ಬಂಕನಾಥ ದೇವಾಲಯದ ಲೋಕಾರ್ಪಣೆ

KannadaprabhaNewsNetwork |  
Published : Jan 02, 2025, 12:32 AM IST
ಪೊಟೋ ಪೈಲ್ ನೇಮ್ ೩೧ಎಸ್‌ಜಿವಿ೨ ತಾಲೂಕಿನ ಬಂಕಾಪುರ ಶ್ರೀ ಬಂಕನಾಥ ನೂತನ ದೇವಾಲಯದ ಲೋಕಾರ್ಪಣೆಯ ಪ್ರಥಮ ಪ್ರಕಟಣೆಯನ್ನು ಹಿರಿಯ ಸಾಹಿತಿಗಳಾದ ಅಂದಾನಸ್ವಾಮಿ ಆದವಾನಿಮಠ ಬಿಡುಗಡೆಗೋಳಿಸಿದರು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಶ್ರೀ ಬಂಕನಾಥ ದೇವಾಲಯದ ಲೋಕಾರ್ಪಣೆ, ಶಿವಲಿಂಗ ಹಾಗೂ ನಂದಿಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣದ ಪ್ರಥಮ ಪ್ರಕಟಣೆಯನ್ನು ಹಿರಿಯ ಸಾಹಿತಿ ಅಂದಾನಸ್ವಾಮಿ ಆದವಾನಿಮಠ ಬಿಡುಗಡೆಗೊಳಿಸಿದರು.

ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ಶ್ರೀ ಬಂಕನಾಥ ದೇವಾಲಯದ ಲೋಕಾರ್ಪಣೆ, ಶಿವಲಿಂಗ ಹಾಗೂ ನಂದಿಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣದ ಪ್ರಥಮ ಪ್ರಕಟಣೆಯನ್ನು ಹಿರಿಯ ಸಾಹಿತಿ ಅಂದಾನಸ್ವಾಮಿ ಆದವಾನಿಮಠ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ರಾಷ್ಟ್ರಕೂಟ ರಾಜಮನೆತನದ ಸಾಮಂತನಾಗಿದ್ದ ಚೆಲ್ಲಕೇತನ ವಂಶದ ಲೋಕಾದಿತ್ಯನು ತನ್ನ ತಂದೆ ಮಹಾಶೂರ, ಧೈರ್ಯಶಾಲಿ ದಂಡನಾಯಕನಾಗಿದ್ದ ಬಂಕೇಯನ ಸ್ಮರಣಾರ್ಥ ಏಕಚಕ್ರನಗರಿ ಎಂದಿದ್ದ ಊರಿಗೆ ಬಂಕಾಪುರ ನಗರ ಎಂದು ನಾಮಕರಣವಾಯಿತು. ಬಂಕಾಪುರದಲ್ಲಿ ಶ್ರೀ ಬಂಕನಾಥ ದೇವಾಲಯ ಕ್ರಿ.ಶ. ೧೦ನೇ ಶತಮಾನದಲ್ಲಿಯೇ ನಿರ್ಮಾಣವಾಗಿದೆ. ಆದರೆ ಅದು ಅವಸಾನದ ಅಂಚಿನಲ್ಲಿತ್ತು. ಅದನ್ನು ಉಳಿಸಬೇಕೆಂಬ ಬಯಕೆ ಯುವಕರಲ್ಲಿ ಮೂಡಿದಾಗ ದೇವಸ್ಥಾನದ ನಿರ್ಮಾಣಕ್ಕೆ ಜಾಗದ ಕೊರತೆ ಉಂಟಾಯಿತು. ಹಳೆಯ ಬಂಕನಾಥ ದೇವಸ್ಥಾನದ ಅಕ್ಕಪಕ್ಕ ಇರುವ ವಕೀಲ ಸಜ್ಜನಗೌಡ್ರ ಅವರ ಜಾಗವನ್ನು ದೇವಸ್ಥಾನ ನಿರ್ಮಾಣಕ್ಕೆಂದು ಕೇಳಿದಾಗ ಅವರು ಬಿಟ್ಟುಕೊಟ್ಟರು. ಹೀಗಾಗಿ ಬಹುವಿಶಾಲವಾದ, ಸುಂದರ ಶ್ರೀ ಬಂಕನಾಥಸ್ವಾಮಿ ದೇವಸ್ಥಾನ ತಲೆಎತ್ತಿ ನಿಲ್ಲುವಂತಾಯಿತು ಎಂದು ಹೇಳಿದರು.

೧೯೩೩ರಲ್ಲಿ ಬಂಕಾಪುರ ಇತಿಹಾಸಕ್ಕೆ ಮೆರಗು ನೀಡುವ ಬಂಕನಾಥಸ್ವಾಮಿ ದೇವಸ್ಥಾನ ನಶಿಸಿಹೋಗುತ್ತಿರುವುದನ್ನು ಅರಿತ ಆಗಿನ ಸಜ್ಜನಗೌಡ್ರ ಮನೆತನದ ಹಿರಿಯರು ತಕ್ಕಮಟ್ಟಿಗೆ ದೇವಸ್ಥಾನವನ್ನು ನಿರ್ಮಾಣ ಮಾಡಿ, ಅದರ ಪೂಜೆಗಾಗಿ ದೇವಸ್ಥಾನದ ಎದುರಿಗೆ ಕಲ್ಯಾಣಿ ನಿರ್ಮಿಸಿ, ಪ್ರತಿದಿನ ಅದರ ಜಲದಿಂದ ಅಭಿಷೇಕ, ಪೂಜೆಯನ್ನು ಮಾಡಿಕೊಂಡು ಬಂದಿದ್ದರು. ಶ್ರೀ ಬಂಕನಾಥ ಸ್ವಾಮಿಯ ಪೂಜೆಗೆಂದು ನಿರ್ಮಿಸಿದ ಫವಿತ್ರ ಕಲ್ಯಾಣಿಯಲ್ಲಿ ಈಗ ಕೊಳಚೆ ನೀರು ತುಂಬಿಕೊಂಡಿದೆ ಎಂದರು.

ಈಗ ನಿರ್ಮಾಣಗೊಂಡ ಬಂಕನಾಥಸ್ವಾಮಿ ದೇವಸ್ಥಾನದ ಲೋಕಾರ್ಪಣೆಯನ್ನು ಫೆ. ೭ರಿಂದ ಫೆ. ೧೦ರ ವರೆಗೆ ವಿಜೃಂಭಣೆಯಿಂದ ಮಾಡಲು ತೀರ್ಮಾನಿಸಲಾಗಿದೆ. ಈ ಒಂದು ಐತಿಹಾಸಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಮಸ್ತ ಬಂಕಾಪುರದ ಜನತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ವಕೀಲ ಜಿ.ಐ. ಸಜ್ಜನಗೌಡ್ರ, ಎಸ್.ಬಿ. ಆದವಾನಿಮಠ, ಸುರೇಶ ಮುರಿಗೆಣ್ಣವರ, ಮಾಲತೇಶ ಕೊಣನಕೇರಿ, ಬಸವರಾಜ ಉಳ್ಳಾಗಡ್ಡಿ, ಚನ್ನಪ್ಪ ಮಾ.ಪ. ಶೆಟ್ಟರ, ಅನಿಲ ಮುರಿಗೆಣ್ಣವರ, ಸಂಗಪ್ಪ ಮುರಿಗೆಣ್ಣವರ, ರೇಣುಕಪ್ಪ ಕೋಟಿಗೌಡ್ರ, ಸದಾನಂದ ಶೆಟ್ಟರ, ಕೆಂಪಯ್ಯ ಆದವಾನಿಮಠ, ಅಭಿಷೇಕ ಛಬ್ಬಿ ಉಪಸ್ಥಿತರಿದ್ದರು.ಕಾರ್ಯಕ್ರಮದ ರೂಪುರೇಷೆ ಹಾಕಿಕೊಳ್ಳಲು ಡಿ. ೩೦ರಂದು ಸಂಜೆ ೬ ಗಂಟೆಗೆ ಶ್ರೀ ಬಂಕನಾಥಸ್ವಾಮಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಮಸ್ತ ಪಟ್ಟಣದ ಜನತೆ ಆಗಮಿಸಿ, ತಮ್ಮ ಸಲಹೆ-ಸೂಚನೆ ನೀಡಬೇಕು ಎಂದು ವಕೀಲ ಜಿ.ಐ. ಸಜ್ಜನಗೌಡ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ