ಸಾಹಿತ್ಯ ಲೋಕದಲ್ಲಿ ಓದುಗನೇ ಯಜಮಾನ: ವಕೀಲ ರವಿಶಂಕರ್

KannadaprabhaNewsNetwork |  
Published : Nov 10, 2025, 01:30 AM IST
 ಕೆ.ಎ. ರವಿಶಂಕರ್ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಚಟುವಟಿಕೆಗಳೊಂದಿಗೆ ಕೌಶಲ್ಯಯುತ ಬರವಣಿಗೆಯ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಾಗತಿಕ ಸವಾಲುಗಳು ನಿಮ್ಮ ಪ್ರತಿಭೆಯನ್ನು ಹೊರತರುವ ಉತ್ತಮ ಅವಕಾಶವನ್ನು ಒದಗಿಸುತ್ತವೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ನಿಮ್ಮ ಭವಿಷ್ಯ ಬೆಳಗುತ್ತದೆ ಮತ್ತು ಇತರರಿಗೆ ಮಾದರಿಯಾಗುತ್ತೀರಿ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಾಹಿತ್ಯ ಕ್ಷೇತ್ರದಲ್ಲಿ ಪ್ರಕಟವಾಗುವ ಕೃತಿಗಳನ್ನು ಸಂಪೂರ್ಣವಾಗಿ ಓದುಗನು ಅವಲೋಕಿಸುವುದರ ಮೂಲಕ ಸಾಹಿತ್ಯ ಲೋಕದ ಯಜಮಾನನಾಗಿ ಲೇಖಕರಿಗೆ ಪ್ರೇರಣೆ ನೀಡುತ್ತಾನೆ ಎಂದು ಖ್ಯಾತ ವಕೀಲ ಕೆ.ಎ. ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀ ಕೋಡಿಮಠ ಪದವಿ ಪೂರ್ವ ಕಾಲೇಜಿನಲ್ಲಿ, ಖ್ಯಾತ ಲೇಖಕಿ ಪದ್ಮಾಮೂರ್ತಿ ಅವರ ತವರಿನ ಸಿರಿ ಮತ್ತು ಉಡುಗೊರೆ ಎಂಬ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂತರ ಲೇಖಕಿ ಪದ್ಮಾಮೂರ್ತಿ ಮಾತನಾಡಿ, ಅರಸೀಕೆರೆ ಸಾಹಿತ್ಯ, ಕಲೆ ಸೇರಿದಂತೆ ಅನೇಕ ಮಹನೀಯರಿಗೆ ಜನ್ಮ ನೀಡಿದ ಪುಣ್ಯಭೂಮಿಯಾಗಿದೆ. ಈ ಕಾರ್ಯಕ್ರಮದಲ್ಲಿ ನನ್ನ ಕೃತಿಗಳನ್ನು ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಚಟುವಟಿಕೆಗಳೊಂದಿಗೆ ಕೌಶಲ್ಯಯುತ ಬರವಣಿಗೆಯ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಾಗತಿಕ ಸವಾಲುಗಳು ನಿಮ್ಮ ಪ್ರತಿಭೆಯನ್ನು ಹೊರತರುವ ಉತ್ತಮ ಅವಕಾಶವನ್ನು ಒದಗಿಸುತ್ತವೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ನಿಮ್ಮ ಭವಿಷ್ಯ ಬೆಳಗುತ್ತದೆ ಮತ್ತು ಇತರರಿಗೆ ಮಾದರಿಯಾಗುತ್ತೀರಿ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪರಿಷತ್ ಅಧ್ಯಕ್ಷ ಡಾ. ಬಾನಂ ಲೋಕೇಶ್, ಪ್ರತಿಯೊಂದು ಸಾಧನೆಯ ಹಿಂದೆ ಅನೇಕ ಸವಾಲುಗಳು, ಕಷ್ಟಗಳು ಹರಿದಾಡುತ್ತವೆ. ಇವುಗಳನ್ನು ಮೀರಿ ಕಲಿಕೆಗೆ ಮುಂದಾದಾಗ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಶ್ರಮದಿಂದ ಯಶಸ್ಸು ಕಾಣಬಹುದು. ಕವಿಗಳು, ಸಂಗೀತಗಾರರು, ವಚನಕಾರರು ಕನ್ನಡವನ್ನು ಸಾರ್ಥಕವಾಗಿ ಬಳಸಿಕೊಂಡು ಸಾಧನೆ ಮಾಡಿದ್ದಾರೆ. ಸಾಧನೆಯ ಜೊತೆಗೆ ಗುರುಗಳ ಮಾರ್ಗದರ್ಶನ ಇದ್ದಾಗ ಮಾತ್ರ ಗುರಿ ಸಾಧಿಸಬಹುದು. ಯುವ ಬರಹಗಾರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿ ಹೊಸ ಆವಿಷ್ಕಾರಗಳನ್ನು ತರುತ್ತಾರೆ. ವಿದ್ಯಾರ್ಥಿಗಳು ಮಾನವೀಯತೆ ಮತ್ತು ಮೌಲ್ಯಗಳ ಕುರಿತು ನೀತಿಪರ ಕಥೆಗಳುಳ್ಳ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಲೇಖಕಿ ಪದ್ಮಾಮೂರ್ತಿ ಮಾತನಾಡಿ, ತಮ್ಮ ವಿದ್ಯೆ ಮತ್ತು ಕಲಿಕೆಯನ್ನು ಜೊತೆಗೆ ಬೆಳೆಸಿಕೊಂಡು ಬರವಣಿಗೆಯನ್ನು ಅಭ್ಯಾಸ ಮಾಡುತ್ತಿದ್ದರೆ ಉತ್ತಮ ಲೇಖಕರಾಗಬಹುದು. ಮಾನವೀಯವಾಗಿ ಬದುಕಿ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ. ಸಾಹಿತ್ಯದ ಮೂಲಕ ಈ ಕೊಡುಗೆ ಸಾಧ್ಯವಾಗುತ್ತದೆ. ವಾಲ್ಮೀಕಿ, ಪಂಪ, ರನ್ನ, ಪೊನ್ನ, ಜನ್ನ, ಬಸವಣ್ಣರು ಶತಮಾನಗಳ ಹಿಂದೆ ಬದುಕಿದ್ದರೂ ಅವರ ಸಾಹಿತ್ಯ ನಮ್ಮ ಮುಂದೆ ಇಂದು ಜೀವಂತವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ನಮ್ಮ ಮುಂದಿನ ಹೊತ್ತಿಗೆ ಕಟ್ಟುಮೂಲವಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ