ಚಿತ್ರದುರ್ಗ: ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಈ ಬಾರಿ ಸರಳವಾಗಿ ಆಚರಿಸಲಾಗುವುದು ಫೆಬ್ರವರಿ 11 ರಂದು ನವೀಕೃತ ಸಂಘದ ಕಟ್ಟಡದಲ್ಲಿ ಶ್ರೀ ಗಂಗಾ ಪರಮೇಶ್ವರಿ ಅಮ್ಮನವರ ಶಿಲಾವಿಗ್ರಹ ಪ್ರತಿಷ್ಠಾಪನೆ ಮತ್ತು ಶ್ರೀ ಗಂಗಾಂಬಿಕಾ ಸಮುದಾಯ ಭವನದ ಉದ್ಘಾಟನೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗುವುದೆಂದು ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಅಧ್ಯಕ್ಷ ಹೆಚ್.ಡಿ.ರಂಗಯ್ಯ ಹೇಳಿದರು.
ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯರು ಸಂಘ ಸ್ಥಾಪಿಸಲು 40 ವರ್ಷದಿಂದ ಶ್ರಮಿಸಿದ್ದರು. ಕಳೆದ ಅವದಿಯಲ್ಲಿ ಸಂಘ ದಿವಾಳಿಯಾಗಿತ್ತು. ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎರಡನೆ ಮಹಡಿಯಲ್ಲಿ 8 ರೂಂಗಳನ್ನು ಕಟ್ಟಿದ್ದೆವು. ಸಂಘದ ಕಟ್ಟಡದಿಂದ ರು.1.25 ಲಕ್ಷ ಬಾಡಿಗೆ ಬರುತ್ತಿದೆ. ನವೀಕೃತ ಕಟ್ಟಡ ಉದ್ಘಾಟನೆ ಸಿದ್ದವಾಗಿದೆ. ಸಂಘಕ್ಕೆ ಮರು ಜೀವ ತುಂಬಲು ಈ ಹಿಂದೆ ಇದ್ದ ಸದಸ್ಯರ ಸಂಖ್ಯೆಯನ್ನು 400ಕ್ಕೆ ಹೆಚ್ಚಳ ಮಾಡಿದ್ದೇವೆ ಎಂದರು.ಐದು ತಾಲೂಕು ಸೇರಿದ ಜಿಲ್ಲಾ ಸಂಘ ರಚನೆಯಾಗಿದೆ. ತಾಲೂಕು ಸಮಿತಿ ಮಾಡಲು ಅವಕಾಶ ಕೊಟ್ಟಿದ್ದೇವೆ. ಸಂಘದ ಸ್ಥಳದಲ್ಲಿ 80 ಸಾವಿರ ರು ವೆ್ಚ್ಚದಲ್ಲಿ ಗಂಗಾಪರಮೇಶ್ವರಿ ಅಮ್ಮನವರ ಶಿಲಾ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.ಕಾರ್ಯಕ್ರಮಕ್ಕೆ ಸಚಿವರು, ಜನಪ್ರತಿನಿಧಿಗಳ ಕರೆಯಿಸಿ ಗೌರವಿಸಲಾಗುವುದೆಂದು ರಂಗಯ್ಯ ಹೇಳಿದರು.
ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಸಂಘದ ಅಭಿವೃದ್ಧಿ ಬಗ್ಗೆ ಲೆಕ್ಕಪತ್ರ, ನವೀಕೃತ ಸಂಘದ ಕಟ್ಟಡ ಉದ್ಘಾಟನೆ ಬಗ್ಗೆ ಪಕ್ಷಾತೀತವಾಗಿ ರಾಜಕಾರಣಿಗಳನ್ನು ಆಹ್ವಾನಿಸಿ ಸನ್ಮಾನಿಸುವ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು. ಬೆಸ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಮಸ್ವಾಮಿ ಮಾತನಾಡಿ ಫೆಬ್ರವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾವೇಶ ನಡೆಸಬೇಕು, ಸಂಘದಲ್ಲಿ ದುಡಿದವರಿಗೆ ಸನ್ಮಾನ ಮಾಡಬೇಕು ಎಂದರು. ನಗರಸಭೆ ಮಾಜಿ ಸದಸ್ಯರಾದ ಗಾಡಿ ಮಂಜುನಾಥ್, ಮಹೇಶ್, ಹಿರಿಯರಾದ ಕೆಂಚಪ್ಪ, ತಳಕು ಶಿವಾನಂದ್, ಬೆಸ್ತ ನೌಕರರ ಸಂಘದ ಕಾರ್ಯದರ್ಶಿ ಅಂಜನಮೂರ್ತಿ, ಸಂಘದ ಉಪಾಧ್ಯಕ್ಷ ಕರಿಯಪ್ಪ ,ಭೀಮಸಮುದ್ರದ ಚಂದ್ರು ,ಹಿರಿಯೂರು ತಾಲೂಕು ಅಧ್ಯಕ್ಷ ಗಂಗಾಧರ, ಸಂಘದ ನಿರ್ದೇಶಕ ರವಿಕುಮಾರ ಉಪಾಧ್ಯಕ್ಷ ದೊರೆಸ್ವಾಮಿ, ಖಜಾಂಚಿ ರಂಗಪ್ಪ, ಗೌ.ಅಧ್ಯಕ್ಷ ಸಿ.ಕೆ.ತ್ಯಾಗರಾಜ್, ಹಿರಿಯೂರು ತಾಲೂಕು ಅಧ್ಯಕ್ಷ ಗಂಗಾದರ, ಕೆಇಬಿ ನಿವೃತ್ತ ಜೂನಿಯರ್ ಇಂಜಿನಿಯರ್ ತಿಪ್ಪೇರುದ್ರಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಮೇಶ್, ಶಿವಾನಂದ, ಪತ್ರಕರ್ತ ಎಸ್.ಶ್ರೀನಿವಾಸ ಉಪಸ್ಥಿತರಿದ್ದರು.