ನಾಳೆಯಿಂದ ಕುರಬಗಟ್ಟಿ ಮಾರುತೇಶ್ವರ ಮಂದಿರದ ಉದ್ಘಾಟನೆ

KannadaprabhaNewsNetwork |  
Published : Feb 07, 2025, 12:31 AM IST

ಸಾರಾಂಶ

ಯರಗಟ್ಟಿ ತಾಲೂಕಿನ ಕುರಬಗಟ್ಟಿ ಗ್ರಾಮದ ಮಾರುತೇಶ್ವರ ಮಂದಿರದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಫೆ.8 ರಿಂದ ಜರಗುವುದು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ತಾಲೂಕಿನ ಕುರಬಗಟ್ಟಿ ಗ್ರಾಮದ ಮಾರುತೇಶ್ವರ ಮಂದಿರದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಫೆ.8 ರಿಂದ ಜರಗುವುದು. ಫೆ.8 ರಂದು ಬೆಳಗ್ಗೆ ಮಾರುತಿ ದೇವರಿಗೆ ಅಭಿಷೇಕ ಮತ್ತು ಗ್ರಾಮದ ದೇವರ ಅಭಿಷೇಕ ಶ್ರೀಧರ ವಿ.ಮುತಾಲಿಕ ದೇಸಾಯಿ ದತ್ತ ಸೇವಕರು ಗೋಕಾಕ ಅವರಿಂದ ಹೋಮ ಹವನ ಪೂಜೆ ಹಾಗೂ ಬೆಳಗ್ಗೆ 8 ಗಂಟೆಗೆ ಬ್ರಹ್ಮದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಸಂತ-ವಾರಕರಿ ಮಂಡಳಿಯರಿಂದ ಗ್ರಂಥರಾಜ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ ಮತ್ತು ವಿಷ್ಟು ಸಹಸ್ರನಾಮ, ಹನುಮಾನ ಚಾಲೀಸ್ ಸಂತ ಮಂಡಳಿಯರಿಂದ ಜರುಗುವುದು. ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಬಾಗೋಜಿಕೊಪ್ಪಅವರಿಂದ ಪ್ರವಚನ, ಸಂತ ಮಂಡಳಿಯವರಿಂದ ಕೀರ್ತನೆ ನಡೆಯುವುದು.

ಫೆ.9ರಂದು ಬೆಳಗ್ಗೆ ಮಾರುತಿ ದೇವರ ಅಭಿಷೇಕ ಮಹಾಪೂಜೆ, ಶಿವ ಭಜನಾ ಕಾರ್ಯಕ್ರಮ ಜರಗುವುದು. ಸಂಜೆ 5 ಗಂಟೆಗೆ ಸದ್ಗುರು ಅಭಿನವ ಬನಸಿದ್ದೇಶ್ವರ ಮಹಾರಾಜರು ಮುಮ್ಮಟಗುಡ್ಡರಕೇರಿ ಅವರಿಂದ ಪ್ರವಚನ ನಡೆಯುತ್ತದೆ. ಫೆ.10 ರಂದು ಬೆಳಗ್ಗೆ ಮಾರುತೇಶ್ವರ ದೇವರ ರುದ್ರಾಭಿಷೇಕ ಆಕಾಶ ಹಿರೇಮಠ ಸ್ವಾಮಿಗಳ ಅಮೃತ ಹಸ್ತದಿಂದ ನೆರವೇರುವುದು. ಸಂಜೆ 5 ಗಂಟೆಗೆ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಿದ್ದಸಿರಿ ಸಿದ್ದಾಶ್ರಮ ಹಣಮಾಪೂರ ಮತ್ತು ಕೌಲಗುಡ್ಡ ಅವರಿಂದ ಪ್ರವಚನ, ರಾತ್ರಿ 9 ಗಂಟೆಗೆ ಶಬ್ಬೀರ್‌ ಡಾಂಗೆ ಅವರಿಂದ ರಸಮಂಜರಿ, ಉದ್ಘಾಟಕರಾಗಿ ಬಿಜೆಪಿ ಮುಖಂಡ ಮಡಿವಾಳಪ್ಪ ಎಂ.ಬಿದರಗಡ್ಡಿ, ಮುಖ್ಯ ಅತಿಥಿಗಳಾಗಿ ಗುರು ವಾಲಿ ಗ್ರಾಮ ಪಂಚಾಯತಿ ಸತ್ತಿಗೇರಿ ಮುಂತಾದವರು ಉಪಸ್ಥಿತರಿರುವರು. ಫೆ.11ರಂದು ಬೆಳಗ್ಗೆ ಮಾರುತೇಶ್ವರ ದೇವರ ಕಾರ್ಯಕ್ರಮಗಳು ನಂತರ ಪರಸ್ಥಳದಿಂದ ಹನುಮಂತ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು ಹಾಗೂ ಕುರಬಗಟ್ಟಿ ಗ್ರಾಮದ ಪಲ್ಲಕ್ಕಿಗಳನ್ನು ಮಾರುತೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ನಂತರ ಸಕಲ ಪಲ್ಲಕ್ಕಿಗಳ ಸಮ್ಮುಖದಲ್ಲಿ ಕಳಸ ಮತ್ತು ಮಾರುತಿ ದೇವರ ಬೆಳ್ಳಿಮೂರ್ತಿ ಹಾಗೂ ವಿವಿಧ ವಾದ್ಯಮೇಳ, ಮಹಿಳೆಯರ ಕುಂಭಮೇಳ ಸಿದ್ಧಾರೂಢ ಮಠದಿಂದ ಮಾರುತಿ ದೇವರ ಗುಡಿಯವರಗೆ ಮೆರವಣಿಗೆ ನಡೆಯುವುದು. ಅಂದು ಸಂಜೆ 5 ಗಂಟೆಗೆ ಮಾಳಿಂಗರಾಯ ಮಹಾರಾಜರು ಹುಲಜಂತಿ ಅವರಿಂದ ಆಶೀರ್ವಚನ. ಸಾನ್ನಿಧ್ಯ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನೇತೃತ್ವ ತ್ರೀವಿಧ ದಾಸೋಹ ಮೂರ್ತಿ ಅಭಿನವ ಸಿದ್ರಾಯ ಅಜ್ಜನವರು ಕಟಕೋಳ, ಸಾನ್ನಿಧ್ಯ ಬೃಹ್ಮಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಗುರು ಗದಿಗಯ್ಯ ಸ್ವಾಮಿಗಳು. ಸಚಿವ ಸತೀಶ ಜಾರಕಿಹೋಳಿ ಉದ್ಘಾಟಿಸುವರು. ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆ ವಹಿಸುವರು. ಮಾಡಮಗೇರಿ ಗ್ರಾಪಂ ಲಕ್ಕಪ್ಪ ಸನ್ನಿಂಗನವರ ಹಾಗೂ ಮುಖ್ಯ ಅಥಿತಿಗಳು ನೀಖಿಲ ದೇಸಾಯಿ ಯರಗಟ್ಟಿ, ಮಲಿಕಸಾಬ ಬಾಗವಾನ, ಮಹಾದೇವಿ ಘಟನಟ್ಟಿ, ರೇಣುಕಾ ಕಾರಬಾರಿ, ಗೋಪಾಲ ದಳವಾಯಿ ಮುಂತಾದವರು ಉಪಸ್ಥಿತರಿರುವರು. ಫೆ.12 ರಂದು ಬೆಳಗ್ಗೆ ದೇವರಿಗೆ ಅಭಿಷೇಕ, ಬೆಳಗ್ಗೆ 10 ಗಂಟೆಗೆ ಮಹಾತ್ಮರಿಂದ ಕಳಸಾರೋಹಣ, ಸಾನ್ನಿಧ್ಯ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ತ್ರೀವಿಧ ದಾಸೋಹ ಮೂರ್ತಿ ಕಟಕೋಳದ ಅಭಿನವ ಸಿದ್ರಾಯಜ್ಜನವರು, ಸಾನ್ನಿಧ್ಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಉದ್ಘಾಟಕರಾಗಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಂಚನಗೌಡ ದ್ಯಾಮನಗೌಡ್ರ, ಅಧ್ಯಕ್ಷತೆಯನ್ನು ಮಾಡಮಗೇರಿ ಗ್ರಾಪಂ ಅಧ್ಯಕ್ಷ ಲಕ್ಕಪ್ಪ ಸನ್ನಿಂಗನವರ, ಜ್ಯೋತಿ ಬೆಳಗಿಸುವವರು.ಮುಖ್ಯ ಅತಿಥಿಗಳಾಗಿ ಸವದತ್ತಿ ಬಿಜೆಪಿ ತಾಲೂಕು ಅಧ್ಯಕ್ಷ ವಿರೋಪಾಕ್ಷ ಮಾಮನಿ, ಸೌರಬ ಚೋಪ್ರಾ, ಮಾಜಿ ಜಿಪಂ ಸದಸ್ಯ ಅಜೀತಕುಮಾರ ದೇಸಾಯಿ, ರತ್ನಾ ಮಾಮನಿ, ಬಸಯ್ಯ ಹಿರೇಮಠ, ಕುಮಾರಿ ರಾಧಿಕಾ ಮಂಜುನಾಥ ಮುಂತಾದವರು ಭಾಗವಹಿಸುವರು. ಅಂದು ರಾತ್ರಿ ನಾಟಕ ರೈತರ ಹುಲಿ ಜರಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ
ಮಂಗ್ಳೂರಿಗೆ 2 ಲಕ್ಷ ಟನ್‌ ಕಚ್ಚಾ ತೈಲ ಹಡಗು ಆಗಮನ