-ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ್ ಉದ್ಘಾಟನೆ
-----ಕನ್ನಡಪ್ರಭ ವಾರ್ತೆ ಸುರಪುರ
ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ನಗರದ ಸರ್ಕಾರಿ ಕನ್ಯಾಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಗುಂಡುಭಟ್ ಜೋಶಿ ತಿಳಿಸಿದ್ದಾರೆ.ಚನ್ನಬಸವ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್, ವಾಮನರಾವ ದೇಶಪಾಂಡೆ, ಶರಣಬಸವ ಯಾಳವಾರ, ಶರಣಬಸ್ಸು ಕಾಕಾ, ಸಂಜೀವರಾವ್ ಕುಲಕರ್ಣಿ, ಅರುಣೋದಯ ಸೊನ್ನದ, ಪ್ರಕಾಶ ಅಂಗಡಿ ಕನ್ನಳ್ಳಿ, ರವಿ ಸೊನ್ನದ, ನಿಕಟಪೂರ್ವ ಅಧ್ಯಕ್ಷ ಯಂಕನಗೌಡ ಪಾಟೀಲ್ ಹಾಗೂ ನೂತನ ಅಧ್ಯಕ್ಷ ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ ಭಾಗವಹಿಸಲಿದ್ದಾರೆ.ಸಾಹಿತಿಗಳಾದ ನಿಂಗನಗೌಡ ದೇಸಾಯಿ, ವಿಠ್ಠಲ ಚವ್ಹಾಣ, ವೀರಣ್ಣ ಕಲಕೇರಿ, ಪಾರ್ವತಿ ಬೂದೂರು, ದೇವಿಂದ್ರಪ್ಪ ಕರಡಕಲ್ ಅವರಿಗೆ ವಿಶೇಷ ಸನ್ಮಾನವಿರಲಿದೆ ಎಂದು ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳು: ಸುಮಿತ್ರಪ್ಪ ಅಂಗಡಿ (ಗೌರವಾಧ್ಯಕ್ಷ), ಮಡಿವಾಳಪ್ಪ ಪಾಟೀಲ್ (ಅಧ್ಯಕ್ಷ), ಗುಂಡು ಭಟ್ಟ ಜೋಶಿ (ಗೌರವ ಕಾರ್ಯದರ್ಶಿ), ಬಂದೇನವಾಜ ನಾಲತವಾಡ (ಕಾರ್ಯದರ್ಶಿ), ವಿಜಯಾಚಾರ್ಯ ಪುರೋಹಿತ (ಕೋಶಾಧ್ಯಕ್ಷ), ಮಲ್ಲನಗೌಡ ಪಾಟೀಲ್ (ಸಹ ಕಾರ್ಯದರ್ಶಿ), ಮಹಿಪಾಲರೆಡ್ಡಿ ಡಿಗ್ಗಾವಿ (ಖಜಾಂಚಿ), ಪಾರ್ವತಿ ಬೂದೂರ (ಮಹಿಳಾ ಪ್ರತಿನಿಧಿ), ರಂಗಪ್ಪ ವಡ್ಡರ್ (ಪ.ಜಾ. ಪ್ರತಿನಿಧಿ), ನಂದಪ್ಪ ಕವಾಲ್ದಾರ (ಪ.ಪಂ. ಪ್ರತಿನಿಧಿ), ಜಟ್ಟೆಪ್ಪ ಪೂಜಾರಿ (ಹಿಂದುಳಿದ ವರ್ಗ ಪ್ರತಿನಿಧಿ), ಇಲಿಯಾಸ ವಡಕೇರಿ (ಅಲ್ಪಸಂಖ್ಯಾತರ ಪ್ರತಿನಿಧಿ), ವೀರೇಂದ್ರ ಧರಿ ಪಿಯು ಕಾಲೇಜು ಪ್ರಾಚಾರ್ಯರು (ಆಡಳಿತಾಧಿಕಾರಿ).