ಶೀಘ್ರದಲ್ಲೇ ಕನಕದಾಸ ಸಮುದಾಯ ಭವನ ಲೋಕಾರ್ಪಣೆಗೊಳಿಸಿ

KannadaprabhaNewsNetwork |  
Published : Dec 01, 2024, 01:33 AM IST
ಪೋಟೊ: 30ಎಸ್‌ಎಂಜಿಕೆಪಿ04ಶಿವಮೊಗ್ಗದ ಬಾಲರಾಜ್ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ಆಯೋಜಿಸಿದ್ದ ಸಮುದಾಯ ಭವನದ ಭೂಮಿ ಪೂಜೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೆರವೇರಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಬಾಲರಾಜ್ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ಆಯೋಜಿಸಿದ್ದ ಸಮುದಾಯ ಭವನದ ಭೂಮಿ ಪೂಜೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೆರವೇರಿಸಿದರು.

ಕನ್ನಡಪ್ರಭವಾರ್ತೆ ಶಿವಮೊಗ್ಗ

ಮುಖ್ಯಮಂತ್ರಿಗಳ ಅನುದಾನವೂ ಸೇರಿದಂತೆ ಜನಪ್ರತಿನಿಧಿಗಳ ಅನುದಾನವನ್ನು ಬಳಸಿಕೊಂಡು ಕನಕದಾಸ ಸಮುದಾಯ ಭವನವನ್ನು ವಿಳಂಬ ಮಾಡದೇ ಆದಷ್ಟು ಬೇಗ ಲೋಕಾರ್ಪಣೆ ಮಾಡಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕುರುಬ ಸಮಾಜದ ಮುಖಂಡರಿಗೆ ಮನವಿ ಮಾಡಿದರು.

ಇಲ್ಲಿನ ಬಾಲರಾಜ್ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ಆಯೋಜಿಸಿದ್ದ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿಗಳಿಂದ ₹3.5 ಕೋಟಿ ಹಣವನ್ನು ಕೊಡಿಸುವುದರ ಜೊತೆಗೆ ವೈಯುಕ್ತಿಕವಾಗಿಯೂ ಧನಸಹಾಯ ನೀಡುತ್ತೇನೆ. ಹಾಗೆಯೇ ಸಂಸದರು, ಶಾಸಕರು ಕೂಡ ತಮ್ಮ ಪಾಲಿನ ಅನುದಾನವನ್ನು ನೀಡುತ್ತಾರೆ ಅದೆಲ್ಲವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಯಾವುದೇ ಕೊರತೆಯಿಲ್ಲ. ಸಿಎಂ ಸಿದ್ದರಾಮಯ್ಯನವರು ಎಲ್ಲ ವರ್ಗದ ಜನರಿಗೆ ನೆರವು ನೀಡುತ್ತಾರೆ. ಅವರ ಪಂಚಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿವೆ. 4 ಮುಖ್ಯಮಂತ್ರಿಗಳನ್ನು ನೀಡಿದ ಶಿವಮೊಗ್ಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ ಎಂದರು.

ಮೊದಲ ಬಾರಿಗೆ ರಾಜ್ಯದ ಮಹಾ ನಗರಪಾಲಿಕೆಗಳ ಅಭಿವೃದ್ಧಿಗೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಿದ್ದೇವೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಅಭಿವೃದ್ಧಿಗೂ ಕೂಡ 200 ಕೋಟಿ ರು.ಅನುದಾನ ಬಿಡುಗಡೆಯಾಗಿದೆ ಎಂದರು.

ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿಗಳ ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಇಬ್ಬರು ಕೂಡ ದಾನಿಗಳೇ ಆಗಿದ್ದಾರೆ. ಈ ಇಬ್ಬರು ವೈಯುಕ್ತಿಕವಾಗಿಯೂ ಹಣ ನೀಡುತ್ತಾರೆ. ಶಾಸಕ ಚನ್ನಬಸಪ್ಪನವರು ಕೂಡ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಪಕ್ಷ ಬೇಧ ಮರೆತು ನಾವೆಲ್ಲರು ಸೇರಿ ಅಭಿವೃದ್ಧಿಗೆ ಸಹಕರಿಸೋಣ ಎಂದ ಅವರು, ಕಾರ್ಯಕ್ರಮಕ್ಕೆ ಕೆ.ಎಸ್.ಈಶ್ವರಪ್ಪನವರನ್ನು ಕರೆದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇದೊಂದು ಪುಣ್ಯದ ಕೆಲಸವಾಗಿದೆ. ಈ ಹಿಂದೆ 5 ಕೋಟಿ ಅನುದಾನ ಮಂಜೂರಾಗಿತ್ತು, ಆದರೆ ಕಾರಣಾಂತರದಿಂದ ಅದು ಬಿಡುಗಡೆಯಾಗಿಲ್ಲ. ಅದಕ್ಕಾಗಿ ಕ್ಷಮೆ ಕೇಳುವೆ. ಈಗ ಸಂಸದರ ಅನುದಾನದಿಂದ 50 ಲಕ್ಷ ರು.ಹಣವನ್ನು ನೀಡುತ್ತೇನೆ. ಕುರುಬ ಸಮಾಜಕ್ಕೆ ವಿಶೇಷವಾದ ಗೌರವವಿದೆ. ಹಾಲಿನಂತ ಮನಸ್ಸು ಹಾಲುಮತದದವರದ್ದು, ಎಲ್ಲರೂ ಸೇರಿ ಸಮುದಾಯ ಭವನ ನಿರ್ಮಿಸಿ ಒಳ್ಳೆಯದಾಗಲಿ ಎಂದರು.

ಈ ವೇಳೆ ಡಿ.ಎಸ್.ಅರುಣ್, ಬಲ್ಕಿಷ್‍ಬಾನು, ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪನವರು ಮಾತನಾಡಿ, ತಮ್ಮ ತಮ್ಮ ಪಾಲಿನ ಅನುದಾನವನ್ನು ಸಮುದಾಯ ಭವನಕ್ಕೆ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಡೇ ದೇವರು ಮಠದ ಸ್ವಾಮಿ ಅಮೋಘ ಸಿದ್ದೇಶ್ವರಾನಂದರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್.ಎಂ.ಮಂಜುನಾಥಗೌಡ, ಎಸ್.ಕೆ.ಮರಿಯಪ್ಪ, ಎಚ್.ಎಸ್.ಸುಂದರೇಶ್, ಎಂ.ಶ್ರೀಕಾಂತ್, ಕೆ.ಎಂ.ರಾಮಚಂದ್ರಪ್ಪ, ಎಂ.ವೀರಣ್ಣ, ಕೆ.ರಂಗನಾಥ್, ಡಾ.ಶರತ್ ಮರಿಯಪ್ಪ, ಯೋಗೀಶ್, ರಂಗನಾಥ್, ರೇಖಾ ರಂಗನಾಥ್, ಎಸ್.ಪಿ.ಶೇಷಾದ್ರಿ, ಈಕ್ಕೇರಿ ರಮೇಶ್, ಶ್ರೀನಿವಾಸ್‍ಕರಿಯಣ್ಣ, ನಗರದ ಮಹಾದೇವಪ್ಪ, ಕಬಾಡಿ ರಾಜಣ್ಣ, ಬಿ.ಎಂ.ಸಂತೋಷ್ ಗೋಣಿ ಮಾಲತೇಶ್, ಹಾಲಪ್ಪ, ಮಾಲತೇಶ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ಯಾಕುಮಾರಿಗೆ ಸುರೇಶ್‌ ಕುಮಾರ! ಸೈ‘ಕ್ಲಿಂಗ್‌’!
ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು