ಗದಗ: ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ ಶುಕ್ರವಾರ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿ ಬಸವರಾಜ ಬೊಮ್ಮಾಯಿ, ಜನ ಸಂಪರ್ಕ ಕಾರ್ಯಾಲಯದ ಸದುಪಯೋಗವನ್ನು ಈ ಭಾಗದ ಜನರು ಉಪಯೋಗಿಸಿಕೊಳ್ಳಬೇಕು. ತಮ್ಮ ಸಮಸ್ಯೆಗಳು ಏನೇ ಇದ್ದರೂ ಕಾರ್ಯಾಲಯದ ಗಮನಕ್ಕೆ ತಂದರೆ ಅತೀ ಶೀಘ್ರದಲ್ಲಿ ಆ ಸಮಸ್ಯೆಗೆ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಉಮೇಶಗೌಡ ಪಾಟೀಲ, ಸಿದ್ದಣ್ಣ ಪಲ್ಲೇದ, ಶ್ರೀಪತಿ ಉಡುಪಿ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಚಂದ್ರಶೇಖರ ತಡಸದ, ನಾಗರಾಜ ತಳವಾರ, ಅನಿಲ ಅಬ್ಬಿಗೇರಿ, ರಮೇಶ ಸಜ್ಜಗಾರ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ನಿರ್ಮಲ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ಶಾರದಾ ಸಜ್ಜನರ, ಪವಿತ್ರಾ ಕಲ್ಲಕುಟ್ಕರ್, ಜ್ಯೋತಿ ಹಾನಗಲ್, ವೀಣಾ, ಅಕ್ಕಮ್ಮ ವಸ್ತ್ರದ, ವಂದನಾ ವರ್ಣೆಕರ್, ಜಯಶ್ರೀ ಅಣ್ಣಿಗೇರಿ, ಯೋಗೇಶ್ವರಿ ಭಾವಿಕಟ್ಟಿ, ರೇಖಾ ಬಂಗಾರಶೇಟ್ಟರ, ಪಾರ್ವತಿ ಪಟ್ಟಣಶೆಟ್ಟಿ, ಸುಮಂಗಲಾ ಕೊಣೆವಾಲ ಮುಂತಾದವರು ಹಾಜರಿದ್ದರು.