ಕನ್ನಡಪ್ರಭ ವಾರ್ತೆ ನಾಪೋಕ್ಲು
ಈ ಭಾಗದಲ್ಲಿ, ಹಲವು ಕಾಲದಿಂದ ರಾತ್ರಿ ಹೊತ್ತು ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಗಮನಿಸಿ ಪಂಚಾಯಿತಿ ವತಿಯಿಂದ ಮೂರು ಲಕ್ಷ ರು. ವೆಚ್ಚದಲ್ಲಿ 3 ಹೈ ಮಾಸ್ಕ್ ಸೋಲಾರ್ ದೀಪ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ , ಕಾಂಗ್ರೆಸ್ ವಲಯ ಅಧ್ಯಕ್ಷರಾದ ಮಾಚೇಟಿರ ಕುಸು ಕುಶಾಲಪ್ಪ, ಕಾಂಗ್ರೆಸ್ ಪ್ರಮುಖ ಬಿದ್ದಾತಂಡ ತಮ್ಮಯ್ಯ, ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಹೇಮಾ ಅರುಣ್, ಬಿ ಆರ್ ಗಂಗಮ್ಮ ನಾಯಕಂಡ ಕುಞ್ಞಣ್ಣ, ಎಲ್ತಂಡ ಶಾಂತಿ ಸೇರಿದಂತೆ ಇನ್ನಿತರರು ಹಾಜರಿದ್ದರು.