ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಾರ್ ಕಾರ್ಡ್‌ಗಾಗಿ ಶೇ. 50ಕ್ಕಿಂತ ಹೆಚ್ಚು ನೋಂದಣಿ

KannadaprabhaNewsNetwork |  
Published : Feb 06, 2025, 11:47 PM IST
ಫೋಟೊ | Kannada Prabha

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ದೇಶಾದ್ಯಂತ ಎಲ್ಲ ಶಾಲಾ ಮಕ್ಕಳಿಗೆ 12 ಅಂಕಿಯ ಅಪಾರ್ ಗುರುತಿನ ಚೀಟಿ ವಿತರಿಸುವ ಯೋಜನೆಯನ್ನು ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯ 2024ರ ಜೂನ್‌ನಿಂದ ಆರಂಭಗೊಂಡಿದೆ.

ಜಿ.ಡಿ. ಹೆಗಡೆ

ಕಾರವಾರ: ಕೇಂದ್ರ ಸರ್ಕಾರ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಏಕರೂಪದ ಗುರುತಿನ ಚೀಟಿ ನೀಡಲು ಜಾರಿಗೆ ತಂದಿರುವ ಅಪಾರ್ (ಆಟೋಮೇಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರೆಜಿಸ್ಟ್ರಿ- ಶಾಶ್ವತ ಶೈಕ್ಷಣಿಕ ಖಾತೆ) ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಗತಿಯಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಡಿ ದೇಶಾದ್ಯಂತ ಎಲ್ಲ ಶಾಲಾ ಮಕ್ಕಳಿಗೆ 12 ಅಂಕಿಯ ಅಪಾರ್ ಗುರುತಿನ ಚೀಟಿ ವಿತರಿಸುವ ಯೋಜನೆಯನ್ನು ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯ 2024ರ ಜೂನ್‌ನಿಂದ ಆರಂಭಗೊಂಡಿದೆ.

ವಿದ್ಯಾರ್ಥಿಗಳ ಶಿಕ್ಷಣದ ಅವಧಿಯ ಎಲ್ಲ ದಾಖಲೆಗಳನ್ನು ಒಂದೆಡೆ ಸಂಗ್ರಹಿಸಿಡುವ ನಿಟ್ಟಿನಲ್ಲಿ ಅಪಾರ್ ನೋಂದಣಿ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪಡೆಯಲು ಇದು ಆಧಾರವಾಗಲಿದೆ. ಪ್ರಸ್ತುತ ಕಲಿಯುತ್ತಿರುವ ಶಾಲೆಯಲ್ಲಿ ಆಯಾ ವಿದ್ಯಾರ್ಥಿಯ ಶೈಕ್ಷಣಿಕ ಮಾಹಿತಿ, ಸಾಧನೆಗಳು, ಪಡೆದ ಅಂಕಗಳು, ಪತ್ಯೇತರ ಚಟುವಟಿಕೆ ಸಂಗ್ರಹಿಸಿ ರೆಕಾರ್ಡ್ ಮಾಡಲಾಗುತ್ತದೆ.

ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಯನ್ನು ಸಮಗ್ರವಾಗಿ ಒಂದೇ ಕಡೆ ಪರಿಶೀಲಿಸಲು ಅನುಕೂಲ ಕಲ್ಪಿಸಲಿದೆ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಪ್ರಕ್ರಿಯೆಯನ್ನೂ ಅಪಾರ್ ಸುಲಭಗೊಳಿಸಲಿದೆ. ವಿದ್ಯಾರ್ಥಿಯ ಅಪಾರ್ ಐಡಿ ಬಳಸಿ ಇದನ್ನು ಪರಿಶೀಲಿಸಬಹುದು. ಶಿರಸಿ ಶೈಕ್ಷಣಿಕ ಜಿಲ್ಲೆ: ಹಳಿಯಾಳ ತಾಲೂಕಿನಲ್ಲಿ ಒಟ್ಟು ೩೪೨೨೪ ವಿದ್ಯಾರ್ಥಿಗಳಲ್ಲಿ ೧೯೩೮೨ ವಿದ್ಯಾರ್ಥಿಗಳ ನೋಂದಣಿಯಾಗಿದೆ. ೧೪೬೪೧ ವಿದ್ಯಾರ್ಥಿಗಳ ಬಾಕಿ ಉಳಿದಿದೆ. ಜೋಯಿಡಾದಲ್ಲಿ ಒಟ್ಟು 8323 ವಿದ್ಯಾರ್ಥಿಗಳಲ್ಲಿ 6221 ಸಾಧನೆಯಾಗಿದ್ದು, 2010 ವಿದ್ಯಾರ್ಥಿಗಳ ನೊಂದಣಿಯಾಗಬೇಕಿದೆ.

ಮುಂಡಗೋಡದಲ್ಲಿ ಒಟ್ಟು 18219 ವಿದ್ಯಾರ್ಥಿಗಳಲ್ಲಿ 6212 ಜನರ ನೋಂದಣಿಯಾಗಿದ್ದು, 11978 ಬಾಕಿ ಉಳಿದಿದೆ. ಸಿದ್ದಾಪುರದಲ್ಲಿ ಒಟ್ಟು 13768 ವಿದ್ಯಾರ್ಥಿಗಳಲ್ಲಿ 9046 ಐಡಿಯಾಗಿದ್ದು, 4652 ವಿದ್ಯಾರ್ಥಿಗಳ ಐಡಿ ಆಗುವುದು ಬಾಕಿ ಉಳಿದಿದೆ.

ಶಿರಸಿಯಲ್ಲಿ ಒಟ್ಟು 31629 ವಿದ್ಯಾರ್ಥಿಗಳಲ್ಲಿ 14123 ವಿದ್ಯಾರ್ಥಿಗಳ ನೋಂದಣಿಯಾಗಿದೆ. 17330 ವಿದ್ಯಾರ್ಥಿಗಳದ್ದು ಆಗಬೇಕಿದೆ. ಯಲ್ಲಾಪುರ ತಾಲೂಕಿನಲ್ಲಿರುವ ಒಟ್ಟು 12971ವಿದ್ಯಾರ್ಥಿಗಳಲ್ಲಿ 8555 ವಿದ್ಯಾರ್ಥಿಗಳ ನೋಂದಣಿ ಕಾರ್ಯ ಪೂರ್ಣವಾಗಿದೆ. 4371ವಿದ್ಯಾರ್ಥಿಗಳ ನೋಂದಣಿಯಾಗಬೇಕಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆ: ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 114184 ವಿದ್ಯಾರ್ಥಿಗಳಲ್ಲಿ 72845 ವಿದ್ಯಾರ್ಥಿಗಳ ನೋಂದಣಿಯಾಗಿದೆ. 41109 ವಿದ್ಯಾರ್ಥಿಗಳ ನೋಂದಣಿ ಬಾಕಿಯಿದೆ. ಅಂಕೋಲಾ ತಾಲೂಕಿನಲ್ಲಿ 14696 ವಿದ್ಯಾರ್ಥಿಗಳಲ್ಲಿ 11373 ವಿದ್ಯಾರ್ಥಿಗಳ ನೋಂದಣಿಯಾಗಿದ್ದು, 3308 ವಿದ್ಯಾರ್ಥಿಗಳದ್ದು ಬಾಕಿಯಿದೆ‌.

ಭಟ್ಕಳದಲ್ಲಿ 28951 ವಿದ್ಯಾರ್ಥಿಗಳಲ್ಲಿ 15219 ವಿದ್ಯಾರ್ಥಿಗಳ ನೋಂದಣಿಯಾಗಿದ್ದು, 13684 ಬಾಕಿಯಿದೆ. ಹೊನ್ನಾವರದಲ್ಲಿ 23492 ವಿದ್ಯಾರ್ಥಿಗಳಲ್ಲಿ 14659 ವಿದ್ಯಾರ್ಥಿಗಳ ಐಡಿ ಆಗಿದೆ. 8794 ವಿದ್ಯಾರ್ಥಿಗಳದ್ದು ಪೂರ್ಣಗೊಂಡಿಲ್ಲ. ಕಾರವಾರ ತಾಲೂಕಿನ 21246 ವಿದ್ಯಾರ್ಥಿಗಳಲ್ಲಿ 13398 ವಿದ್ಯಾರ್ಥಿಗಳ ನೋಂದಣಿಯಾಗಿದೆ. 7831 ವಿದ್ಯಾರ್ಥಿಗಳ ನೋಂದಣಿ ಬಾಕಿಯಿದೆ‌. ಕುಮಟಾದಲ್ಲಿ 25799 ವಿದ್ಯಾರ್ಥಿಗಳಲ್ಲಿ 18196 ವಿದ್ಯಾರ್ಥಿಗಳ ಅಪಾರ್ ನೋಂದಣಿಯಾಗಿದೆ. 7528 ಜನರದ್ದು ಬಾಕಿಯಿದೆ.ಫ್ರಿ ಪ್ರೈಮರಿ, ಪ್ರಾಥಮಿಕ, ಅಪ್ಪರ್ ಪ್ರೈಮರಿ, ಸೆಕೆಂಡರಿ, ಹೈಯರ್ ಸೆಕೆಂಡರಿ ಎಂದು ವಿಂಗಡಿಸಲಾಗಿದೆ. ಸರ್ಕಾರಿ,‌ ಅನುದಾನಿತ, ಅನುದಾನ ರಹಿತ ಶಾಲೆಗಳು ಕೂಡಾ ನೋಂದಣಿ‌ ಮಾಡಿಸಬೇಕು. ಕಳೆದ ಎಂಟು ತಿಂಗಳಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಧಿಕಾರಿಗಳ ಪ್ರಯತ್ನದಿಂದ ಉತ್ತಮ ಸಾಧನೆಯಾಗಿದೆ.ಡಿಜಿ ಲಾಕರ್‌: ಅಪಾರ್ ನೋಂದಣಿ ಮಾಡುವಂತೆ ಪ್ರತಿನಿತ್ಯ ಆಯಾ ಶಾಲೆಯ ಮುಖ್ಯಾಧ್ಯಾಪಕರಿಗೆ ಸಂದೇಶ ಕಳಿಸಲಾಗುತ್ತಿದೆ. ಜತೆಗೆ ದಿನದ ಸಾಧನೆಯನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟೂ 119134 ವಿದ್ಯಾರ್ಥಿಗಳಲ್ಲಿ 63539 ವಿದ್ಯಾರ್ಥಿಗಳ ನೊಂದಣಿಯಾಗಿದೆ. ಇದು ಡಿಜಿ ಲಾಕರ್‌ನಲ್ಲಿ ಇಡಲು ಸಹಾಯಕವಾಗಿದೆ. ವಿದ್ಯಾರ್ಥಿಯ ಸಮಗ್ರ ಮಾಹಿತಿ ಲಭ್ಯವಾಗುತ್ತದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ. ಬಸವರಾಜ ತಿಳಿಸಿದರು.ಹಲವೆಡೆ ಸಮಸ್ಯೆ: ಅಪಾರ್ ನೋಂದಣಿಗೆ ಮಕ್ಕಳ ಆಧಾರ್ ಲಿಂಕ್ ಮಾಡಬೇಕಿದೆ. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ ಮಕ್ಕಳು ಇದುವರೆಗೆ ಕೆಲವೆಡೆ ಆಧಾರ್ ಕಾರ್ಡ್ ಹೊಂದಿಲ್ಲ. ಆಧಾರ್ ಕಾರ್ಡ್‌ ಹೆಸರು, ವಿಳಾಸ, ಆಧಾರ್ ಸಂಖ್ಯೆಗಳು ಅಪಾರ್ ನೋಂದಣಿ ವೇಳೆ ಕನಿಷ್ಠ ಶೇ. 80ರಷ್ಟಾದರೂ ಹೊಂದಾಣಿಕೆಯಾಗಬೇಕು. ಆದರೆ ಹಲವು ಮಕ್ಕಳ ಆಧಾರ ಸಂಖ್ಯೆ ಅಪಾರ್ ನೋಂದಣಿ ವೇಳೆ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದ ಕೂಡಾ ಸಮಸ್ಯೆ ಉಂಟಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!