ದೇರಳಕಟ್ಟೆ‌ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ‘ಡಾವಿನ್ಸಿ ರೊಬೊಟಿಕ್ ಸರ್ಜಿಕಲ್ ಸಿಸ್ಟಮ್ ’ ಉದ್ಘಾಟನೆ

KannadaprabhaNewsNetwork |  
Published : Jan 22, 2025, 12:31 AM IST
11 | Kannada Prabha

ಸಾರಾಂಶ

ರೋಬೋಟಿಕ್ ಟೀಮ್ ಸಂಯೋಜಕರಾದ ಡಾ‌.ರಾಜೀವ್ ಟಿ.ಪಿ. ಮಾತನಾಡಿ, ರೊಬೊಟಿಕ್ ಸರ್ಜರಿಯನ್ನು ಕ್ಷೇಮ ಆಸ್ಪತ್ರೆಯಲ್ಲಿ ಅಳವಡಿಸಿ ಒಂದು ತಿಂಗಳಾಗಿದೆ. ಈಗಾಗಲೇ 20 ಸರ್ಜರಿಗಳನ್ನು ಒಂದು ತಿಂಗಳಲ್ಲಿ ಮಾಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ದೇರಳಕಟ್ಟೆ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಮೊದಲ ಮಹಡಿಯ ಆಪರೇಷನ್ ಥಿಯೇಟರ್‌ನಲ್ಲಿ ನೂತನವಾಗಿ ಅಳವಡಿಸಲಾದ ಡಾವಿನ್ಸಿ ರೊಬೊಟಿಕ್ ಸರ್ಜಿಕಲ್ ಸಿಸ್ಟಂನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅವರು‌ ಮಂಗಳವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ. ಶಾಂತರಾಮ ಶೆಟ್ಟಿ ಮಾತನಾಡಿ ,‌ ರೋಬೋಟಿಕ್ ಶಸ್ತ್ರಚಿಕಿತ್ಸೆ ವೈದ್ಯರಿಗೆ ನಿಖರತೆಯೊಂದಿಗೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಇದರಿಂದ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಪ್ರತಿಯೊಂದು ಕ್ಯಾನ್ಸರ್ ಕಣವನ್ನು ನಿಖರವಾಗಿ ತೆಗೆದುಹಾಕಬಹುದು ಎಂದರು. ವೈದ್ಯ ಡಾ. ಶ್ರೀಪಾದ ಜಿ. ಮೆಹಂದಲೆ ಮಾತನಾಡಿ, ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಜಗತ್ತಿನಲ್ಲಿ ಅತ್ಯಂತ ಮುಂದುವರಿದ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನದ ವ್ಯವಸ್ಥೆ ಅಳವಡಿಸಲಾಗಿದೆ. ಮೂತ್ರಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಹೀಗೆ ಅನೇಕ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಈ ತಂತ್ರಜ್ಞಾನದ ಮೂಲಕ ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಲಾಗುತ್ತದೆ ಎಂದರು.ರೋಬೋಟಿಕ್ ಟೀಮ್ ಸಂಯೋಜಕರಾದ ಡಾ‌.ರಾಜೀವ್ ಟಿ.ಪಿ. ಮಾತನಾಡಿ, ರೊಬೊಟಿಕ್ ಸರ್ಜರಿಯನ್ನು ಕ್ಷೇಮ ಆಸ್ಪತ್ರೆಯಲ್ಲಿ ಅಳವಡಿಸಿ ಒಂದು ತಿಂಗಳಾಗಿದೆ. ಈಗಾಗಲೇ 20 ಸರ್ಜರಿಗಳನ್ನು ಒಂದು ತಿಂಗಳಲ್ಲಿ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಹಕುಲಾಧಿಪತಿ(ಆಡಳಿತ) ವಿಶಾಲ್ ಹೆಗ್ಡೆ, ಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ, ಕುಲಸಚಿವ ಪ್ರೊ. ಹರ್ಷ ಹಾಲಹಳ್ಳಿ, ಡೀನ್ ಪ್ರೊ. ಜಯಪ್ರಕಾಶ್ ಶೆಟ್ಟಿ, ಮೆಡಿಕಲ್ ಸುಪರಿಡೆಂಟ್ ಡಾ. ಸುಮಲತಾ ಆರ್. ಶೆಟ್ಟಿ, ರೋಬೋಟಿಕ್ ಟೀಮ್ ಸಂಯೋಜಕರಾದ ಡಾ‌. ರಾಜೀವ್ ಟಿ..ಪಿ, ಸದಸ್ಯರಾದ ಡಾ.ಕೆ.ಆರ್. ಭಗವಾನ್, ಡಾ. ಲಕ್ಷ್ಮೀ ಮಂಜೀರ, ಡಾ. ವಿನಯ್ ಕುಮಾರ್, ಡಾ. ಸಂತೋಷ್ ಕುಮಾರ್, ಡಾ. ಪ್ರವೀಣ್ ಭಟ್, ಡಾ. ಸೂರಜ್ ಹೆಗ್ಡೆ, ಡಾ. ನರೇಂದ್ರ ಪೈ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ