ನಿವೀರ ಆರ್ಮಿ ಕೋಚಿಂಗ ಒಂದು ತಿಂಗಳ ತರಬೇತಿಯಲ್ಲಿದ್ದ ತರಬೇತಿಯ ಶಿಬಿರಾರ್ಥಿಗಳು ಬೆಳಗಾಲಪೇಟೆಯಿಂದ ಹಾನಗಲ್ಲ ವಿರಕ್ತಮಠದವರೆಗೆ ರಾಷ್ಟ್ರಭಕ್ತಿ ಜಾಗೃತಿ ಜಾಥಾ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ಸಮರ್ಪಿಸಿಕೊಳ್ಳುವ ಯುವ ಪಡೆ ಈಗ ದೇಶಕ್ಕಾಗಿ ಬೇಕಾಗಿದೆ. ಸೈನ್ಯ ಸೇರಲು ಯುವಕರು ಆಸಕ್ತರಾಗಿದ್ದಾರೆ. ಆದರೆ ಅದಕ್ಕಾಗಿ ಇರುವ ಪರೀಕ್ಷೆ ಎದುರಿಸಲು ಸಿದ್ಧರಾಗಬೇಕು. ಅದಕ್ಕಾಗಿ ಈ ತರಬೇತಿ ಆಯೋಜಿಸಲಾಗಿದ್ದು, ಅದರ ಭಾಗವಾಗಿ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ. ಇದು ಅವರ ಬೆಳವಣಿಗೆಗೆ ಪೂರಕವಾದುದು ಎಂದರು.ಅಗ್ನಿವೀರ ಆರ್ಮಿ ಕೋಚಿಂಗ್ ತರಬೇತುದಾರ ನಿವೃತ್ತ ಸೈನಿಕ ಕೆ.ರಾಘವೇಂದ್ರ ಮಾತನಾಡಿ, ದೇಶ ಕಟ್ಟುವುದರಲ್ಲಿ ಸೈನಿಕರು ಹಾಗೂ ರೈತರ ಪಾತ್ರ ಮುಖ್ಯವಾದುದು. ಸೈನಿಕರು ದೇಶ ಕಾಯುವುದೆಂದರೆ ವೈರಿಗಳನ್ನು ಸದೆಬಡಿಯುವ ಸಾಮರ್ಥ್ಯದೊಂದಿಗೆ ಹೋರಾಡಬೇಕಾಗುತ್ತದೆ. ವೈರಿಗಳನ್ನು ಸದೆಬಡಿಯಲು ಸದಾ ಸಿದ್ಧರಾಗಿರಬೇಕಾಗುತ್ತದೆ. ದೇಶಭಕ್ತಿ ಇದ್ದರೆ ಮಾತ್ರ ಇದು ಸಾಧ್ಯ. ನಮ್ಮ ಯುವಕರಲ್ಲಿ ಇಂತಹ ದೇಶಭಕ್ತಿ ಬಿತ್ತುವುದರ ಜೊತೆಗೆ ಈಗ ದುಶ್ಚಟಗಳಿಂದ ದೂರ ಇಡುವ ಕಾರ್ಯ ನಡೆಯಬೇಕಾಗಿದೆ. ೯ ವರ್ಷಗಳಿಂದ ಸೈನಿಕ ತರಬೇತುದಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ರಾಜ್ಯದಲ್ಲಿಯೇ ಬೆಳಗಾಲಪೇಟೆಯಲ್ಲಿ ನಡೆಯುತ್ತಿರುವ ಈ ಉಚಿತ ತರಬೇತಿ ವಿಶೇಷವಾದುದು. ಇಲ್ಲಿ ತೆರಬೇತಿ ಪಡೆಯುತ್ತಿರುವ ಬಹುತೇಕರು ಸೈನ್ಯಕ್ಕೆ ಆಯ್ಕೆಯಾಗುವುದು ಖಚಿತ ಎಂದರು. ಈ ಸಂದರ್ಭದಲ್ಲಿ ಜಯಲಿಂಗಪ್ಪ ಹಳಕೊಪ್ಪದ, ಶಾಂತವೀರ ನೆಲೋಗಲ್ಲ, ಶಿವಮೂರ್ತಿ ಚಿಕ್ಕಮಠ, ಶಿವಣ್ಣ ಶಿಗ್ಗಾವಿ, ಮೌನೇಶ ಮೆಳ್ಳಾಗಟ್ಟಿ, ಮೃತ್ಯುಂಜಯ ಕೋರಿಶೆಟ್ಟರ ಮೊದಲಾವರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ