ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಾಗರಾಜ ಕುರವತ್ತೇರ ಪುನರಾಯ್ಕೆ

KannadaprabhaNewsNetwork |  
Published : Nov 10, 2025, 01:30 AM IST
9ಎಚ್‌ವಿಆರ್‌1- | Kannada Prabha

ಸಾರಾಂಶ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾವೇರಿ ಜಿಲ್ಲಾ ಘಟಕಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ನಾಗರಾಜ ಕುರುವತ್ತೇರ ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ್‌ ನೇತೃತ್ವದ ಇಡೀ ತಂಡ ಭರ್ಜರಿ ಜಯಭೇರಿ ಬಾರಿಸಿತು.

ಹಾವೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾವೇರಿ ಜಿಲ್ಲಾ ಘಟಕಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ನಾಗರಾಜ ಕುರುವತ್ತೇರ ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ್‌ ನೇತೃತ್ವದ ಇಡೀ ತಂಡ ಭರ್ಜರಿ ಜಯಭೇರಿ ಬಾರಿಸಿತು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮತದಾನ ಚುರುಕಿನಿಂದ ನಡೆದಿದ್ದು, ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ್ದ ಪತ್ರಕರ್ತರು ಉತ್ಸಾಹದಿಂದ ಭಾಗಿಯಾಗಿ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 138 ಮತದಾರರ ಪೈಕಿ 137 ಮತಗಳು ಚಲಾವಣೆಗೊಂಡವು. ಮಧ್ಯಾಹ್ನ 3 ಗಂಟೆ ಬಳಿಕ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ನಾಗರಾಜ ಕುರುವತ್ತೇರ 97 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದರು. ಅವರ ಪ್ರತಿಸ್ಪರ್ಧಿಯಾಗಿದ್ದ ಫಕ್ಕೀರಯ್ಯ ಗಣಾಚಾರಿ 40 ಮತಗಳನ್ನು ಪಡೆದುಕೊಂಡರು. ಅದೇ ರೀತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ವೀರೇಶ ಮಡ್ಲೂರ 91 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ರವಿ ಹೂಗಾರ 45 ಮತಗಳನ್ನು ಪಡೆದುಕೊಂಡರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಪರಸಪ್ಪ ಸತ್ಯಪ್ಪನವರ 90 ಮತಗಳನ್ನು ಪಡೆದು ಗೆಲುವು ತನ್ನದಾಗಿಸಿಕೊಂಡರೆ, ಪ್ರತಿಸ್ಪರ್ಧಿ ಶಿವಯೋಗಿಸ್ವಾಮಿ ಮಹಾನುಭಾವಿಮಠ 46 ಮತಗಳನ್ನು ಪಡೆದರು. ಖಜಾಂಚಿ ಸ್ಥಾನದ ಅಭ್ಯರ್ಥಿ ಬಸವರಾಜ ಮರಳಿಹಳ್ಳಿ 94 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ನಿಂಗಪ್ಪ ಆರೇರ 43 ಮತಗಳನ್ನು ಪಡೆದುಕೊಂಡರು.ಜಿಲ್ಲಾ ಕಾರ್ಯದರ್ಶಿ ಮೂರು ಸ್ಥಾನಗಳಿಗೆ ಒಟ್ಟು ನಾಲ್ಕು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ ಕೇಶವಮೂರ್ತಿ ಬೇಲೂರಪ್ಪನವರ 120 ಮತಗಳು, ಮಂಜುನಾಥ ಗುಡಿಸಾಗರ 104 ಮತಗಳು, ಸಂತೋಷಕುಮಾರ ಮಹಾಂತಶೆಟ್ಟರ 92 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಎಸ್.ಆರ್. ನಂದಿಹಳ್ಳಿ 45 ಮತಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದರು.ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ಒಟ್ಟು 15 ಸ್ಥಾನಗಳು ಆಯ್ಕೆಯಾಗಬೇಕಿದ್ದು, 18 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಇಂದುಧರ ಹಳಕಟ್ಟಿ 115 ಮತಗಳು, ಕರಿಯಪ್ಪ ಚೌಡಕ್ಕನವರ 114, ಕಿರಣ ಮಾಸಣಗಿ 117, ಗಣೇಶ ಅರ್ಕಾಚಾರಿ 118, ಗುರುದತ್ತ ಭಟ್ 117, ಗೋಣೆಪ್ಪ ದೀಪಾವಳಿ 114, ತೇಜಸ್ವಿನಿ ಕಾಶೆಟ್ಟಿ 114, ಪ್ರಶಾಂತ ಮರೆಮ್ಮನವರ 109, ಬಸವರಾಜ ಸರೂರ 107, ಮಂಜುನಾಥ ಯರವಿನತೆಲಿ 100, ರಾಜೇಂದ್ರಕುಮಾರ ರಿತ್ತಿ 124, ವೇದಮೂರ್ತಿ ಎಸ್.ಟಿ 105, ಸದಾಶಿವ ಹಿರೇಮಠ 111, ಸಂಜಯಕುಮಾರ ರಿತ್ತಿ 121, ಹೊನ್ನಪ್ಪ ಬಾರ್ಕಿ 115 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರಭುಗೌಡ ಪಾಟೀಲ 54, ಮಡಿವಾಳಪ್ಪ ಗಡಾದ 54, ಮಲ್ಲಿಕಾರ್ಜುನ ಕೆಂಚರೆಡ್ಡಿ 52 ಮತಗಳನ್ನು ಪಡೆದುಕೊಂಡರು.

ಅವಿರೋಧ ಆಯ್ಕೆ: ಸಂಘದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿಂಗಪ್ಪ ಚಾವಡಿ, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ನಾರಾಯಣ ಹೆಗಡೆ, ನಾಗರಾಜ ಮೈದೂರ, ವಿನಾಯಕ ಹುದ್ದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಯಾಗಿ ವಿಕ್ರಂ ಜಿ. ಕುಲಕರ್ಣಿ ಘೋಷಿಸಿದರು. ವಿಜಯೋತ್ಸವ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವಿಜೇತರಾದ ಎಲ್ಲ ಅಭ್ಯರ್ಥಿಗಳಿಗೆ ಪತ್ರಕರ್ತರು ಸಿಹಿ ತಿನ್ನಿಸಿ, ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ ನಗರದಲ್ಲಿ ಬೈಕ್ ರ‍್ಯಾಲಿ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು.

PREV

Recommended Stories

ಕಟೀಲು ನುಡಿಹಬ್ಬದಲ್ಲಿ ರಂಜಿಸಿದ ಸಿನಿಮಾ ತಾರೆಯರು
ಜಗತ್ತಿನ ಎಲ್ಲಾ ಕ್ರಾಂತಿಗಳಿಗೂ ಬರವಣಿಗೆಯೇ ಪ್ರೇರಣೆ